Advertisement

Belthangady ದ್ವಿಚಕ್ರವಾಹನ ಮಗುಚಿ ಬಿದ್ದು ಮಹಿಳೆಗೆ ಗಂಭೀರ ಗಾಯ

01:28 AM Feb 25, 2024 | Team Udayavani |

ಬೆಳ್ತಂಗಡಿ: ತೋಟತ್ತಾಡಿ ಗ್ರಾಮದ ಮೂರ್ಜೆಯಲ್ಲಿ ದ್ವಿಚಕ್ರವಾಹನವು ನಿಯಂತ್ರಣ ತಪ್ಪಿ ಮಗುಚಿ ಬಿದ್ದು ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಫೆ. 23ರಂದು ಸಂಭವಿಸಿದೆ.

Advertisement

ನಾವೂರು ಗ್ರಾಮದ ನಿವಾಸಿ ಸಂಜೀವ ಅವರ ಪತ್ನಿ ಕಮಲಾ (45) ಗಾಯಗೊಂಡವರು. ಅವರು ಸಂತೋಷ್‌ ಎಂಬವರು ಚಲಾಯಿಸುತ್ತಿದ್ದ ದ್ವಿಚಕ್ರವಾಹನದಲ್ಲಿ ಸಹ ಸವಾರೆಯಾಗಿ ಪ್ರಯಾಣಿಸುತ್ತಿದ್ದಾಗ ವಾಹನವು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿದೆ.

ಗಾಯಾಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂತೋಷ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next