Advertisement

ಬೆಳ್ತಂಗಡಿ: ಯುವವಾಹಿನಿ ಪದಪ್ರದಾನ

02:43 PM Dec 18, 2017 | Team Udayavani |

ಬೆಳ್ತಂಗಡಿ: ಸಮಾಜದ ಅಭಿವೃದ್ಧಿಗೆ ಸಂಘಟನೆ ಪೂರಕವಾಗಿ ಕೆಲಸ ಮಾಡಲಿ. ಯುವವಾಹಿನಿ ಘಟಕವು ಯುವಜನತೆಗೆ,
ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಶಾಸಕ ಕೆ. ವಸಂತ ಬಂಗೇರ ಹೇಳಿದರು. ಅವರು ರವಿವಾರ ಗುರುನಾರಾಯಣ ವಾಣಿಜ್ಯ ಸಂಕೀರ್ಣದ ಆಶಾ ಸಾಲಿಯಾನ್‌ ಕಲ್ಯಾಣ ಮಂಟಪದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಪದಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

Advertisement

ಯುವವಾಹಿನಿ ಅಧ್ಯಕ್ಷ ಸದಾನಂದ ಪೂಜಾರಿ ಉಂಗಿಲಬೈಲು ಅಧ್ಯಕ್ಷತೆ ವಹಿಸಿದ್ದರು. ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್‌ ಬಿ. ಸುವರ್ಣ ದಿಕ್ಸೂಚಿ ಭಾಷಣ ಮಾಡಿದರು. ಕೇಂದ್ರ ಸಮಿತಿ ಉಪಾಧ್ಯಕ್ಷ ಜಯಂತ ನಡುಬೈಲು, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷ ಸೋಮನಾಥ ಬಂಗೇರ ವರ್ಪಾಳೆ, ಬಿಲ್ಲವ ಮಹಾಮಂಡಲದ ಉಪಾಧ್ಯಕ್ಷ ಬಿ. ಪೀತಾಂಬರ ಹೇರಾಜೆ, ತಾ. ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಸುಧೀರ್‌ ಆರ್‌. ಸುವರ್ಣ, ಯುವವಾಹಿನಿ ಸಂಘಟನ ಕಾರ್ಯದರ್ಶಿ ರಮಾನಂದ ಸಾಲಿಯಾನ್‌ ಮುಂಡೂರು, ಯುವವಾಹಿನಿ ನೂತನ ಅಧ್ಯಕ್ಷ ಪ್ರಶಾಂತ್‌ ಮಚ್ಚಿನ, ಕಾರ್ಯದರ್ಶಿ ಜಯರಾಜ್‌ ನಡಕ್ಕರ ಮತ್ತಿತರರು ಉಪಸ್ಥಿತರಿದ್ದರು.

ಹವ್ಯಶ್ರೀಗೆ ವಿದ್ಯಾನಿಧಿ ವಿತರಿಸಲಾಯಿತು. ಶಾಸಕ ಕೆ. ವಸಂತ ಬಂಗೇರ, ಪತ್ರಕರ್ತರ ಸಂಘದ ಅಧ್ಯಕ್ಷ ಮನೋಹರ್‌ ಬಳಂಜ, ಬೀಟ್‌ ರಾಕರ್ಸ್‌ ಅಕಾಡೆಮಿಯ ಜಿತೇಶ್‌ ಅವರನ್ನು ಸಮ್ಮಾನಿಸಲಾಯಿತು. ವಿಮರ್ಶಾ ಬಳಂಜ ಅವರಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಯುವವಾಹಿನಿ ನಿರ್ದೇಶಕ ಸ್ಮಿತೇಶ್‌ ಬಾರ್ಯ ಸ್ವಾಗತಿಸಿ, ಚಂದ್ರಹಾಸ್‌ ಬಳಂಜ, ಸುಧಾಮಣಿ ರಮಾನಂದ್‌ ಕಾರ್ಯಕ್ರಮ ನಿರ್ವಹಿಸಿದರು. ಯುವವಾಹಿನಿ ಉಪಾಧ್ಯಕ್ಷ ಅಶ್ವತ್ಥ್ ಕುಮಾರ್‌ ವಂದಿಸಿದರು.

ಶ್ರೀ ಗುರು ಮಿತ್ರ ಸಮೂಹದ ನೃತ್ಯವೈಭವ, ತ್ರಿಲೋಕ್‌ ಡ್ಯಾನ್ಸ್‌ ಇನ್ಸ್‌ಸ್ಟಿಟ್ಯೂಟ್‌ ಉಜಿರೆ ಅವರಿಂದ ಗಾನಮಿತ್ರ ಸಂಗಮ ನಡೆಯಿತು. ನೂತನ ಅಧ್ಯಕ್ಷರಾಗಿ ಪ್ರಶಾಂತ್‌ ಮಚ್ಚಿನ ತಂಡ ಪದಪ್ರದಾನ ಪಡೆದುಕೊಂಡರು.

26 ಘಟಕ
ಯುವವಾಹಿನಿಯಿಂದ ಎರಡು ಜಿಲ್ಲೆಗಳಲ್ಲಿ 26 ಘಟಕಗಳಿದ್ದು ಇನ್ನಷ್ಟು ಘಟಕಗಳಾಗಬೇಕು. ಯುವಜನತೆ, ವಿದ್ಯಾರ್ಥಿಗಳನ್ನು ಸಮಾಜದಲ್ಲಿ ಇನ್ನಷ್ಟು ಎತ್ತರಕ್ಕೇರಿಸುವ ಕಾರ್ಯಗಳಾಗಲಿ. ದ.ಕ. ಹಾಗೂ ಉಡುಪಿಯಲ್ಲಿ ಬಿಲ್ಲವ ಸಮಾಜ ದೊಡ್ಡ ಸಂಖ್ಯೆಯಲ್ಲಿ ಸಮಾಜಮುಖಿಯಾಗಿ ತೊಡಗಿಸಿಕೊಳ್ಳುವಂತಾಗಲಿ.
– ಕೆ. ವಸಂತ ಬಂಗೇರ, ಶಾಸಕ

Advertisement
Advertisement

Udayavani is now on Telegram. Click here to join our channel and stay updated with the latest news.

Next