Advertisement

“ಅವ್ನು ಬರ್ತಿದ್ದಾನೆ ಕಣ್ರೋ..”ಇಂದಿನಿಂದ ರಾಜಸ್ಥಾನ ರಾಯಲ್ಸ್ ತಂಡ ಸೇರಲಿರುವ ಬೆನ್ ಸ್ಟೋಕ್ಸ್

02:18 PM Oct 03, 2020 | keerthan |

ದುಬೈ: ಎರಡು ಪಂದ್ಯ ಗೆದ್ದು ಆರ್ ಸಿಬಿ ವಿರುದ್ಧದ ಇಂದಿನ ಮುಖಾಮುಖಿಗೆ ಸಜ್ಜಾಗಿರುವ ರಾಜಸ್ಥಾನ್ ರಾಯಲ್ಸ್ ಗೆ ಆನೆಬಲ ಬಂದಿದೆ. ಕಾರಣ ವಿಶ್ವದರ್ಜೆಯ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಮತ್ತೆ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.

Advertisement

ಹೌದು, ತಂದೆಯ ಅನಾರೋಗ್ಯದ ಕಾರಣದಿಂದ ತವರಾದ ನ್ಯೂಜಿಲ್ಯಾಂಡ್ ಗೆ ಹೋಗಿದ್ದ ಬೆನ್ ಸ್ಟೋಕ್ಸ್ ಐಪಿಎಲ್ ನ ಮೊದಲ ವಾರದ ಪಂದ್ಯಗಳಿಗೆ ತಪ್ಪಿಸಿಕೊಂಡಿದ್ದರು. ಇದೀಗ ಮತ್ತೆ ಐಪಿಎಲ್ ಗಾಗಿ ಯುಎಇ ಗೆ ಹೊರಟಿರುವ ಸ್ಟೋಕ್ಸ್ ಇಂದು ರಾತ್ರಿ ಬಂದಿಳಿಯಲಿದ್ದಾರೆ.

ಯುಎಇ ಗೆ ಬರುವ ಸ್ಟೋಕ್ಸ್ ನಂತರ ಆರು ದಿನಗಳ ಕಾಲ ಕ್ವಾರಂಟೈನ್ ಗೆ ಒಳಗಾಗಲಿದ್ದಾರೆ. ಈ ಸಮಯದಲ್ಲಿ ಅವರಿಗೆ ಕೋವಿಡ್ ಪರೀಕ್ಷೆ ನಡೆಸಲಾಗುತ್ತದೆ. ಕೋವಿಡ್ ನೆಗೆಟಿವ್ ಬಂದ ನಂತರವಷ್ಟೇ ಅವರು ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಇದನ್ನೂ ಓದಿ:ಅಬುಧಾಬಿಯಲ್ಲಿಂದು ರಾಯಲ್‌ ಕಾಳಗ: ವಿರಾಟ್ – ಸ್ಮಿತ್ ಮುಖಾಮುಖಿಯಲ್ಲಿ ಗೆಲುವು ಯಾರಿಗೆ?

ಸದ್ಯದ ಅಂದಾಜಿನ ಪ್ರಕಾರ ಸ್ಟೋಕ್ಸ್ ಅಕ್ಟೋಬರ್ 14ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ ಲಭ್ಯವಾಗಬಹುದು.

Advertisement

ರಾಜಸ್ಥಾನ ರಾಯಲ್ಸ್ ತಂಡ ಸದ್ಯ ನಾಯಕ ಸ್ಮಿತ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್ ಮತ್ತು ಟಾಮ್ ಕರ್ರನ್ ರೊಂದಿಗೆ ಆಡುತ್ತಿದೆ. ಬೆನ್ ಸ್ಟೋಕ್ಸ್ ತಂಡ ಕೂಡಿಕೊಂಡಾಗ ಟಾಮ್ ಕರ್ರನ್ ಜಾಗ ತೆರವು ಮಾಡಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next