Advertisement

ಬೆಳ್ತಂಗಡಿ ತಾ|ವ್ಯಾಪ್ತಿಯಲ್ಲಿ 66 ಸಾವಿರ ಗಿಡ ವಿತರಣೆ ಗುರಿ

02:33 AM Jun 17, 2019 | sudhir |

ಬೆಳ್ತಂಗಡಿ: ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಸ್ವಚ್ಛಮೇಮ ಜಯತೇ ಆಂದೋಲನ ಮೂಲಕ ಗ್ರಾ.ಪಂ.ಗಳು ಈಗಾಗಲೇ ಪರಿಸರ ಸಂರಕ್ಷಣೆಯತ್ತ ಜವಾಬ್ದಾರಿಯುತ ಹೆಜ್ಜೆ ಇಟ್ಟಿದ್ದು, ತಾಲೂಕಿನಾದ್ಯಂತ ಹಸುರು ಕ್ರಾಂತಿ ಮೊಳಗಿದೆ.

Advertisement

ಬೆಳ್ತಂಗಡಿ ತಾ| ಸಾಮಾಜಿಕ ಅರಣ್ಯ ಇಲಾಖೆಯು ಗ್ರಾ.ಪಂ., ಶಾಲೆ, ರಸ್ತೆ ಬದಿ ಸಹಿತ ಖಾಲಿ ಸ್ಥಳಗಳಲ್ಲಿ 66 ಸಾವಿರ ಸಸಿ ಗಿಡ ನೆಡುವ ಗುರಿ ಇರಿಸಿದೆ. ವಿಶ್ವ ಪರಿಸರ ದಿನದಂದು ಉಜಿರೆ ಗ್ರಾ.ಪಂ.ನಲ್ಲಿ ಕಾರ್ಯಕ್ರಮಕ್ಕೆ ಸಾಂಕೇತಿಕ ಚಾಲನೆ ನೀಡಲಾಗಿದ್ದು, ಪ್ರತಿ ಗ್ರಾ.ಪಂ.ಗೆ 500 ಗಿಡಗಳಂತೆ ತಾ.ನ 48 ಗ್ರಾ.ಪಂ.ಗಳಿಗೆ ಗಿಡ ನೆಡುವ ಜವಾಬ್ದಾರಿ ನೀಡಿದೆ. ಸದ್ಯ 23 ಗ್ರಾ.ಪಂ.ಗಳಿಗೆ 11,500 ಗಿಡ ವಿತರಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೀಜದುಂಡೆ ತಯಾರಿ

ಸಸಿ ನೆಡುವ ಜತೆಗೆ ಭಾರತ್‌ ಸ್ಕೌಟ್ಸ್‌ -ಗೈಡ್ಸ್‌ ವತಿ ಯಿಂದ 2,500 ಬೀಜದುಂಡೆ ಸಿದ್ಧಪಡಿಸಲಾಗುತ್ತಿದೆ. ಕುವೆಟ್ಟು ಗ್ರಾ.ಪಂ. ವ್ಯಾಪ್ತಿಯ ನಡುತೋಪು ಹಾಗೂ ನಡ ಗ್ರಾ.ಪಂ. ವ್ಯಾಪ್ತಿಯ ಬನದಗುಡ್ಡೆ ಮತ್ತು ಬಳ್ಳಿತೋಟದಲ್ಲಿ ಬೀಜದುಂಡೆ ಸಿದ್ಧತೆ ಕಾರ್ಯ ನಡೆಸುತ್ತಿದೆ.

ರಸ್ತೆ ಬದಿ ನೆಡುತೋಪು

Advertisement

ರಸ್ತೆ ಬದಿ ನೆಡುತೋಪು ವಿಸ್ತರಿಸುವ ಯೋಜನೆ ಹಮ್ಮಿಕೊಂಡಿದ್ದು, ಮೂರು ವರ್ಷ ಗಳವರೆಗೂ ಅರಣ್ಯ ಇಲಾಖೆ ನಿರ್ವಹಣೆ ವಹಿಸಲಿದೆ. ಕಳೆದ ವರ್ಷ 37.5 ಕಿ.ಮೀ. ರಸ್ತೆಯ ಬದಿ 7,400 ಗಿಡ ನೆಡಲಾಗಿದ್ದು, ಈ ಬಾರಿ 3 ಕಿ.ಮೀ. ವ್ಯಾಪ್ತಿಯಲ್ಲಿ ಕಿ.ಮೀ.ಗೆ 200 ಗಿಡಗಳಂತೆ ನೆಡಲಾಗುತ್ತಿದೆ.

