ತೆಕ್ಕಟ್ಟೆ: ಮಹಾರಾಷ್ಟ್ರದ ಪುಣೆಯಿಂದ ಆಗಮಿಸಿ ಹೆಬ್ರಿ ಕ್ವಾರಂಟೈನ್‌ನಲ್ಲಿ ಇದ್ದು ಅವಧಿ ಮುಗಿದ ಬಳಿಕ ಮನೆಗೆ ಬಂದ ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಅವರು ಕುಂದಾಪುರ ತಾಲೂಕಿನ ಬೇಳೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕಬೆಟ್ಟು ಅವರ ನಿವಾಸವನ್ನು ಜೂ.6 ರಂದು ಸೀಲ್‌ಡೌನ್ ಮಾಡಲಾಗಿದೆ.
ಕ್ವಾರಂಟೈನ್ ಮುಗಿಸಿ ಬರುವ ಸಮಯದಲ್ಲಿ ಗಂಟಲು ದ್ರವ ಪರೀಕ್ಷೆಯ ವರದಿ ಬಂದಿರಲಿಲ್ಲ ಮನೆಗೆ ಬಂದ ದಿನಗಳ ನಂತರ ವರದಿ ಬಂದಿದ್ದು ಅದರಲ್ಲಿ ಸೋಂಕು ದೃಢಪಟ್ಟಿದೆ ಇದರಿಂದ ವ್ಯಕ್ತಿ ವಾಸವಾಗಿದ್ದ ಮನೆ ಸೀಲ್ ಡೌನ್ ಮಾಡಿದ್ದು , ಸೋಂಕಿತ ವ್ಯಕ್ತಿಯನ್ನು ಕೊವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂ.4 ರಂದು ಸಮೀಪದ ಕೆದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಶಾನಾಡಿ ಬೆಳಗೋಡು ಅವರ ನಿವಾಸ ಸೇರಿದಂತೆ ಒಟ್ಟು ನಾಲ್ಕು ಮನೆಗಳಿಗೆ ಸೀಲ್‌ಡೌನ್ ಮಾಡಲಾಗಿದ್ದು ಇದರಿಂದ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.
ಈ ಸಂದರ್ಭದಲ್ಲಿ ಕೋಟ ಪೊಲೀಸ್ ಠಾಣಾಧಿಕಾರಿ ರಾಜಶೇಖರ್, ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ|ಅರ್ಪಿತಾ, ಕೋಟ ಪೊಲೀಸ್ ಸಿಬಂದಿ ರಾಜು, ಪಿಡಿಒ ಮಾಧವ, ಗ್ರಾಮ ಲೆಕ್ಕಿಗ ಪ್ರಕಾಶ್, ಲೆಕ್ಕ ಸಹಾಯಕ ನಾಗೇಶ್, ಮಹಿಳಾ ಆರೋಗ್ಯ ಸಹಾಯಕಿ ಸುನಂದಾ, ಆಶಾ ಕಾರ್ಯಕರ್ತೆ ಮಂಜುಳಾ ಹಾಗೂ ಮತ್ತಿತರರು ಹಾಜರಿದ್ದರು.
ಚಿತ್ರ : ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