Advertisement
ಬೆರ್ಕೆ ಪ್ರಶಾಂತ ಕಾಕತ್ಕರ್ ಅವರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು 30ಕ್ಕಿಂತ ಅಧಿಕ ಬಾಳೆ ಗಿಡ ಹಾಗೂ ತಾಳೆ ಮರವನ್ನು ಮುರಿದು ಹಾಕಿವೆ. ಈ ವೇಳೆ ಸ್ಥಳೀಯರು ಸೇರಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸಿದ ಕಾರಣ ಹೆಚ್ಚಿನ ಹಾನಿ ತಪ್ಪಿದೆ. ಕಲ್ಮಂಜ ಪರಿಸರದಲ್ಲೂ ಕಾಡಾನೆಗಳು ಕಂಡುಬಂದಿರುವುದು ಇಲ್ಲಿನ ಕೃಷಿಕರಲ್ಲಿ ಭೀತಿ ಮೂಡಿಸಿದೆ. ಒಟ್ಟು 3 ಆನೆಗಳು ಹಿಂಡಿನಲ್ಲಿರುವ ಶಂಕೆ ವ್ಯಕ್ತವಾಗಿದೆ.
ಸುಳ್ಯ: ಜಾಲ್ಸೂರು -ಕಾಸರಗೋಡು ಸಂಪರ್ಕ ಹೆದ್ದಾರಿಯಲ್ಲಿ ಕಾಡಾನೆ ಸಂಚರಿಸಿ ಬೈಕ್ ಸವಾರರು ಅಂಜಿದ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಇದರ ವೀಡಿಯೋ ವೈರಲ್ ಆಗಿದೆ. ಪಂಜಿಕಲ್ಲು ಎಂಬಲ್ಲಿ ಕಾಡಾನೆ ಹೆದ್ದಾರಿಯಲ್ಲೇ ಸ್ವಲ್ಪ ದೂರ ಸಾಗಿದೆ. ಈ ವೇಳೆ ಎದುರಿನಿಂದ ಬೈಕ್ ಬಂದಿದ್ದು, ಸವಾರರು ಭಯಗೊಂಡುದು, ಆನೆಯ àಳು ವೀಡಿಯೋದಲ್ಲಿ ದಾಖಲಾಗಿದೆ. ಮುರೂರು, ದೇವರಗುಂಡ, ಬೆಳ್ಳಿಪಾಡಿ ಪರಿಸರದಲ್ಲಿ ಕೆಲವು ದಿನಗಳಿಂದ ಕಾಡಾನೆಗಳು ಕೃಷಿಕರ ತೋಟಗಳಿಗೆ ಹಾನಿ ಮಾಡುತ್ತಿದೆ.
Related Articles
ಉಪ್ಪಿನಂಗಡಿ: ಕೌಕ್ರಾಡಿ ಗ್ರಾಮದ ಬಾಣಜಾಲು ನಿವಾಸಿ ದೇವದಾಸ್ ಬಾಣಜಾಲು ಅವರ ಭತ್ತದ ಗದ್ದೆಗೆ ಕಾಡಾನೆಗಳು ದಾಳಿ ಮಾಡಿದ್ದರಿಂದ ಭತ್ತದ ಕೃಷಿ ಸಂಪೂರ್ಣ ನಾಶಗೊಂಡ ಘಟನೆ ನಡೆದಿದೆ.
Advertisement