219 ಶಾಲೆಗಳಿಂದ ಬೇಡಿಕೆ

19 ಕ್ಲಸ್ಟರ್‌ಗಳ 219 ಶಾಲೆಗಳಲ್ಲಿ ಗಿಡ ಗಳ ಬೇಡಿಕೆ ಬಂದಿದ್ದು, ಕೆಲವು ಸಂದರ್ಭ ಸಾಮಾಜಿಕ ಅರಣ್ಯ ಇಲಾಖೆಯೇ ಸಾಗಾಟ ವೆಚ್ಚ ಭರಿಸುತ್ತಿದೆ. ಈಗಾಗಲೇ 19 ಕ್ಲಸ್ಟರ್‌ ಮಟ್ಟದ ಶಾಲೆಗಳಿಗೆ ಮೊದಲ ಹಂತವಾಗಿ 3,665 ಗಿಡ ವಿತರಿಸಲಾಗಿದೆ.

ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಿಂದ ಫಲಾನುಭವಿ ಗಳಿಗೆ ಅರಣ್ಯ ಗಿಡ ನಾಟಿಗೆಂದು 6×9 ಗಾತ್ರದ ಚೀಲ ದಲ್ಲಿ 56,900 ಸಾವಿರ ಗಿಡ, 8×12ಗಾತ್ರದ ಚೀಲದಲ್ಲಿ 9,150 ಗಿಡದಂತೆ ಒಟ್ಟು 66,050 ಗಿಡಗಳನ್ನು ಪಣಜಾಲು ಇಲಾಖೆ ನರ್ಸರಿಯಲ್ಲಿ ಬೆಳೆಸಲಾಗಿದೆ.

ಸಬ್‌ಮಿಷನ್‌ ಆನ್‌ ಆ್ಯಗ್ರೋಫಾರೆಸ್ಟ್ರಿ (ಎಸ್‌ಎಎಂಎಫ್‌) ಯೋಜನೆ ಮೂಲಕವೂ ಗಿಡಗಳ ನಾಟಿಗೆ ಅವಕಾಶ ವಿದೆ. 6×9 ಅಳತೆ ಚೀಲದ ಸಸಿಗೆ 1 ರೂ., 8×12 ಅಳತೆ ಚೀಲದ ಸಸಿಗೆ 3 ರೂ. ಪಾವತಿಸಿ ಫಲಾನುಭವಿಗಳು ಗಿಡ ಪಡೆಯ ಬಹುದು. ಬೌಂಡರಿ ಪ್ಲಾಂಟಿಗ್‌ಗೆ ಪ್ರತಿ ಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 100ರಿಂದ 500ರಂತೆ ಪ್ರತಿಗಿಡಕ್ಕೆ 14 ರೂ., 1 ಹೆಕ್ಟೇರ್‌ನಲ್ಲಿ 500ರಿಂದ 1,000ದಂತೆ ಪ್ರತಿ ಗಿಡಕ್ಕೆ 10 ರೂ., 1 ಹೆಕ್ಟೇರ್‌ನಲ್ಲಿ 1,000ದಿಂದ 1,200ರಂತೆ ಪ್ರತಿ ಗಿಡಕ್ಕೆ 7 ರೂ. ಪ್ರೊತ್ಸಾಹ ಧನ ಲಭ್ಯವಾಗಲಿದೆ. ನಿರ್ವಹಣೆ ವೆಚ್ಚವೂ ಸಿಗಲಿದೆ.

ಹೆಬ್ಬೇವು, ಬೇಂಗ, ಹೆಬ್ಬಲಸು, ರಕ್ತಚಂದನ, ಹಲಸು, ಸೀತಾ ಅಶೋಕ, ರೆಂಜ, ಮಹಾಗನಿ, ನೇರಳೆ, ಬಾದಾಮಿ, ಪುನರ್ಪುಳಿ, ಶ್ರೀಗಂಧ, ಸಂಪಿಗೆ, ದೂಪ, ಕಹಿಬೇವು, ಕಕ್ಕೆ, ಸೀತಾಫಲ, ಪೇರಳೆ, ಬಿಲ್ವಪತ್ರೆ, ನೆಲ್ಲಿ, ಸಾಗುವಾನಿ, ಕಿರಾಲ್ ಬೋಗಿ ಸಹಿತ 24 ಜಾತಿಗಳ 66,050 ಸಸಿ ಬೆಳೆಸಿ ವಿತರಿಸಲಾಗಿದೆ.

