Advertisement
ಪ್ರಮುಖ ನದಿ, ತೋಡು, ಕಿಂಡಿ ಅಣೆಕಟ್ಟುಗಳಲ್ಲಿ ಮರಮಟ್ಟುಗಳ ಅವಶೇಷ ಶೇಖರಣೆ ಯಾಗಿದೆ. ಮಳೆಗಾಲದಲ್ಲಿ ಮತ್ತಷ್ಟು ಸಮಸ್ಯೆಯಾಗುವ ದೃಷ್ಟಿಯಿಂದ ಅಗತ್ಯ ತೆರವಿಗೆ ಕ್ರಮ ವಹಿಸುವಂತೆ ವಲಯ ಅರಣ್ಯಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಹಶೀಲ್ದಾರ್ ಹೇಳಿದರು.
ನೆರೆ ಪ್ರದೇಶಗಳಿಂದ ಸಂತ್ರಸ್ತರಾದವರಿಗೆ ಪರಿಹಾರ ಕೇಂದ್ರಗಳನ್ನು ನಿರ್ಮಿಸಿ ಅವುಗಳಿಗೆ ಸಿಆರ್‌ಪಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗುವುದು. ಜತೆಗೆ ಮುಳುಗಡೆ ಆಗುವ ಪ್ರದೇಶಗಳನ್ನು ಗುರುತಿಸಿ ತಂಡ ರಚಿಸಲಾಗಿದೆ. ಒಟ್ಟು ಐದು ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
Related Articles
Advertisement
ದಿಡುಪೆ, ನಿಡಿಗಲ್ ವ್ಯಾಪ್ತಿಗೊಳಪಟ್ಟಂತೆ ಮಿತ್ತಬಾಗಿಲು ದ.ಕ.ಜಿ.ಪಂ. ಕೇಂದ್ರದಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ| ರತ್ನಾಕರ ಮಲ್ಯ ಅವರನ್ನು ನಿಯೋಜಿಸಲಾಯಿತು.
ಇಳಂತಿಲ, ಮೊಗ್ರು, ಬಂದಾರು, ತೆಕ್ಕಾರು, ಹತ್ಯಡ್ಕ ವ್ಯಾಪ್ತಿಗೆ ಬನ್ನೆಂಗಳ, ಮೊಗ್ರು ದ.ಕ.ಜಿ.ಪಂ.ಹಿ. ಪ್ರಾ. ಶಾಲೆಯಲ್ಲಿ ಪರಿಹಾರ ಕೇಂದ್ರಮತ್ತು ವಸತಿ ಕಲ್ಪಿಸಲಿದೆ. ಇಲ್ಲಿಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಚೆನ್ನಪ್ಪ ಮೊಯ್ಲಿ ಅವರನ್ನು ಉಸ್ತುವಾರಿಯಾಗಿ ನೇಮಿಸಲಾಯಿತು. ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ಸರಕಾರಿ ಹಿ.ಪ್ರಾ. ಶಾಲೆಯನ್ನು ಗುರುತಿಸಲಾಗಿದ್ದು, ಇಲ್ಲಿಗೆ ಪಿಡಬ್ಲ್ಯೂಡಿ ಎಇಇ ಶಿವಪ್ರಸಾದ್ ಅಜಿಲ ಅವರನ್ನು ನೇಮಿಸಲಾಯಿತು.
ಪ್ರತಿ ವರ್ಷದಂತೆ ಪ್ರತಿ ಗ್ರಾ.ಪಂ. ವ್ಯಾಪ್ತಿಯಲ್ಲಿ ನುರಿತ ಈಜುಗಾರರನ್ನು ಗುರುತಿಸಿ ಅವರ ಸಂಪೂರ್ಣ ವಿವಿರ ಪಡೆಯಬೇಕು. ಎಲ್ಲ ಜೆಸಿಬಿ, ಹಿಟಾಚಿ, ಕ್ರೇನ್‌ಗಳ ಮಾಹಿತಿ ಪಡೆದು ತಾಲೂಕು ಆಡಳಿತಕ್ಕೆ ನೀಡುವಂತೆ ಪಿಡಿಒ, ಕಂದಾ ಯ ಅಧಿಕಾರಿಗಳು, ಪಿಡಬ್ಲ್ಯೂಡಿ ಅಧಿಕಾ ರಿಗಳಿಗೆ ತಹಶೀಲ್ದಾರ್ ಸೂಚಿಸಿದರು.
ಇಲಾಖೆಯ ಎಲ್ಲಾ ವಾಹನಗಳನ್ನು ಸುಸ್ಥಿಯಲ್ಲಿಡಬೇಕು. ಸಂಬಂಧಪಟ್ಟ ಇಲಾಖೆಗಳು ಹಗ್ಗ, ಅಗತ್ಯ ಪರಿಕರ ಸಿದ್ಧಗೊಳಿಸಬೇಕು. ಪ.ಪಂ. ವ್ಯಾಪ್ತಿಯಲ್ಲಿ ಚರಂಡಿ ಹೂಳು ತೆಗೆದು ಸ್ವತ್ಛತೆಗೆ ಆದ್ಯತೆ ನೀಡುವಂತೆ ಪ.ಪಂ. ಅಧಿಕಾರಿಗಳಿಗೆ ಸೂಚಿಸಿದರು.
ಚಾರ್ಮಾಡಿ ಪ್ರದೇಶಕ್ಕೆ ಶಾಖಾ ಅಧಿಕಾರಿ ನೇಮಕರಾ.ಹೆ. ಮಂಗಳೂರು- ಚಿಕ್ಕಮಗಳೂರು ರಸ್ತೆಯ ಚಾರ್ಮಾಡಿ ಘಾಟ್ ಪ್ರದೇಶ ಅಪಾಯಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ವಿಕೋಪ ಎದುರಾದಲ್ಲಿ ತುರ್ತು ಸ್ಪಂದನೆಗೆ ರಾ.ಹೆ. ಶಾಖಾ ಅಧಿಕಾರಿಯೊಬ್ಬರನ್ನು ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ನಿಯೋಜಿಸುವಂತೆ ರಾ.ಹೆ. ಮಂಗಳೂರು ವಿಭಾಗಕ್ಕೆ ಸೂಚಿಸಲಾಗುವುದು ಎಂದು ತಹಶೀಲ್ದಾರ್ ಗಣಪತಿ ಶಾಸ್ತ್ರಿ ಹೇಳಿದರು.