ಶಿವಮೊಗ್ಗ: ಪರೇಶ್ ಮೇಸ್ತಾ ಕೇಸ್ ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆದ ಘಟನೆಯನ್ನು ಬಿಜೆಪಿ ದೊಡ್ಡ ಪ್ರಚಾರ ಮಾಡಿತ್ತು. ಆರೇಳು ಜಿಲ್ಲೆಯಲ್ಲಿ ಕಾಂಗ್ರೆಸ್ ಸೋಲುವಂತೆ ಮಾಡಿದ್ದರು. ಆದರೆ ಇದೀಗ ಪರೇಶ್ ಮೇಸ್ತಾ ಕೊಲೆಯಾಗಿದ್ದಲ್ಲ ಎಂದು ಸಿಬಿಐ ರಿಪೋರ್ಟ್ ಕೊಟ್ಟಿದೆ. ಆ ಕೇಸ್ ನಲ್ಲಿ ಶೋಭಾ ಕರಂದ್ಲಾಜೆ, ನಳೀನ್ ಕುಮಾರ್ ಕಟೀಲ್, ಅನಂತ್ ಕುಮಾರ್ ಹೆಗಡೆ, ಈಶ್ವರಪ್ಪ ಸೇರಿ ಈಡೀ ರಾಜ್ಯಕ್ಕೆ ಬೆಂಕಿ ಹಚ್ಚಿದ್ದರು. ಸಿಬಿಐ ರಿಪೋರ್ಟ್ ಗೆ ಇವರೆಲ್ಲಾ ಎನು ಉತ್ತರ ಕೊಡುತ್ತಾರೆ? ಸಾಮೂಹಿಕ ರಾಜೀನಾಮೆ ಕೊಡಬೇಕು ಎಂದು ಮಾಜಿ ಶಾಸಕ ಹಾಗೂ ಕೆಪಿಸಿಸಿ ವಕ್ತಾರ ಬೇಳೂರು ಗೋಪಾಲಕೃಷ್ಣ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಇವರ ಸರ್ಕಾರದ ಅವಧಿಯಲ್ಲಿ ಹರ್ಷ, ಪ್ರವೀಣ್ ನೆಟ್ಟಾರು ಹತ್ಯೆಯಾಗಿದೆ. ಪ್ರವೀಣ್ ನೆಟ್ಟಾರು ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಟ್ಟರು. ಶಿವಮೊಗ್ಗದಲ್ಲಿ ಹರ್ಷನ ಕುಟುಂಬಕ್ಕೆ ಯಾಕೇ ಉದ್ಯೋಗ ಕೊಡಲಿಲ್ಲ? ದಕ್ಷಿಣ ಕನ್ನಡದಲ್ಲಿ ಪೂಜಾರಿ ಸಮುದಾಯದ ವೋಟ್ ಬ್ಯಾಂಕ್ ಬೇಕು ಅದಕ್ಕೆ ಕೊಟ್ಟಿದ್ದಾರೆ. ಇವರದ್ದೇ ಸರ್ಕಾರ ಇದ್ದರೂ ಕೊಲೆ ತಡಿಯಲು ಇವರಿಗೆ ಆಗಲಿಲ್ಲ. ಪಿಎಫ್ಐ ಕಾರ್ಯಕರ್ತರು, ಶಂಕಿತ ಉಗ್ರರನ್ನು ಬಂಧಿಸುವ ಕೆಲಸ ಎಸ್ಪಿ ಮಾಡಿದ್ದರು. ದಕ್ಷ ಎಸ್ಪಿಯನ್ನು ಟ್ರಾನ್ಸಫರ್ ಮಾಡಿ ಬೇರೆ ಎಸ್ಪಿ ತಂದು ಹಾಕಿದ್ದಾರೆ. ಎಸ್ಪಿ ಅವರ ಕ್ರಮದಿಂದ ಶಾಂತಿಯತ್ತ ಶಿವಮೊಗ್ಗದತ್ತ ಸಾಗುತ್ತಿತ್ತು. ಶಿವಮೊಗ್ಗ ಮತ್ತೆ ಹೊತ್ತಿ ಉರಿಯಬೇಕು ಹಾಗಾಗಿ ಎಸ್‌ಪಿ ವರ್ಗಾವಣೆ ಮಾಡಿ ಹೊಸಬರನ್ನು ತಂದಿದ್ದಾರೆ. ರಾಜ್ಯದ ಜನರಿಗೆ ಬಿಜೆಪಿ ನಾಯಕರು ಉತ್ತರ ಕೊಡಬೇಕು. ರಾಜಕೀಯಕೋಸ್ಕರ ರಾಜ್ಯದ ಜನರನ್ನು ಮರಳು ಮಾಡ್ಬೇಡಿ ಎಂದು ಹೇಳಿದರು.
