Advertisement

ಬೇಲೂರು ಅಖಾಡದಲ್ಲಿ ಶಿವರಾಮು ಕದನ

04:05 PM Aug 06, 2022 | Team Udayavani |

ಬೇಲೂರು: ಮೀಸಲು ಕ್ಷೇತ್ರದಿಂದ ಹೊರಬಂದು ಸಾಮಾನ್ಯ ಕ್ಷೇತ್ರವಾದ ಬೇಲೂರು ವಿಧಾನಸಭಾ ಕ್ಷೇತ್ರ ಈಗಾಗಲೇ ಮೂರು ಚುನಾವ ಣೆಗಳನ್ನು ಕಂಡಿದೆ. ಆದರೆ , 2023ರಲ್ಲಿ ನಡೆಯಲಿರುವ 4ನೇ ಚುನಾವಣೆ ಯಲ್ಲಿಈ ಕ್ಷೇತ್ರ ಭಾರೀ ಮಹತ್ವ ಪಡೆಯುವ ಮುನ್ಸೂಚನೆ ಕಾಣುತ್ತಿವೆ.

Advertisement

ಮುಂಬರುವ 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ. ಶಿವರಾಮು ಅವರು ಸ್ಪರ್ಧೆಗಿಳಿಯುವ ಸಿದ್ಧತೆ ಆರಂಭಿಸಿದ್ದಾರೆ. ರುದ್ರೇಶಗೌಡ ಅವರ ಕುಟುಂಬ ದವರು, ವಿಶೇಷವಾಗಿ ರುದ್ರೇಶಗೌಡ ಅವರ ಸಹೋದರ ವೈ. ಎನ್‌.ಕೃಷ್ಣೇಗೌಡ ಅವರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರೂ ಶಿವರಾಮು ಅವರಿಗೆ ಟಿಕೆಟ್‌ ಸಿಗುವುದು ಖಚಿತವಾಗಿದೆ.

ಈಗಾಗಲೇ ಅವರು ಕ್ಷೇತ್ರ ಪ್ರವಾಸ ಹಮ್ಮಿ ಕೊಂಡು ಚುನಾವಣಾ ಸಿದ್ಧತೆ ಆರಂಭಿಸಿದ್ದಾರೆ. ಶಿವರಾಮು ಅವರ ಪ್ರವೇಶದಿಂದ ಕ್ಷೇತ್ರದ ಚುನಾವಣೆ ರೋಚಕವಾಗುವ ಸೂಚನೆಗಳಿವೆ. ಬಿ.ಶಿವರಾಮು ಮತ್ತು ಕೃಷ್ಣೇಗೌಡ ಒಕ್ಕಲಿಗ ಸಮು ದಾಯಕ್ಕೆ ಸೇರಿದವರಾಗಿದ್ದು ಲಿಂಗಯಿತ ಸಮುದಾಯಕ್ಕೆ ಸೇರಿದ ರಾಜಶೇಖರ್‌ ಅವರು ಲಿಂಗಾಯತರ ಕೋಟಾದಲ್ಲಿ ಟೆಕೆಟ್‌ ಪಡೆಯುವ ಯತ್ನ ನಡೆಸಿದ್ದಾರೆ.

ಕೈ ಬಲ ಮಣಿಸಿದ ದಳ: 2008ರ ವಿಧಾನ ಸಭೆ ಚುನಾವಣೆಯಿಂದ ಸಾಮಾನ್ಯ ಕ್ಷೇತ್ರವಾದ ಬೇಲೂರಿನಿಂದ ಮಾಜಿ ಸಂಸದ ವೈ.ಎನ್‌.ರುದ್ರೇಶಗೌಡ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆಗಿಳಿದು ವಿಧಾನಸಭೆ ಪ್ರವೇಶಿಸಿದರು. ಅವರು ಎರಡನೇ ಬಾರಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದು ವಿಜಯಿಯಾದರೂ ಅವಧಿ ಪೂರ್ಣಗೊಳ್ಳುವ ಮೊದಲೇ ನಿಧ ನ ರಾದರು. 2018ರ ಚುನಾವಣೆಯಲ್ಲಿ ರುದ್ರೇಶ ಗೌಡ ಅವರ ಪತ್ನಿ ಕೀರ್ತನಾ ಅವರನ್ನು ಕಾಂಗ್ರೆಸ್‌ ಸ್ಪರ್ಧೆಗಿಳಿಸಿದರೂ ಅವರು ಜೆಡಿಎಸ್‌ ಮತ್ತು ಬಿಜೆಪಿ ಅಭ್ಯರ್ಥಿಗಳಿಗೆ ಸ್ಪರ್ಧೆ ಒಡ್ಡಲಾಗದೆ 3ನೇ ಸ್ಥಾನಕ್ಕೆ ಕುಸಿದರು. ಜೆಡಿಎಸ್‌ ಅಭ್ಯರ್ಥಿ ಕೆ.ಎಸ್‌.ಲಿಂಗೇಶ್‌ ಅವರು ಚುನಾಯಿತರಾದರೆ ತೀವ್ರ ಸ್ಪರ್ಧೆ ಒಡಿದ್ದ ಬಿಜೆಪಿ ಅಭ್ಯರ್ಥಿ ಎಚ್‌. ಕೆ. ಸುರೇಶ್‌ ಅವರು 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಸುರೇಶ್‌ಗೆ ಬಿಜೆಪಿ ಟಿಕೆಟ್‌ ?: ಕಳೆದ ಬಾರಿ ಚುನಾವಣೆ ಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಚ್‌.ಕೆ.ಸುರೇಶ್‌ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈ ಬಾರಿ ಕೂಡ ಟೆಕೆಟ್‌ ತರಲು ಮುಂದಾಗಿ ಕ್ಷೇತ್ರ ವ್ಯಾಪಿ ಕಾರ್ಯಕರ್ತರ ಜೊತೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸುರೇಶ್‌ ಅವರು ಜಿಲ್ಲಾ ಬಿಜೆಪಿ ಅಧ್ಯಕ್ಷರೂ ಆಗಿರುವುದರಿಂದ ಅವರಿಗೆ ಟಿಕೆಟ್‌ ಖಾತರಿ ಎಂದು ಪಕ್ಷದ ಮೂಲಗಳು ಹೇಳುತ್ತಿವೆ. ಆದರೆ ಕಳೆದ ಬಾರಿ ಟಿಕೆಟ್‌ ತರಲು ಮುಂದಾಗಿದ್ದ ಸ್ಥಳೀಯ ನಾಯಕರಾದ ಕೊರಟಿಗೆರೆ ಪ್ರಕಾಶ್‌ ಕೂಡ ತಮ್ಮ ಬೆಂಬಲಿಗರೊಂದಿಗೆ ಕ್ಷೇತ್ರವನ್ನು ಸುತ್ತುತ್ತಿದ್ದು, ಈ ಬಾರಿ ಪಕ್ಷ ನನಗೆ ಟಿಕೆಟ್‌ ನೀಡುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ.