ಆಂದೋಲನ ಯಶಸ್ವಿ

ಸ್ವಚ್ಛಮೇವ ಜಯತೇ ಆಂದೋಲನ ಗ್ರಾ.ಪಂ. ಮಟ್ಟದಲ್ಲಿ ಯಶಸ್ವಿ ಕಂಡಿದೆ. ಪೊಲೀಸ್‌ ಇಲಾಖೆ, ಸಂಘ-ಸಂಸ್ಥೆ ಶಾಲೆಗಳಿಂದ ಗಿಡಗಳಿಗೆ ಬೇಡಿಕೆ ಹೆಚ್ಚಿದೆ. ಇಲಾಖೆ ವತಿಯಿಂದ ರಸ್ತೆ ಬದಿ ಸಹಿತ ಇಲಾಖೆ ಖಾಲಿ ಸ್ಥಳಗಳಲ್ಲಿ ಗಿಡ ನೆಟ್ಟು ಪೋಷಿಸಲಾಗುತ್ತದೆ.
– ಗಣೇಶ್‌ ತಂತ್ರಿ, ವಲಯ ಅರಣ್ಯಾಧಿಕಾರಿ, ಸಾಮಾಜಿಕ ಅರಣ್ಯ ವಿಭಾಗ, ಬೆಳ್ತಂಗಡಿ
ಎಸ್‌ಎಎಂಎಫ್‌ನಲ್ಲೂ ಅವಕಾಶ

ಸಬ್‌ಮಿಷನ್‌ ಆನ್‌ ಆ್ಯಗ್ರೋಫಾರೆಸ್ಟ್ರಿ (ಎಸ್‌ಎಎಂಎಫ್‌) ಯೋಜನೆ ಮೂಲಕವೂ ಗಿಡಗಳ ನಾಟಿಗೆ ಅವಕಾಶ ವಿದೆ. 6×9 ಅಳತೆ ಚೀಲದ ಸಸಿಗೆ 1 ರೂ., 8×12 ಅಳತೆ ಚೀಲದ ಸಸಿಗೆ 3 ರೂ. ಪಾವತಿಸಿ ಫಲಾನುಭವಿಗಳು ಗಿಡ ಪಡೆಯ ಬಹುದು. ಬೌಂಡರಿ ಪ್ಲಾಂಟಿಗ್‌ಗೆ ಪ್ರತಿ ಗಿಡಕ್ಕೆ 14 ರೂ., ಒಂದು ಹೆಕ್ಟೇರ್‌ನಲ್ಲಿ 100ರಿಂದ 500ರಂತೆ ಪ್ರತಿಗಿಡಕ್ಕೆ 14 ರೂ., 1 ಹೆಕ್ಟೇರ್‌ನಲ್ಲಿ 500ರಿಂದ 1,000ದಂತೆ ಪ್ರತಿ ಗಿಡಕ್ಕೆ 10 ರೂ., 1 ಹೆಕ್ಟೇರ್‌ನಲ್ಲಿ 1,000ದಿಂದ 1,200ರಂತೆ ಪ್ರತಿ ಗಿಡಕ್ಕೆ 7 ರೂ. ಪ್ರೊತ್ಸಾಹ ಧನ ಲಭ್ಯವಾಗಲಿದೆ. ನಿರ್ವಹಣೆ ವೆಚ್ಚವೂ ಸಿಗಲಿದೆ.
24 ಜಾತಿಗಳ ಸಸಿಗಳು

ಹೆಬ್ಬೇವು, ಬೇಂಗ, ಹೆಬ್ಬಲಸು, ರಕ್ತಚಂದನ, ಹಲಸು, ಸೀತಾ ಅಶೋಕ, ರೆಂಜ, ಮಹಾಗನಿ, ನೇರಳೆ, ಬಾದಾಮಿ, ಪುನರ್ಪುಳಿ, ಶ್ರೀಗಂಧ, ಸಂಪಿಗೆ, ದೂಪ, ಕಹಿಬೇವು, ಕಕ್ಕೆ, ಸೀತಾಫಲ, ಪೇರಳೆ, ಬಿಲ್ವಪತ್ರೆ, ನೆಲ್ಲಿ, ಸಾಗುವಾನಿ, ಕಿರಾಲ್ ಬೋಗಿ ಸಹಿತ 24 ಜಾತಿಗಳ 66,050 ಸಸಿ ಬೆಳೆಸಿ ವಿತರಿಸಲಾಗಿದೆ.

– ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next