Advertisement
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಬಂಟ್ವಾಳ ತಾಲೂಕು ಆಶ್ರಯದಲ್ಲಿ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣ ಕಾರ್ಯಕ್ರಮ ಹಾಗೂ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಸಹಯೋಗದಲ್ಲಿ ಸೋಮವಾರ ಗಾಂಧೀಜಯಂತಿ ಪ್ರಯುಕ್ತ ಬೆಳ್ತಂಗಡಿ ಎಸ್‌ಡಿಎಂ ಕಲಾಭವನ ವಠಾರದಲ್ಲಿ ಹಮ್ಮಿಕೊಂಡ ಗಾಂಧಿಸ್ಮತಿ ಮತ್ತು ನವಜೀವನ ಸಮಿತಿ ಸದಸ್ಯರ ಸಮಾವೇಶದಲ್ಲಿ ಆಶೀರ್ವಚನ ನೀಡಿದರು.
Related Articles
Advertisement
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ, ಮುಂಬಯಿ ಉದ್ಯಮಿ ಆರ್.ಬಿ. ಹೆಬ್ಬಳ್ಳಿ, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ಕೆ.ವಸಂತ ಸಾಲ್ಯಾನ್, ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜಾ, ದ.ಕ. ಜಿಲ್ಲಾ-1ರ ನಿರ್ದೇಶಕ ಮಹಾಬಲ ಕುಲಾಲ್, ಕೇಂದ್ರ ಒಕ್ಕೂಟ ಬೆಳ್ತಂಗಡಿ ಅಧ್ಯಕ್ಷ ಸೀತಾರಾಮ ಆರ್., ಗುರುವಾಯನಕೆರೆ ಅಧ್ಯಕ್ಷ ಸದಾನಂದ ಬಂಗೇರ, ಬಂಟ್ವಾಳ ಅಧ್ಯಕ್ಷ ಚಿದಾನಂದ ರೈ ಕಕ್ಯ, ಯೋಜನಾಧಿಕಾರಿ ಗಳಾದ ದಯಾನಂದ ಪೂಜಾರಿ, ಮಾಧವ ಗೌಡ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆ ಅಧ್ಯಕ್ಷ ಕಾಸಿಂ ಮಲ್ಲಿಗೆ ಮನೆ ಸ್ವಾಗತಿಸಿ, ಯೋಜನಾಧಿಕಾರಿಗಳಾದ ಸುರೇಂದ್ರ ವಂದಿಸಿದರು. ರಾಮ್ ಕುಮಾರ್ ನಿರೂಪಿಸಿದರು.
ಜನಜಾಗೃತಿ ವೇದಿಕೆ ಅಧ್ಯಕ್ಷ ಸ್ಥಾನದ ಅಧಿಕಾರ ಹಸ್ತಾಂತರ ಮಾಡಲಾಯಿತು. ಜ.ವೇ. ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾçಸ್ ಹಕ್ಕೊತ್ತಾಯ ಮತ್ತು ಠರಾವು ಮಂಡಿಸಿ ಶಾಸಕ ಹರೀಶ್ ಪೂಂಜರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಸಮ್ಮಾನನವಜೀವನ ಸಾಧಕರಾದ ಲಿಂಗಪ್ಪ ಗೌಡ, ಅಚ್ಯುತ ಅಚಾರ್ಯ, ವಿಶ್ವನಾಥ ಬಸವನಗುಡಿ, ಸುಂದರ, ಬಿರ್ಮಣ ಪೂಜಾರಿ, ಕುಞ್ಞ ಗೌಡ, ಸಂಜೀವ ಗೌಡ ಹಾಗೂ ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣ ಘಟಕದ ಸಾಧಕರಾದ ಹರೀಶ್ ಕೂಡಿಗೆ, ಸತೀಶ್ ಆಚಾರ್ಯ, ಸ್ನೇಕ್ ಪ್ರಕಾಶ್, ನಾಗೇಶ್, ಜೀವ ರಕ್ಷಕ ತರಬೇತುದಾರ ಸಂತೋಷ್ ಅವರನ್ನು ಸಮ್ಮಾನಿಸಲಾಯಿತು. ಉತ್ತಮ ಘಟಕ ಪ್ರಶಸ್ತಿಗೆ ಪಾತ್ರರಾದ ಬೆಳ್ತಂಗಡಿಯ ನಡ ಘಟಕ, ಗುರುವಾಯನಕೆರೆಯ ಅಳದಂಗಡಿ ಘಟಕದ ಸದಸ್ಯರನ್ನು ಹಾಗೂ ಶೌರ್ಯ ಜೋಡಿಯಾಗಿ ತಣ್ಣೀರುಪಂತ ಘಟಕದ ಶೋಭಾ, ಪ್ರಶಾಂತ್ ದಂಪತಿಯನ್ನು ಗೌರವಿಸಲಾಯಿತು. ಪಾನಮುಕ್ತ ಮನೆಯವರ ಪರವಾಗಿ ವಸುಧಾ, ಶೀಲಾವತಿ, ಪಾನಮುಕ್ತರಾದ ಸಂಜೀವ ಗೌಡ ದಿಡುಪೆ ಅನಿಸಿಕೆ ವ್ಯಕ್ತಪಡಿಸಿದರು. ಡಾ| ಹೆಗ್ಗಡೆ ಜತೆಗೆ ನಾವಿದ್ದೇವೆ
ಕಾರ್ಯಕ್ರಮ ಉದ್ಘಾಟಿಸಿದ ವಿ.ಪ.ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಜನಜಾಗೃತಿ ವೇದಿಕೆ ಮೂಲಕ ಸತ್ಯ, ನ್ಯಾಯ, ಧರ್ಮದ ಹಾದಿಯಲ್ಲಿ ಸಮಾಜದ ಪರಿವರ್ತನೆಗಾಗಿ ಡಾ| ಹೆಗ್ಗಡೆ ಕಟಿಬದ್ಧರಾಗಿದ್ದಾರೆ. ಸಮಾಜದ ಉದ್ಧಾರಕ್ಕಾಗಿ ಅವರ ನಿಲುವಿನೊಂದಿಗೆ ಯಾವುದೇ ಅಡೆತಡೆಗಳಿದ್ದರೂ ಮೆಟ್ಟಿ ನಾವೆಲ್ಲ ಹೆಜ್ಜೆ ಇಡುತ್ತೇವೆ ಎಂದರು.