ಶಿವಮೊಗ್ಗ: ಶಿವಮೊಗ್ಗದಲ್ಲಿ ವಿದ್ಯುತ್ ಕೊರತೆ ತುಂಬಾ ಕಾಡುತ್ತಿದೆ. ರೈತರಿಗೆ ಸಮಸ್ಯೆಯಾಗುತ್ತಿದ್ದು, ಟಿಸಿ ಹೋಗಿದ್ದರೇ ಒಂದು ವಾರವಾದರೂ ಟಿಸಿ ಬದಲಾಯಿಸುವುದಿಲ್ಲ. ಆದರೆ ಶಿಕಾರಿಪುರ ತಾಲೂಕಿನಲ್ಲಿ ಮಾತ್ರ ನಿರಂತರ ವಿದ್ಯುತ್ ಇರುತ್ತದೆ. ಯಡಿಯೂರಪ್ಪ ರಾಜ್ಯಕ್ಕೆ ಮುಖ್ಯಮಂತ್ರಿ. ಕೇವಲ ಶಿಕಾರಿಪುರಕ್ಕೆ ಮಾತ್ರ ಅಲ್ಲ. ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಅದಾಗೆಲ್ಲಾ ಜಿಲ್ಲೆಗೆ ಒಂದಲ್ಲಾ ಒಂದು ತೊಂದರೆಯಾಗುತ್ತದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು ಕರೋನಾ ರೀತಿಯಲ್ಲಿ ಮಂಗನ ಕಾಯಿಲೆ ಜಿಲ್ಲೆಯನ್ನು ಕಾಡುತ್ತಿದೆ. ಅದರೆ ಈವರೆಗೆ ರಾಜ್ಯ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.
ಸೊರಬದಲ್ಲಿದ್ದ ಮಂಗನಕಾಯಿಲೆ ನಮ್ಮ ಸಾಗರಕ್ಕೂ ಬಂದಿದೆ. ಸಾಗರದ ಶಾಸಕರು ಅಲ್ಲಿಂದ ಇಲ್ಲಿಗೆ ಬಂದಿದ್ದಕ್ಕೆ ಮಂಗನ ಕಾಯಿಲೆ ಬಂದಿದೆ ಎಂದುಶಾಸಕ ಹರತಾಳು ಹಾಲಪ್ಪ ವಿರುದ್ದ ಬೇಳೂರು ವ್ಯಂಗ್ಯವಾಡಿದರು.
ಶಿವಮೊಗ್ಗ ಸಂಸದರು ಮಂಕಿ ಪಾರ್ಕ್ ಮಾಡುತ್ತೇವೆ ಎಂದಿದ್ದರು. ಅದರೆ ಈಗ ಅದರ ಬಗ್ಗೆ ಸಂಸದ ರಾಘವೇಂದ್ರ ಮಾತನಾಡುತ್ತಿಲ್ಲ. ಅದಷ್ಟು ಬೇಗ ಮಂಕಿ ಪಾರ್ಕ್ ಮಾಡಿ, ಹಾಲಪ್ಪನ ಇನ್ಚಾರ್ಜ್ ಮಾಡಿ ಎಂದು ಬೇಳೂರು ಗೋಪಾಲಕೃಷ್ಣ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಡಿ ಕೆ ಶಿವಕುಮಾರ್ ಆಯ್ಕೆ ಕುರಿತು ಮಾತನಾಡಿದ ಅವರು, ಮೂರ್ನಾಲ್ಕು ತಿಂಗಳಲ್ಲಿ ರಾಜ್ಯದಲ್ಲಿ ಹೊಸ ಬದಲಾವಣೆ ಅಗುತ್ತದೆ ಎಂದರು.