Advertisement
ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ. ಓರ್ವ ಅಪ್ರಾಪ್ತ ವಯಸ್ಕನಾಗಿದ್ದಾನೆ. ಇಷ್ಟು ಸಂಖ್ಯೆಯ ಸಿಮ್ ಪಡೆದುಕೊಂಡಿರುವುದರ ಹಿಂದೆ ದುರುದ್ದೇಶವಿದೆಯೇ ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ.
ಫೆ. 3ರಂದು ನೆರಿಯ ಗ್ರಾಮದ ತೋಟತ್ತಾಡಿಯಲ್ಲಿ ಐವರು ಅಪರಿಚಿತ ಯುವಕರು ವ್ಯವಹಾರಕ್ಕೆಂದು ಹೇಳಿ ಅಪರಿಮಿತ ಪ್ರಮಾಣದಲ್ಲಿ ಮೊಬೈಲ್ ಸಿಮ್ ಕಾರ್ಡ್‌ಗಳನ್ನು ಖರೀದಿಸಿ ಬೆಂಗಳೂರಿಗೆ ತೆರಳುತ್ತಿರುವ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ಬಂದಿತ್ತು.
Related Articles
Advertisement
ದುಬಾೖಯಲ್ಲಿಬಳಕೆ ಉದ್ದೇಶ?
ಆರೋಪಿಗಳು ಯಾವುದೇ ಸಂಘಟನೆ ಅಥವಾ ಪಕ್ಷದಲ್ಲಿ ಭಾಗಿಯಾಗಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬರುವುದಿಲ್ಲ. ಅವರ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣಗಳು ದಾಖಲಾಗಿರುವುದಿಲ್ಲ. ಆರೋಪಿ ಅಕ್ಬರ್ ದುಬಾೖಯಲ್ಲಿ ಕೆಲಸ ಮಾಡಿಕೊಂಡಿದ್ದು ಅಲ್ಲಿನ ವ್ಯವಹಾರಕ್ಕೆ ಯುಪಿಐ ಐಡಿ ಆ್ಯಕ್ಟಿವೇಟ್ ಮಾಡಲು ದುಬಾೖಗೆ ಕೊಂಡೊಯ್ಯಲು ತನ್ನ ಸ್ನೇಹಿತರ ಮುಖಾಂತರ ಇಲ್ಲಿಂದ ಬೇರೆ ಬೇರೆ ಸಿಮ್ ಕಾರ್ಡ್‌ಗಳನ್ನು ಪಡೆದಿರುವುದಾಗಿ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ದುಬಾೖಯಲ್ಲಿ ಒಂದು ಸಿಮ್ ಕಾರ್ಡ್‌ನಲ್ಲಿ ಕನಿಷ್ಠ 20 ಸಾವಿರ ರೂ. ಮಾತ್ರ ವ್ಯವಹಾರಕ್ಕೆ ಅವಕಾಶ ಇರುವುದರಿಂದ ಹಲವು ಸಿಮ್‌ಗಳನ್ನು ಪಡೆದುಕೊಂಡಿರುವ ಸಾಧ್ಯತೆ ಕಂಡುಬಂದಿದೆ. ಒಬ್ಬನ ಹೆಸರಿನಲ್ಲಿ 9 ಸಿಮ್ ಕಾರ್ಡ್ ಪಡೆಯಲು ಅವಕಾಶ ಇದ್ದು ಎಲ್ಲ ಆರೋಪಿಗಳು ತಮ್ಮ ತಮ್ಮ ಮನೆಯವರ ಹಾಗೂ ಸಂಬಂಧಿಗಳ ಹೆಸರಿನಲ್ಲಿ ಸ್ಥಳೀಯವಾಗಿಯೇ ಸಿಮ್ ಕಾರ್ಡ್ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಆರೋಪಿಗಳ ಕುಟುಂಬದ 10 ಮಂದಿಯ ಆಧಾರ್ ಕಾರ್ಡ್‌ಗಳನ್ನು ನೀಡಿ ನೆರಿಯದ ಎರಡು ಮೊಬೈಲ್ ಅಂಗಡಿಗಳಿಂದ ಕ್ರಮವಾಗಿ 9 ಮತ್ತು 33 ಸಿಮ್ ಕಾರ್ಡ್ ಪಡೆದುಕೊಂಡಿದ್ದಾರೆ.ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.