Advertisement

Belthangady ಚಾರ್ಮಾಡಿಯತ್ತ ಒಂಟಿ ಸಲಗದ ಸಂಚಾರ

11:25 PM Nov 11, 2023 | Team Udayavani |

ಬೆಳ್ತಂಗಡಿ: ನಾವೂರಿನಲ್ಲಿ ಶುಕ್ರವಾರ ಸಂಜೆ ಕಂಡುಬಂದಿದ್ದ ಒಂಟಿ ಸಲಗವು ಸುಮಾರು 15 ಕಿ.ಮೀ.ಗಿಂತ ಅಧಿಕ ಪ್ರದೇಶದಲ್ಲಿ ಸಂಚರಿಸಿ ಶನಿವಾರ ಸಂಜೆಯ ವೇಳೆಗೆ ಚಾರ್ಮಾಡಿ-ಕನಪಾಡಿ ಅರಣ್ಯದತ್ತ ಸಾಗಿದೆ.

Advertisement

ಒಂಟಿ ಸಲಗವು ಇಂದಬೆಟ್ಟು ಮೈಂದಡ್ಕ, ಬಲ್ಲಾಳಬೆಟ್ಟು, ಹೇಡ್ಯ ಕಾನರ್ಪ ಮೊದಲಾದ ಕಡೆಗಳ ಜನ ವಾಸ್ತವ್ಯ ಇರುವ ಹಾಗೂ ತೋಟಗಳ ಬದಿಯಿಂದ ಸಾಗಿ ಕಡಿರುದ್ಯಾವರದಲ್ಲಿ ರಸ್ತೆಯ ಇನ್ನೊಂದು ಬದಿಯಲ್ಲಿರುವ ಚಾರ್ಮಾಡಿ-ಕನಪಾಡಿ ಅರಣ್ಯದ ಕಡೆ ಸಾಗಿತು.

ಕಡಿರುದ್ಯಾವರ ಗ್ರಾಮದ ಲಿಜೋ ಸ್ಕರಿಯ ಅವರ ತೋಟದಲ್ಲಿ ತೆಂಗಿನ ಗಿಡಕ್ಕೆ, ಪರಿಸರದ ಕೃಷಿಕರ ಬಾಳೆ ಗಿಡಗಳಿಗೆ ಸ್ವಲ್ಪ ಹಾನಿ ಮಾಡಿದೆ. ಈ ಒಂಟಿ ಸಲಗ ಇಲ್ಲಿನ ಪ್ರದೇಶಗಳಲ್ಲಿ ವರ್ಷಕೊಮ್ಮೆ ಸಂಚರಿಸುತ್ತದೆ ಎಂದು ಸ್ಥಳೀಯರು ಹೇಳಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next