Advertisement
ಕಡಿರುದ್ಯಾವರ ಗ್ರಾಮದ ಹೇಡ್ಯಾದಲ್ಲಿ ಜು.27ರಂದು ಸಮಿತಿ ರಚನೆ ಹಾಗೂ ಅದರ ಮೊದಲ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ ಆನೆ ದಾಳಿ ಸಂತ್ರಸ್ತರ ನೋವಿಗೆ ಶಾಶ್ವತ ಪರಿಹಾರ ಒದಗಿಸಿಕೊಡುವುದು ಸಮಿತಿಯ ಉದ್ದೇಶವಾಗಿದೆ ಎಂದರು.
ಕೃಷಿ ಭೂಮಿಗೆ ಆನೆ ದಾಳಿ ತಡೆಗಟ್ಟಲು ಸರಕಾರ ಶಾಶ್ವತ ಕ್ರಮ ಕೈಗೊಳ್ಳಬೇಕು. ಅವೈಜ್ಞಾನಿಕವಾಗಿ ಚಾರ್ಮಾಡಿ ಹಾಗೂ ಇತರ ಅರಣ್ಯ ವ್ಯಾಪ್ತಿಯ ಜಲವಿದ್ಯುತ್ ಮತ್ತು ಎತ್ತಿನಹೊಳೆ ಯೋಜನೆಯಿಂದ ಸಾವಿರಾರು ಎಕ್ರೆ ಕೃಷಿ ಭೂಮಿ ನಾಶವಾಗಿದೆ. ಇಂತಹ ಕಂಪೆನಿಗಳು ಸ್ಥಾಪನೆಗೊಳ್ಳುವ ಸಂದರ್ಭದಲ್ಲಿ ಕೃಷಿಕರಿಗೆ ಸೂಕ್ತ ಪರಿಹಾರ ನೀಡಬೇಕು. ಶಾಶ್ವತ ನಿಧಿ ಸ್ಥಾಪನೆ ಕುರಿತು ಯೋಜನೆ ರೂಪಿಸಬೇಕು. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳ ವ್ಯಾಪ್ತಿಯಲ್ಲಿ ಹೊಸದಾಗಿ ಕೋವಿ ಪರವಾನಿಗೆ ನೀಡಲು ಇರುವ ನಿಷೇಧವನ್ನು ರದ್ದುಪಡಿಸಬೇಕು. ಕಂಪೆನಿಗಳ ಸಿಎಸ್‌ಆರ್ ಫಂಡ್‌ಗಳನ್ನು ಪರಿಸರ ರಕ್ಷಣೆ ಹಾಗೂ ಕೃಷಿಕರಿಗೆ ಮೀಸಲಿಡಬೇಕು. ಅಗತ್ಯ ಸ್ಥಳಗಳಲ್ಲಿ ಆನೆ ಕಂದಕ ರಚಿಸಿ ಅದರ ಮೇಲೆ ಸೋಲಾರ್ ಮೇಲೆ ನಿರ್ಮಿಸಬೇಕು ಎಂಬಿತ್ಯಾದಿ ನಿರ್ಣಯ ಕೈಗೊಳ್ಳಲಾಯಿತು. ಈ ಬಗ್ಗೆ ಮುಖ್ಯಮಂತ್ರಿ, ಪ್ರಧಾನಿ ಸಹಿತ ಪ್ರಮುಖರಿಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
ವಿಘ್ನೇಶ್ ಪ್ರಭು ಆಲಂತಡ್ಕ ಸ್ವಾಗತಿಸಿ, ರಾಘವೇಂದ್ರ ಪಟವರ್ಧನ್ ಪನಿಕಲ್ಲು ವಂದಿಸಿದರು.
Related Articles
ಸಮಿತಿಯ ಅಧ್ಯಕ್ಷರಾಗಿ ಸಂತೋಷ್ ಗೌಡ ವಳಂಬ್ರ, ಪ್ರ. ಕಾರ್ಯದರ್ಶಿಯಾಗಿ ಪ್ರಸಾದ್ ಗೌಡ ಕುಚ್ಚಾರು, ಕಾರ್ಯದರ್ಶಿಯಾಗಿ ರಾಮಚಂದ್ರ ಗೌಡ ಪನಿಕಲ್ಲು, ಸಂಚಾಲಕರಾಗಿ ನೀಲಯ್ಯ ಗೌಡ ಕನಪ್ಪಾಡಿ, ಜಾರ್ಜ್ ಟಿ.ವಿ. ಮಲ್ಲಡ್ಕ, ಕಿರಣ್ ಹೆಬ್ಟಾರ್ ಶಿರಿಬೈಲು, ಶಶಿಧರ ಗೌಡ ಬರಮೇಲು, ವಿಘ್ನೇಶ್ ಪ್ರಭು ಆಲಂತಡ್ಕ, ಸಂತೋಷ್ ಹೇಡ್ಯ, ಪ್ರಸಾದ್ ಗೌಡ ವಳಂಬ್ರ, ಸೂರಜ್ ವಳಂಬ್ರ, ರಾಘವೇಂದ್ರ ಭಟ್ ಪನಿಕಲ್ಲು, ಉದಯಗೌಡ ಪನಿಕಲ್ಲು, ಮಂಜುನಾಥ ಗೌಡ ಕುಚ್ಚಾರು ಹೊಸ ಮನೆ, ಪ್ರಸಾದ್ ನಾಯ್ಕ ಕಂಚಲಗದ್ದೆ, ಗಣೇಶ್ ಗೌಡ ಕೆರೆಕೋಡಿ, ಅಕ್ಷಯ ಕೆರೆಕೋಡಿ, ಲಿಜೋ ಸ್ಕರಿಯ ಬಲ್ಲಾಲ್ ಬೆಟ್ಟು, ಕಾನೂನು ಸಲಹೆಗಾರಾಗಿ ಗಣೇಶ್ ಗೌಡ ಬರಮೇಲು, ಮಾಧ್ಯಮ ಸಂಚಾಲಕರಾಗಿ ಬಾಲಚಂದ್ರ ನಾಯಕ್ ಹೇಡ್ಯಾ ಅವರನ್ನು ಆಯ್ಕೆ ಮಾಡಲಾಯಿತು.
Advertisement