Advertisement

ಭೂಮಿ ಸಮೃದ್ಧವಾಗಿದ್ದರೆ ಉತ್ತಮ ಪರಿಸರ, ಶುದ್ಧ ಗಾಳಿ: ಆನಂದ

12:37 PM May 01, 2019 | Naveen |

ಬೆಳ್ತಂಗಡಿ: ಭೂಮಿ ಸಮೃದ್ಧ ವಾಗಿದ್ದಾಗ ಮಾತ್ರ ಉತ್ತಮ ಪರಿಸರ, ಶುದ್ಧ ಗಾಳಿ ಸಿಗಲು ಸಾಧ್ಯವಾಗಿದ್ದು, ಈ ನಿಟ್ಟಿನಲ್ಲಿ ಪರಿಸರ ರಕ್ಷಣೆ ನಮ್ಮ ಹೊಣೆ ಯಾಗಬೇಕು. ನಾವು ಶುದ್ಧ ಆಹಾರವನ್ನು ಸೇವಿಸಬೇಕಾದರೂ ಭೂಮಿ ಫಲವತ್ತತೆ ಯಿಂದ ಕೂಡಿರಬೇಕು ಎಂದು ಬೆಳ್ತಂ ಗಡಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಕೆ.ಎಂ. ಆನಂದ ಅವರು ಹೇಳಿದರು.

Advertisement

ಮಂಗಳವಾರ ಇಲ್ಲಿನ ಕೃಷಿ ಇಲಾಖಾ ತರಬೇತಿ ಕೇಂದ್ರದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಬೆಳ್ತಂಗಡಿ, ತೋಟಗಾರಿಕಾ ಇಲಾಖೆ ಬೆಳ್ತಂಗಡಿ ಇದರ ವತಿಯಿಂದ ನಡೆದ ವಿಶ್ವ ಭೂ ದಿನಾಚರಣೆಯನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಮನೋಹರ್‌ ಕುಮಾರ್‌ ಎ. ಮಾತನಾಡಿ, ಪರಿಸರ, ಭೂಮಿಯ ಸಂರಕ್ಷಣೆಯನ್ನು ಪ್ರತಿಯೊಬ್ಬರೂ ತಮ್ಮ ಜೀವನದ ಭಾಗವೆಂದು ತಿಳಿದು ಕಾರ್ಯ ಗತಗೊಳಿಸಬೇಕು. ಕಸ ಎಸೆಯುವಂತಹ ತಪ್ಪನ್ನು ಮಾಡಿದರೂ ಮುಂದಿನ ದಿನ ಗಳಲ್ಲಿ ಭೂಮಿ ಮತ್ತು ಪರಿಸರಕ್ಕೆ ದೊಡ್ಡ ಕಂಟಕ ಎದುರಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.

ಬೆಳ್ತಂಗಡಿ ನ್ಯಾಯಾಲಯದ ಸಹಾಯಕ ಸರಕಾರಿ ಅಭಿಯೋಜಕ ಕಿರಣ್‌ ಕುಮಾರ್‌ ಜಿ.ಕೆ., ಸಹಾಯಕ ತೋಟಗಾರಿಕಾ ಅಧಿಕಾರಿ ಮಹಾವೀರ್‌, ಕಂದಾಯ ಇಲಾಖೆಯ ಪ್ರಥಮದರ್ಜೆ ಸಹಾಯಕ ಶಂಕರ, ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಶೈಲಜಾ ಉಪಸ್ಥಿತರಿದ್ದರು.

ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಶಿವಪ್ರಕಾಶ್‌ ಎಂ. ಸ್ವಾಗತಿಸಿದರು.

Advertisement

ಭೂದಿನದ ವಿಶೇಷತೆ, ವಿಶ್ವ ಭೂದಿನದ ಮಹತ್ವ ಮತ್ತು ಆಚರಣೆ, ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಸಾರ್ವಜನಿಕರಿಗೆ ಸಿಗುವ ಸೌಲಭ್ಯಗಳ ಕುರಿತು ಉಪನ್ಯಾಸ ನೀಡಲಾಯಿತು.

ಭೂಮಿಯ ಸಂರಕ್ಷಣೆ ಕಾರ್ಯವಾಗಲಿ
ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಯದ ಹಿನ್ನೆಲೆಯಲ್ಲಿ ಭೂಮಿ ಕಲುಷಿತಗೊಳ್ಳುತ್ತಿದೆ. 1970ರಲ್ಲೇ ವಿಶ್ವಸಂಸ್ಥೆ ಭೂಮಿ ಕಲುಷಿತವಾಗುತ್ತಿರುವ ಕುರಿತು ಜಾಗೃತಿ ಅಭಿಯಾನ ಕೈಗೊಂಡಿದ್ದು, ಬಳಿಕ ಅದು ಕಾರ್ಯಗತವಾಗದೇ ಇದ್ದಾಗ ಮತ್ತೆ ಎಚ್ಚೆತ್ತುಕೊಂಡು 1993ರಲ್ಲಿ ಮುಂದುವರಿಸಿತ್ತು. ಮರ-ಗಿಡಗಳನ್ನು ಬೆಳೆಸುವ ಮೂಲಕ ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವುದು ಎಲ್ಲರ ಜವಾಬ್ದಾರಿಯಾಗಿದ್ದು, ಎಲ್ಲ ಸರಕಾರಿ ಇಲಾಖೆಗಳು, ಸಂಘ-ಸಂಸ್ಥೆಗಳು ಭೂಮಿಯನ್ನು ಸಂರಕ್ಷಿಸುವ ಕಾರ್ಯ ಮಾಡಬೇಕು.
ಕೆ.ಎಂ. ಆನಂದ,
ಪ್ರಧಾನ ಸಿವಿಲ್ ನ್ಯಾಯಾಧೀಶರು, ಬೆಳ್ತಂಗಡಿ.

Advertisement

Udayavani is now on Telegram. Click here to join our channel and stay updated with the latest news.

Next