Advertisement

Belthangady: ಬಾವಿಗೆ ಬಿದ್ದು ಮಹಿಳೆ ಸಾವು

08:58 PM Oct 14, 2024 | Team Udayavani |

ಬೆಳ್ತಂಗಡಿ: ಆರಂಬೊಡಿ ಗ್ರಾಮದ ಪಿಲಿಕಜೆ ಎನ್ನುವಲ್ಲಿ ಮಹಿಳೆಯೋರ್ವರು ಮನೆಯ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಅ. 14ರಂದು ಸಂಭವಿಸಿದೆ.

Advertisement

ಆರಂಬೊಡಿ ಗ್ರಾಮದ ಪಿಲಿಕಜೆ ಮನೆ ನಿವಾಸಿ ಮಮತಾ (45) ಮೃತ ಮಹಿಳೆ. ಈಕೆಯ ಪತಿ ಶ್ರೀಧರ ಪೂಜಾರಿ ಅವರು ಸುಮಾರು 7 ವರ್ಷಗಳ ಹಿಂದೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಿದ್ದು ಎಡಕೈ ಹಾಗೂ ಎಡಕಾಲಿನ ಸ್ವಾಧೀನತೆ ಕಳೆದುಕೊಂಡು ಮನೆಯಲ್ಲೇ ಇದ್ದರು. ಆ ಬಳಿಕ ಮೃತ ಮಮತಾ ಅವರು ಮಾನಸಿಕ ಖನ್ನತೆಗೆ ಒಳಗಾಗಿದ್ದವರು ಚಿಕಿತ್ಸೆಯಲ್ಲಿ ಇದ್ದರು ಎನ್ನಲಾಗಿದೆ.

ಅ. 13ರಂದು ಬೆಳಗಿನ ಉಪಹಾರದ ಬಳಿಕ ಸುಮಾರು 9.30 ಗಂಟೆಗೆ ಮಮತಾ ಅವರು ಮನೆಯಿಂದ ಕಾಣೆಯಾದವರನ್ನು ಅವರ ಮಕ್ಕಳು ಹಾಗೂ ನೆರೆ-ಹೊರೆಯವರು ಹುಡುಕಾಡಿದಾಗ ಆದಿನ ರಾತ್ರಿಯಾದರೂ ಪತ್ತೆಯಾಗದೆ ಇದ್ದು ಅ. 14 ರಂದು ಬೆಳಗ್ಗೆ 11 ಗಂಟೆಗೆ ಹುಡುಕಾಡಿದಾಗ ಮಮತಾ ಅವರ ಮೃತದೇಹವು ಮನೆಯ ಅಂಗಳದಲ್ಲಿ ಇರುವ ಬಾವಿಯಲ್ಲಿ ಪತ್ತೆಯಾಗಿದೆ. ಪುತ್ರ ಶ್ರೀಕಾಂತ ನೀಡಿದ ದೂರಿನ ಮೇರೆಗೆ ವೇಣೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next