Advertisement

Belthangady: ಮನೆಯ ಬಾವಿಗೆ ಬಿದ್ದು ಮಹಿಳೆ ಸಾವು

11:30 PM Aug 02, 2024 | Team Udayavani |

ಬೆಳ್ತಂಗಡಿ: ನಗರದ ಕೃಷಿ ಇಲಾಖೆಗೆ ಸಂಬಂಧಿಸಿದ ಸೀಡ್‌ ಫಾರ್ಮ್ ರಸ್ತೆಯ ಸಮೀಪದ ಮನೆಯ ಮಹಿಳೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ಆ.2ರಂದು ಸಂಭವಿಸಿದೆ.

Advertisement

ನಿವೃತ್ತ ಬ್ಯಾಂಕ್‌ ಉದ್ಯೋಗಿ ಜೀವಂದರ್‌ ಪಡಿವಾಳ ಅವರ ಪತ್ನಿ ಸುಮಾಲಿನಿ ಜೈನ್‌ (63) ಮೃತಪಟ್ಟವರು. ಮೃತರು ಪತಿ, ಓರ್ವ ಪುತ್ರ, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಸ್ಥಳೀಯ ಆ್ಯಂಬುಲೆನ್ಸ್‌ ಚಾಲಕ ಜಲೀಲ್‌ ಮೃತದೇಹವನ್ನು ಮೇಲಕೆತ್ತಿದರು. ಈ ಬಗ್ಗೆ ಬೆಳ್ತಂಗಡಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next