Advertisement

ಅಂತರ್ಜಲ ಹೆಚ್ಚಿಸಲು ಶ್ರಮಿಸೋಣ: ಪೂಂಜ

03:33 PM Aug 05, 2019 | Naveen |

ಬೆಳ್ತಂಗಡಿ: ಜಲ ಮರುಪೂರಣ ಜಾಗೃತಿ ಕಾರ್ಯಕ್ರಮ ಆಯೋಜಿಸುವಲ್ಲಿ ನಾವು ದೇಶದಲ್ಲೇ ಮೊದಲಿಗರಾಗಿದ್ದೇವೆ. ಮುಂದಿನ ತಲೆಮಾರಿಗಾಗಿ ಅಂತರ್ಜಲ ಹೆಚ್ಚಿಸಲು ಎಲ್ಲರೂ ಪಣತೊಟ್ಟು ಪ್ರಾಮಾಣಿಕ ವಾಗಿ ಶ್ರಮಿಸೋಣ ಎಂದು ಶಾಸಕ ಹರೀಶ್‌ ಪೂಂಜ ಹೇಳಿದರು.

Advertisement

ಕಣಿಯೂರು ಗ್ರಾ.ಪಂ. ಹಾಗೂ ಸ್ಥಳೀಯ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಪದ್ಮುಂಜ ಸರಕಾರಿ ಪ್ರೌಢಶಾಲಾ ಸಭಾಂಗಣದಲ್ಲಿ ನಡೆದ ಜಲ ಮರುಪೂರಣ ಘಟಕವನ್ನು ಮತ್ತು ಮಾಹಿತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ, ಪ್ರತೀ ಮನೆಗಳಲ್ಲಿ ಜಲ ಜಾಗೃತಿ ಅಭಿಯಾನ ನಡೆಯಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ. ಅಧ್ಯಕ್ಷ ಸುನೀಲ್ ಸಾಲ್ಯಾನ್‌ ಜಲ ಮರುಪೂರಣ ಘಟಕ ನಿರ್ಮಾಣದ ಮಾಹಿತಿ ನೀಡಿದರು.

ವಿಧಾನ ಪರಿಷತ್‌ ಸದಸ್ಯ ಕೆ. ಹರೀಶ್‌ ಕುಮಾರ್‌, ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಪಂಚಾಯತ್‌ರಾಜ್‌ ಎಂಜಿನಿಯರಿಂಗ್‌ ಉಪವಿಭಾಗದ ಸಹಾಯಕ ಅಭಿಯಂತ ಶುಭ ಹಾರೈಸಿದರು.

ಕಾರ್ಯಾಗಾರದಲ್ಲಿ ಕೊಯ್ಯೂರು ಸರಕಾರಿ ಪ್ರೌ.ಶಾಲಾ ಮುಖ್ಯ ಶಿಕ್ಷಕ ರಾಧಾಕೃಷ್ಣ ಮತ್ತು ಶ್ರೀಕ್ಷೇತ್ರ ಧ.ಗ್ರಾ. ಯೋಜನಾಧಿಕಾರಿ ಯಶವಂತ ಸಂಪನ್ಮೂಲ ವ್ಯಕ್ತಿಯಾಗಿ ಅಂತರ್ಜಲದ ಮಹತ್ವ ವಿವರಿಸಿ,

Advertisement

ಜಲ ಮರುಪೂರಣ ಘಟಕ ನಿರ್ಮಾಣದ ಕುರಿತು ಮಾಹಿತಿ ನೀಡಿದರು. ತಾ.ಪಂ. ಸದಸ್ಯರಾದ ಅಮಿತಾ ಕುಶಾಲಪ್ಪ ಗೌಡ, ಕೃಷ್ಣಯ್ಯ ಆಚಾರ್ಯ, ಪದ್ಮುಂಜ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಾಬಿ ಗೌಡ, ಪ್ರಾಂಶುಪಾಲ ದಾಮೋದರ, ಸಿಡಿಪಿಒ ಪ್ರಿಯಾ ಆಗ್ನೇಸ್‌, ಸಿ.ಎ. ಬ್ಯಾಂಕ್‌ ಅಧ್ಯಕ್ಷ ಡೀಕಯ್ಯ, ಪಂ. ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು. ಉಪನ್ಯಾಸಕ ನಾರಾಯಣ ಗೌಡ ಪ್ರಸ್ತಾವಿಸಿ, ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next