Advertisement

17 ಸಿಕ್ಸರ್‌: ಕೌಂಟಿ ಕ್ರಿಕೆಟ್‌ನಲ್ಲಿ ಬೆನ್‌ ಸ್ಟೋಕ್ಸ್‌ ದಾಖಲೆ

11:12 PM May 07, 2022 | Team Udayavani |

ಲಂಡನ್‌: ಇಂಗ್ಲೆಂಡಿನ ಟೆಸ್ಟ್‌ ತಂಡದ ಹೊಸ ನಾಯಕ ಬೆನ್‌ ಸ್ಟೋಕ್ಸ್‌ ಅವರು ಕೌಂಟಿ ಚಾಂಪಿಯನ್‌ಶಿಪ್‌ ಪಂದ್ಯವೊಂದರಲ್ಲಿ 17 ಸಿಕ್ಸರ್‌ ಬಾರಿಸಿ ದಾಖಲೆ ಮಾಡಿದ್ದಾರೆ.

Advertisement

ಡರ್ಹಾಮ್‌ ತಂಡದ ಪರ ಆಡುತ್ತಿರುವ ಸ್ಟೋಕ್ಸ್‌ ವೊಸ್ಟರ್‌ಶೈರ್‌ ತಂಡದ ವಿರುದ್ಧ ಈ ಸಾಧನೆ ಮಾಡಿದರು. 126 ಎಸೆತ ಎದುರಿಸಿದ್ದ ಅವರು 17 ಸಿಕ್ಸರ್‌ ನೆರವಿನಿಂದ 161 ರನ್‌ ಸಿಡಿಸಿದ್ದರು. ಒಂದು ಓವರಿನಲ್ಲಿ 5 ಸಿಕ್ಸರ್‌ ಸಹಿತ ಒಟ್ಟು 17 ಸಿಕ್ಸರ್‌ ಬಾರಿಸಿರುವುದು ಕೌಂಟಿ ಕ್ರಿಕೆಟ್‌ನಲ್ಲಿ ಹೊಸ ದಾಖಲೆಯಾಗಿದೆ.

16 ಸಿಕ್ಸರ್‌: ಇಬ್ಬರು ಸಾಧಕರು
ಈ ಹಿಂದೆ ಪ್ರಥಮ ದರ್ಜೆ ಕೌಂಟಿ ಪಂದ್ಯವೊಂದರಲ್ಲಿ ಇಬ್ಬರು 16 ಸಿಕ್ಸರ್‌ ಬಾರಿಸಿದ ಸಾಧನೆ ಮಾಡಿದ್ದರು. ಗ್ಲೌಸ್ಟರ್‌ಶೈರ್‌ ಪರ ಆಡಿದ್ದ ಆಸ್ಟ್ರೇಲಿಯದ ಆ್ಯಂಡ್ರೊ ಸೈಮಂಡ್ಸ್‌ ಗ್ಲಾಮರ್ಗನ್‌ ವಿರುದ್ಧ 1995ರಲ್ಲಿ ಮತ್ತು ಎಸೆಕ್ಸ್‌ ಪರ ಆಡಿದ್ದ ಗ್ರಹಾಂ ನೇಪಿಯರ್‌ ಸರ್ರೆ ವಿರುದ್ಧ 2011ರಲ್ಲಿ 16 ಸಿಕ್ಸರ್‌ ಬಾರಿಸಿದ್ದರು. ಇದೀಗ ಸ್ಟೋಕ್ಸ್‌ ಈ ದಾಖಲೆ ಮುರಿದಿದ್ದಾರೆ.

64 ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದ್ದ ಸ್ಟೋಕ್ಸ್‌ ಡೇವಿಡ್‌ ಬೆಡಿಂಗಂ (135) ಜತೆ ಐದನೇ ವಿಕೆಟಿಗೆ 220 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡಿದ್ದರು. ಇದು ಡರ್ಹಾಮ್‌ ಆಟಗಾರನೋರ್ವನ ಅತೀವೇಗದ ಶತಕವೂ ಆಗಿದೆ. ಈ ಶತಕದ ವೇಳೆ ಜಾಸ್‌ ಬಾಕರ್‌ ಅವರ ಓವರೊಂದರಲ್ಲಿ ಸ್ಟೋಕ್ಸ್‌ ಸತತ 5 ಸಿಕ್ಸರ್‌ ಬಾರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next