ತೆಕ್ಕಟ್ಟೆ : ಜಗತ್ತಿನಾದ್ಯಂತ ಅಪಾಯಕಾರಿ ಮಟ್ಟದಲ್ಲಿ ಹರಡುತ್ತಿರುವ ಕೋವಿಡ್ 19 ವೈರಸ್ ತಡೆಗಟ್ಟಲು ಇಡೀ ದೇಶಾದ್ಯಂತ 21 ದಿನಗಳ ಕಾಲ ಲಾಕ್ ಡೌನ್ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ಸುಮಾರು 200 ಕ್ಕೂ ಅಧಿಕ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ಉಪಹಾರ ಹಾಗೂ ಊಟ ವನ್ನು ನೀಡುವ ಕಾರ್ಯಕ್ಕೆ ಉದ್ಯಮಿ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಮಾ.30 ರಂದು ಚಾಲನೆ ನೀಡುವ ಮೂಲಕ ಮಾನವೀಯತೆ ಮೆರೆದರು.
ಬೇಳೂರು ಗ್ರಾಮದಲ್ಲಿರುವ ಉದ್ಯಮಿಗಳಾದ ಮಹೇಂದ್ರ ಮೊಗವೀರ, ಸುರೇಂದ್ರ ಮೊಗವೀರ, ನಿತ್ಯಾನಂದ ಕೊಠಾರಿ, ಪಡುಮುಂಡು ರತ್ನಾಕರ ಶೆಟ್ಟಿ, ಧನಂಜಯ ಕೊಠಾರಿ ಹಾಗೂ ದೇಲಟ್ಟು ಫ್ರೆಂಡ್ಸ್‌ನ ಸಹಕಾರದೊಂದಿಗೆ ಸುಮಾರು ಬೇಳೂರು, ಮೊಗೆಬೆಟ್ಟು, ದೇಲಟ್ಟು ಪರಿಸರದ ಸುಮಾರು 200 ಮಂದಿ ಬಡ ಕೂಲಿ ಕಾರ್ಮಿಕ ಕುಟುಂಬಗಳಿಗೆ ನಿತ್ಯ ಭೋಜನದ ವ್ಯವಸ್ಥೆಯನ್ನು ಕಲ್ಪಿಸುವ ಮಹತ್ವದ ಕಾರ್ಯದಲ್ಲಿ ಗ್ರಾಮದ ಸಮಾನ ಮನಸ್ಕ ದಾನಿಗಳು ಮುಂದೆ ಬಂದೆ ಬರುವ ಜತೆಗೆ ಗ್ರಾಮದಲ್ಲಿನ ಹಸಿದ ಹೊಟ್ಟೆಗೆ ಅನ್ನ ನೀಡುವ ಮಹತ್ವದ ಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ. ಈ ಸಂದರ್ಭದಲ್ಲಿ ಡಿ.ಸಿ.ಉಮೇಶ್ ಶೆಟ್ಟಿ ದೇಲಟ್ಟು, ರಾಘವೇಂದ್ರ ಶೆಟ್ಟಿ, ಗೌತಮ್ ಶೆಟ್ಟಿ, ರಕ್ಷಿತ್ ಶೆಟ್ಟಿ, ಮಹೇಶ್ ಶೆಟ್ಟಿ ದೇಲಟ್ಟು ಮತ್ತಿತರರು ಸಹಕರಿಸಿದರು.
ಚಿತ್ರ/ ವೀಡಿಯೋ: ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