Advertisement
ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸಂಚಾಲಕ ವೈ.ಕೆ. ಗಣೇಶ್, ಸಹ ಸಂಚಾಲಕರಾದ ಎಸ್.ವೈ. ಗುರುಶಾಂತ್, ಡಾ| ಕೃಷ್ಣಪ್ಪ ಕೊಂಚಾಡಿ, ಬೆಳ್ತಂಗಡಿ ತಾ| ಅಧ್ಯಕ್ಷ ವಸಂತ ನಡ, ಪ್ರ. ಕಾರ್ಯದರ್ಶಿ ಜಯಾನಂದ ಪಿಲಿಕಲ, ಸಂಚಾಲಕ ಶೇಖರ್ ಲಾೖಲ, ಉಪಾಧ್ಯಕ್ಷ ಸದಾಶಿವ ಧರ್ಮಸ್ಥಳ, ಜತೆ ಕಾರ್ಯದರ್ಶಿ ಲಕ್ಷ್ಮಣ ಆಲಂಗಾಯಿ, ಸುಂದರ ಮಲೆಕುಡಿಯ ಕಾಟಾಜೆ, ಸದಸ್ಯರಾದ ನಾರಾಯಣ ಮಲೆಕುಡಿಯ ಆಲಂಗಾಯಿ, ಯೋಗೀಶ್ ಬಾಂಜಾರು, ಕಿರಣ್ ಬಾಂಜಾರು ಭಾಗವಹಿಸಿದ್ದರು.
ಸಭೆಯಲ್ಲಿ ಬೆಳ್ತಂಗಡಿ ತಾಲೂಕಿನ ವಿಟ್ಠಲ್ ಮಲೆಕುಡಿಯ ಪ್ರಕರಣ ವಾಪಸ್, ಸುಂದರ ಮಲೆಕುಡಿಯ ಪ್ರಕರಣದಲ್ಲಿ ಪ. ಜಾತಿ/ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ ಸೇರ್ಪಡೆ, ಜಮೀನಿನ ಹಕ್ಕುಪತ್ರ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ರಸ್ತೆ, ವಿದ್ಯುತ್ ಸಂಪರ್ಕ, ಬಾಂಜಾರು ಮಲೆಕುಡಿಯ ಕಾಲನಿಗೆ ಪರ್ಯಾಯ ರಸ್ತೆ, ಆಶ್ರಮ ಶಾಲೆಗಳ ಉನ್ನತೀಕರಣ, ಅಧ್ಯಾಪಕ, ಸಿಬಂದಿಯ ಖಾಯಂ, ಉಚಿತ ನರ್ಸಿಂಗ್ ತರಬೇತಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಮೊದಲಾದ 27 ಬೇಡಿಕೆಗಳ ಈಡೇರಿಕೆಗೆ ಚರ್ಚೆ ನಡೆಸಲಾಗಿದೆ.