Advertisement
ಎ. 18ರಂದು ತೋರಣ, ಉಗ್ರಾಣ ಮುಹೂರ್ತ, ವಾಸ್ತು ಹೋಮ, ಸಪ್ತಶುದ್ಧಿ, ಎ. 19ರಂದು ಗಣಪತಿ ಯಾಗ, ಪ್ರತಿಷ್ಠಾ ಪ್ರಧಾನ ಹೋಮ, 108 ಕಲಶಾರಾಧನೆ, ಶ್ರೀ ನೀಲಕಂಠ ಮಹಾ ಬಬ್ಬುಸ್ವಾಮಿ ಸಪರಿವಾರ ದೈವಗಳ ಪುನಃಪ್ರತಿಷ್ಠೆ, ಪ್ರಸನ್ನ ಪೂಜೆ, ದೈವಗಳ ದರ್ಶನ, ಪಲ್ಲ ಪೂಜೆ, ಗಜಕಂಬ ಪ್ರತಿಷ್ಠೆ, ಚಪ್ಪರ ಆರೋಹಣ, ಮಧ್ಯಾಹ್ನ ಮಹಾ ಅನ್ನಸಂತರ್ಪಣೆ, ಸಂಜೆ 4ಕ್ಕೆ ದೈವಸ್ಥಾನದಿಂದ ಭಂಡಾರ ಹೊರಟು ಬೈಲೂರು ಶ್ರೀ ಮಹಿಷಮರ್ದಿನಿ ದೇಗುಲಕ್ಕೆ ಸುತ್ತುವರಿದು ಚಪ್ಪರ ಪೂಜೆ, ರಾತ್ರಿ 9ಕ್ಕೆ ಶ್ರೀ ಬಬ್ಬುಸ್ವಾಮಿ, ತನ್ನಿಮಾನಿಗ ದೇವಿಯ ನೇಮ, ಎ. 20ರಂದು ಪಂಜುರ್ಲಿ ದೈವ, ಶ್ರೀ ಧೂಮಾವತಿ, ಬಂಟ ದೈವ,ಶ್ರೀ ಕೊರಗಜ್ಜ ದೈವಗಳ ನೇಮ ಜರಗಲಿದೆ.
ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸಮೀಪ ಶ್ರೀ ನೀಲಕಂಠ ಬಬ್ಬುಸ್ವಾಮಿ ದೈವಸ್ಥಾನ ಇದ್ದು ಶಿಥಿಲವಾಗಿತ್ತು. ಪ್ರಸ್ತುತ ಈ ದೈವಸ್ಥಾನವನ್ನು ಸಂಪೂರ್ಣ ಪುನರ್ ನಿರ್ಮಾಣ ಮಾಡಲಾಗಿದೆ. ಕಂಬಿಗಾರು, ದೈವರಾಜ, ಕೋಡªಬ್ಬು, ತನ್ನಿಮಾನಿಗ, ಜುಮಾದಿ ಬಂಟ, ಪಂಜುರ್ಲಿ, ಕೊರಗಜ್ಜನ ಸಾನ್ನಿಧ್ಯ ಇಲ್ಲಿದ್ದು, ನಂಬಿದ ಭಕ್ತರ ಸಂಕಷ್ಟಗಳನ್ನು ಪರಿಹರಿಸಿ ಇಷ್ಟಾರ್ಥಗಳನ್ನು ಈಡೇರಿಸಿದ ಹಲವಾರು ಉದಾಹರಣೆಗಳಿವೆ. ದೂರದ ಊರುಗಳಿಂದಲೂ ಭಕ್ತರು ಇಲ್ಲಿಗೆ ಬರುತ್ತಿದ್ದಾರೆ.