Advertisement

ಜೆಡಿಎಸ್‌ಪಕ್ಷದಲ್ಲಿ ಹಾಲಿ ಶಾಸಕ ಕೆ.ಎಸ್‌.ಲಿಂಗೇಶ್‌ ಅವರಿಗೆ ಪರ್ಯಾಯ ಅಭ್ಯರ್ಥಿ ಇಲ್ಲದಿರುವುದರಿಂದ ಅವರೇ ಜೆಡಿಎಸ್‌ ಅಭ್ಯರ್ಥಿಯಾಗುವುದು ಖಚಿತವಾಗಿದೆ. ಚುನಾವಣೆ ಇನ್ನು ಒಂಬತ್ತು ತಿಂಗಳು ಬಾಕಿಯಿದ್ದು ಸ್ಪರ್ಧಾಕಾಂಕ್ಷಿಗಳು ಮಾತ್ರ ಕ್ಷೇತ್ರವನ್ನು ಎಡಬಿಡದೆ ಸುತ್ತು ತ್ತಿದ್ದು, ಸಭೆ ಸಮಾರಂಭಗಳಲ್ಲಿ ಭಾಗವಹಿಸಿ ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಸಿದ್ದೇಶ್‌ ನಾಗೇಂದ್ರ ಸಂಚಲನ! ಸುರಭಿ ರಘು ಸಕ್ರಿಯ : ಈ ಮಧ್ಯೆ ರಾಜ್ಯ ಒಕ್ಕಲಿಗ ಅಭಿವೃದ್ಧಿ ನಿಗಮದ ನಿರ್ದೇಶಕಿ ಸುರಭಿರಘು ಕ್ಷೇತ್ರದಲ್ಲಿ ಬೀಡುಬಿಟ್ಟು ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇದಲ್ಲದೆ ಉದ್ಯಮಿ ಸಿದ್ದೇಶ್‌ ನಾಗೇಂದ್ರ ಪಕ್ಷದ ಟಿಕೆಟ್‌ ಅಕಾಂಕ್ಷಿಯಾಗಿದ್ದು  ಕ್ಷೇತ್ರದಲ್ಲಿ ನಡೆಯುವ ಹಲವಾರು ಧಾರ್ಮಿಕ ಸಮಾರಂಭ ಕ್ರೀಡೆ ಇನ್ನಿತರೆ ಕಾರ್ಯಗಳಿಗೆ ಸಹಾಯ ಮಾ ಡುವ ಮೂಲಕ ಬೇಲೂರು ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದಾರೆ. ಬಿಜೆಪಿ ಪಕ್ಷದಲ್ಲಿ ಜಾತಿ ಲೆಕ್ಕಚಾರ ನಡೆದರೆ ಬೇಲೂರು ಕ್ಷೇತ್ರದಲ್ಲಿ ಹೆಚ್ಚು ಲಿಂಗಾಯಿತ ಸಮುದಾಯವಿರುವುದರಿಂದ ಪಕ್ಷ ಲಿಂಗಾಯಿತರಿಗೆ ಟಿಕೆಟ್‌ ನೀಡಿದರೆ ಕೊರಟಿಗೆರೆ ಪ್ರಕಾಶ್‌ ಅಥವ ಸಿದ್ದೇಶ್‌ ನಾಗೇಂದ್ರ ಅವರಿಗೆ ಟಿಕೆಟ್‌ ಸಿಗಬಹುದು ಎಂಬುದು ಸಾರ್ವಜನಿಕರ ಚರ್ಚೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next