Advertisement
ಲೈನ್ ಬಿದ್ದಷ್ಟು ಜಾಗ ಭಸ್ಮವಾಗಿದೆ. ನಾಲ್ಕು ವರ್ಷದ ಹಿಂದೆ ಇದೇ ಮನೆಯ ಕೀರ್ತಿ ಪೂಜಾರಿ (27) ಅವರು ಎಚ್‌ಟಿ ಲೈನ್ ಅವಘಡದಿಂದಾಗಿ ಸಾವನ್ನಪ್ಪಿದ್ದರು. ಜನಸಂಚಾರವಿರುವ ಪರಿಸರದಲ್ಲಿ ವಿದ್ಯುತ್ ಲೈನ್ ಹಾದು ಹೋಗುವುದು ಬೇಡ ಎಂಬ ಒತ್ತಡ ಪರಿಸರವಾಸಿಗಳದ್ದಾಗಿದ್ದರೂ. ಲೈನ್ ಎಳೆದಾಗಿದೆ. ಅಪಾಯ ಸಂಭವಿಸುತ್ತಲೇ ಇದೆ. ಈ ಭಾಗದಲ್ಲಿ ಅಳವಡಿಸಿದ್ದ ವಿದ್ಯುತ್ ಲೈನ್ ಸ್ಥಳಾಂತರಿಸುವಂತೆ ಅನೇಕ ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇವಲ ಎಚ್‌ಟಿ ಲೈನ್ ತುಂಡಾಗಿ ಬಿದ್ದದ್ದಕ್ಕೇ ಇಷ್ಟು ಅನಾಹುತವಾಗಿದೆ. ಇನ್ನು 400 ಕೆವಿ ಪವರ್ ಲೈನ್ ಹಾದುಹೋದರೆ ಹೇಗಾಗುವುದೋ ಎಂಬ ಆತಂಕ ಮೂಡುಬಿದಿರೆ ಪರಿಸರದ ಜನತೆಯಲ್ಲಿ ಮೂಡಿದೆ. ಉಡುಪಿಯಿಂದ ಮೂಡುಬಿದಿರೆಯಾಗಿ ಕೇರಳಕ್ಕೆ ಹಾದುಹೋಗುವ ಪವರ್ ಲೈನ್ ಪ್ರಾಜೆಕ್ಟ್ ಕಾಮಗಾರಿಯನ್ನು ಇದೇ ಕಾರಣಕ್ಕಾಗಿಯೇ ಜನತೆ ವಿರೋಧಿಸುತ್ತಿದ್ದಾರೆ.