Advertisement
ರಸ್ತೆಯಲ್ಲೇ ಕೆಸರು ನೀರುಗುರುವಾಯನಕೆರೆ-ಉಪ್ಪಿನಂಗಡಿ ರಸ್ತೆ, ಉಜಿರೆಯಿಂದ- ಬೆಳ್ತಂಗಡಿ ರಸ್ತೆ ಸೇರಿದಂತೆ ನಗರ ಪಂಚಾಯತ್ ವ್ಯಾಪ್ತಿಯ ರಸ್ತೆಗಳ ಚರಂಡಿಗಳ ಹೂಳು ಎತ್ತದೆ ರಸ್ತೆಯಲ್ಲೇ ಕೆಸರು ನೀರು ಆವರಿಸುತ್ತಿದೆ. ಮಳೆಗಾಲ ಆರಂಭಕ್ಕೂ ಮುನ್ನ ನ.ಪಂ. ವ್ಯಾಪ್ತಿ ಹಾಗೂ ಮುಖ್ಯ ರಸ್ತೆ ಚರಂಡಿ ಹೂಳೆತ್ತಲು 7 ಲಕ್ಷ ರೂ. ಅನುದಾನ ಮೀಸಲಿರಿಸಿ ಟೆಂಡರ್ ಪ್ರಕ್ರಿಯೆಯೂ ಮುಗಿದಿತ್ತು. ಆದರೆ ಮಳೆ ಆರಂಭವಾಗಿ ಒಂದು ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ.
ಮಂಗಳವಾರ ಸುರಿದ ಮಳೆಗೆ ಉಜಿರೆ ಮುಖ್ಯರಸ್ತೆ ಬೆಳಾಲು ಕ್ರಾಸ್ ಸಮೀಪ ಚರಂಡಿ ಕಟ್ಟಿದ್ದರಿಂದ ರಸ್ತೆಯಲ್ಲಿ ಒಂದಡಿ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಯಿತು.
ಚರಂಡಿ ದುರಸ್ತಿ ಮಾಡಲಾಗುತ್ತಿದೆ
ಈಗಾಗಲೇ ವಾರ್ಡ್ ಹಂತದಲ್ಲಿ ಎರಡು ತಂಡವಾಗಿಸಿ ಚರಂಡಿ ದುರಸ್ತಿ ಮಾಡಲಾಗುತ್ತಿದೆ. ಕೋರ್ಟ್ ರಸ್ತೆ, ಕುತ್ಯಾರು, ಸುದೆಮುಗೇರು, ಚರ್ಚ್ ರಸ್ತೆ ಸ್ವಚ್ಛಗೊಳಿಸಲಾಗಿದೆ. ಮುಂದಿನ ಹಂತದಲ್ಲಿ ಪಟ್ಟಣ ವ್ಯಾಪ್ತಿ ಹಾಗೂ ವಿಧಾನ ಸೌಧ ಮುಂಭಾಗ ಸ್ವಚ್ಛತೆ ಹಮ್ಮಿಕೊಳ್ಳಲಾಗುತ್ತದೆ.
-ಮಹಾವೀರ ಆರಿಗ, ಕಿರಿಯ ಅಭಿಯಂತರರು, ನ.ಪಂ.