ಸೀಟು ಯಾರು ಕೊಡುತ್ತಾರೆ: ಬಿಜೆಪಿ ನಾಯಕರು ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಮಿಷನ್ 130, ಮಿಷನ್ 140 ಮಿಷನ್ 150 ಎಂದು ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಬಿಎಸ್ ವೈ ಸಿಎಂ ಅಭ್ಯರ್ಥಿ ಆಗಿದ್ದಾಗಲೇ ಬಿಜೆಪಿಗೆ 104 ಸೀಟ್ ಬಂದಿತ್ತು. ಈಗ ಬಿಎಸ್ ವೈ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ. ಯಾರ ಮುಖ ಇಟ್ಕೊಂಡು 150 ಸೀಟ್ ಗೆಲ್ಲುತ್ತಾರೆ. ಯೋಗ್ಯತೆ ಇದೆಯೇ? ಬಿಜೆಪಿ ಸರ್ಕಾರದ ದುರಾಡಳಿತದ ಕಾರಣ ಯಾರು ಇವರಿಗೆ 150 ಸೀಟ್ ಕೊಡುತ್ತಾರೆ ಎಂದರು.
ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಬಗ್ಗೆ ಟೀಕೆ ಮಾಡುತ್ತಾರೆ. ಆದರೆ ನಿಮ್ಮ ಪಕ್ಷದಲ್ಲೇ ಹುಳ ಬಿದ್ದಿದೆ. ಯತ್ನಾಳ್ ಪಿಎಸ್ಐ ಹಗರಣದಲ್ಲಿ ಮಾಜಿ ಸಿಎಂ ಪುತ್ರ ಭಾಗಿಯಾಗಿದ್ದಾರೆ ಎಂದು ಹೇಳಿದ್ದಾರೆ. ಜಿಲ್ಲೆಯ ಉಸ್ತುವಾರಿ ಏನು ಕೆಲಸ ಮಾಡಲು ಬಿಡಲ್ಲ ಎನ್ನುತ್ತಿದ್ದರೆ. ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಮದುವೆಯಾಗಲು ಹೊರಟಿದ್ದಾರೆ. ಈ ವಯಸ್ಸಿನಲ್ಲಿ ಯಾರು ಅವರಿಗೆ ಹೆಣ್ಣು ಕೊಡುತ್ತಾರೆ.? ಮುದುಕರಿಗೆ ಮದುವೆಯಾಗಲು ಆಸೆ ಇರುತ್ತೆ. ಆದರೆ, ಹೆಣ್ಣು ಯಾರು ಕೊಡುತ್ತಾರೆ. ನನಗೆ ಕ್ಲೀನ್ ಚಿಟ್ ಸಿಕ್ಕಿದೆ ಮಂತ್ರಿ ಸ್ಥಾನ ಕೊಡಿಯೆಂದು ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ:ಈ ಎರಡು ಸೀಟ್ ನನ್ನದು.. ಜನ ತುಂಬಿದ ಬಸ್ ನಲ್ಲಿ ಹಾಯಾಗಿ ಮಲಗಿದ ನಾಯಿ; ವಿಡಿಯೋ ವೈರಲ್
ವಾಜಪೇಯಿ ನಿರ್ಮಾಣ ಮಾಡಿದ ರಸ್ತೆಯಲ್ಲಿ ಭಾರತ ಜೋಡೋ ಪಾದಯಾತ್ರೆ ಎಂಬ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕಾಂಗ್ರೆಸ್ ಕಟ್ಟಿಸಿದ ಏರ್ಪೋರ್ಟ್ ರೈಲ್ವೆ ನಿಲ್ದಾಣಗಳಲ್ಲಿ ನೀವು ಸಂಚರಿಸುತ್ತಿಲ್ಲವೇ? ಹಾಗಾದರೆ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಕಾಂಗ್ರೆಸ್ ನವರಿಗೆ ಜೆಡಿಎಸ್ ನವರಿಗೆ ಅವಕಾಶ ಇಲ್ಲ ಎಂದು ಬೋರ್ಡ್ ಹಾಕಿ. ಬಿಜೆಪಿಯ ಯಡಿಯೂರಪ್ಪ, ಈಶ್ವರಪ್ಪ ಮಕ್ಕಳು ಮಾತ್ರ ಓಡಾಡಲಿ. ವಾಜಪೇಯಿ ನಿರ್ಮಿಸಿದ ರಸ್ತೆಯಲ್ಲಿ ಓಡಾಡಬಾರದೇ? ಎಂತಹ ನೀಚ ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ ಎಂದು ಟೀಕಿಸಿದರು.