Advertisement

ರುಡ್‌ಸೆಟ್ ನಿಂದ ಯುವಕರಿಗೆ ನವಜೀವನ: ಹರೀಶ್‌ ಪೂಂಜ

03:14 PM Aug 05, 2019 | Naveen |

ಬೆಳ್ತಂಗಡಿ : ಧೈರ್ಯ ಮತ್ತು ವಿಶ್ವಾಸವಿದ್ದಲ್ಲಿ ಉದ್ಯಮ ಕ್ಷೇತ್ರ ಯಶಸ್ವಿ ಯಾಗಲು ಸಾಧ್ಯ. ಇಂತಹ ಉದ್ಯಮ ಸೃಷ್ಟಿಸುವ ಕನಸು ಹೊತ್ತು ಬಂದ ಸಾವಿರಾರು ಯುವಕರಿಗೆ ರುಡ್‌ಸೆಟ್ ಸಂಸ್ಥೆ ನವಜೀವನ ರೂಪಿಸಿದೆ ಎಂದು ಶಾಸಕ ಹರೀಶ್‌ ಪೂಂಜ ಶ್ಲಾಘಿಸಿದರು.

Advertisement

ಉಜಿರೆ ರುಡ್‌ಸೆಟ್ ಸಭಾಂಗಣದಲ್ಲಿ ಆಸರೆ ರುಡ್‌ಸೆಟ್ ಯಶಸ್ವಿ ಉದ್ಯಮಿಗಳ ಸಂಘದ ಪದಗ್ರಹಣ ಹಾಗೂ ಉದ್ಯಮಿಗಳ ಸಮಾವೇಶವನ್ನು ರವಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಮಂಜುನಾಥ ಸ್ವಾಮಿ ಹಾಗೂ ಡಾ| ಹೆಗ್ಗಡೆಯವರ ಆಶೀರ್ವಾದವಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಉದ್ಯಮ ತರಬೇತಿ ಸಿಗುತ್ತಿದೆ. ಸ್ಥಳೀಯರಿಗೆ ಈ ಮೂಲಕ ಸ್ವ ಉದ್ಯೋಗದ ಕಲ್ಪನೆ ಸಾಕಾರ ವಾಗಿದೆ ಎಂದರು.

ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ವಿಧಾನಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌ ಮಾತನಾಡಿ, ಜೀವನದಲ್ಲಿ ಹೆತ್ತವರು, ಶಿಕ್ಷಕರು ಬಳಿಕ ಉದ್ಯಮಕ್ಕೆ ಬ್ಯಾಂಕ್‌ಗಳು ಆಸರೆಯಾಗುತ್ತಾರೆ. 28 ವರ್ಷಗಳ ಹಿಂದೆ ಡಾ| ಹೆಗ್ಗಡೆಯವರ ದೂರದೃಷ್ಟಿ ಕಲ್ಪನೆಯಲ್ಲಿ ಆರಂಭಿಸಿದ ಸಂಸ್ಥೆ ಇಂದು ದೇಶಾದ್ಯಂತ ಸಾವಿರಾರು ಮಂದಿಯ ಸ್ವಂತ ಉದ್ದಿಮೆ ಕನಸು ಈಡೇರಿಸುವುದರೊಂದಿಗೆ ಕುಟುಂಬ ನಿರ್ವಹಿಸಲು ಆಸರೆಯಾಗಿದೆ ಎಂದರು.

ರುಡ್‌ಸೆಟ್ ಸಂಸ್ಥೆಯ ಉಪನ್ಯಾಸಕ ಜೇಮ್ಸ್‌ ಅಬ್ರಾಹಂ ಪ್ರಸ್ತಾವಿಸಿ, ರುಡ್‌ಸೆಟ್ ಸಂಸ್ಥೆ ದೇಶದ 586 ಜಿಲ್ಲೆಗಳಲ್ಲಿದ್ದು, ಉಜಿರೆ ಮಾತೃಸಂಸ್ಥೆಯಾಗಿದೆ. ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಕಲ್ಪನೆ ಕೂಸು ಈ ರುಡ್‌ಸೆಟ್ ಸಂಸ್ಥೆಯಾಗಿದೆ. ಕೌಶಲದ ಜತೆಗೆ ಜೀವನವೃತ್ತಿ ನೀಡುವ ಸಂಸ್ಥೆಯಾಗಿದ್ದು, ಯಶಸ್ವಿ ಉದ್ಯಮಿಗಳಾಗಿ, ಅವರದ್ದೇ ಸಂಘಟನೆ ಆಸರೆ 2010ರಲ್ಲಿ ರೂಪು ಗೊಂಡು ಹಲವಾರು ಸಾಮಾಜಿಕ ಸೇವೆಯಲ್ಲಿ ಭಾಗವಹಿಸುತ್ತಿದೆ ಎಂದರು.

Advertisement

ಸಿಂಡಿಕೇಟ್ ಬ್ಯಾಂಕ್‌ನ ಪುತ್ತೂರು ಪ್ರಾಂತೀಯ ಪ್ರಬಂಧಕ ಆರ್‌.ರಾಘವೇಂದ್ರ ಶುಭ ಹಾರೈಸಿದರು. ಪ್ರಬಂಧಕ ಕುಮಾರ್‌, ಆಸರೆ ಸಂಘದ ಸ್ಥಾಪಕಾಧ್ಯಕ್ಷ ಸುನೀಲ್ ರೈ ಬೆಳ್ಳಾರೆ, ರುಡ್‌ಸೆಟ್ ಉಪನ್ಯಾಸಕಿ ಅನುಸೂಯಾ ಉಪಸ್ಥಿತ ರಿದ್ದರು. ಸಂಘದ ಅಧ್ಯಕ್ಷ ವೆಂಕಟರಮಣ ಪುಣಚ ಸ್ವಾಗತಿಸಿ, ಕಾರ್ಯದರ್ಶಿ ಪ್ರಶಾಂತ್‌ ಎಚ್. ಕುದ್ಯಾಡಿ ವಂದಿಸಿ, ಸದಸ್ಯರಾದ ನಾಗರಾಜ್‌ ಕಡಬ ಹಾಗೂ ಪ್ರಶಾಂತ್‌ ಲಾೖಲ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next