Advertisement
ಶನಿವಾರ ಬೆಳ್ತಂಗಡಿ ತಾ| ಕ್ರೀಡಾಂಗಣದಲ್ಲಿ ಯುವ ಸಂಕಿರಣ ಬೆಳ್ತಂಗಡಿಯು ಬಹುಜನ ವಿದ್ಯಾರ್ಥಿ ಸಂಘ, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಯೋಗದೊಂದಿಗೆ ಆಯೋಜಿಸಿದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಪ್ರಸ್ತುತ ಸರಕಾರಿ ಹುದ್ದೆಗಳಿಗೆ ದಕ್ಷರ ಆವಶ್ಯಕತೆಯಿದ್ದು, ಹೀಗಾಗಿ ಯುವಕರಿಗೆ ಹೆಚ್ಚಿನ ಅವಕಾಶಗಳಿವೆ ಎಂದು ತಿಳಿಸಿದರು. ಬೆಳ್ತಂಗಡಿ ಪೊಲೀಸ್ ಸರ್ಕಲ್ ಇನ್ಸ್ ಸ್ಪೆಕ್ಟರ್ ಸಂದೇಶ್ ಪಿ.ಜಿ. ಮಾತನಾಡಿ, ಉದ್ಯೋಗ ಇಲ್ಲ ಎನ್ನುವುದು ಯಾರ ಮನಸ್ಸಿನಲ್ಲಿಯೂ ಬರಬಾರದು. ಉತ್ತಮ ಸಮಾಜದ ಗುರಿ ಇದ್ದಾಗ ಉತ್ತಮ ಉದ್ಯೋಗವೂ ನಮ್ಮದಾಗುತ್ತದೆ. ಕರಾವಳಿ ಭಾಗದಲ್ಲಿ ಉದ್ಯಮಕ್ಕೆ ಹೆಚ್ಚಿನ ಮಹತ್ವವಿದೆ ಎಂದರು.
ಹಿಂದೆ ಕರಾವಳಿಯ ಭಾಗಗಳಲ್ಲಿ ಬಹುತೇಕ ಯುವ ಜನತೆ ಬ್ಯಾಂಕ್, ವೈದ್ಯ, ಎಂಜಿನಿಯರ್‌ಗೆ ಮಾತ್ರ ಆಸಕ್ತಿ ತೋರಿಸುತ್ತಿದ್ದರು. ಆದರೆ ಈಗ ಉನ್ನತ ಸರಕಾರಿ ಉದ್ಯೋಗ ಪಡೆಯುವುದಕ್ಕೆ ಕೆಎಎಸ್, ಐಎಎಸ್ ಪರೀಕ್ಷೆಗಳನ್ನು ಬರೆಯುತ್ತಿದ್ದಾರೆ. ಒಬ್ಬ ಯುವಕ ಉತ್ತಮ ಉದ್ಯೋಗ ಪಡೆದಾಗ ಒಂದು ಕುಟುಂಬ ಬೆಳೆಯುತ್ತದೆ.
- ಕೆ. ಹರೀಶ್‌ಕುಮಾರ್
ವಿಧಾನ ಪರಿಷತ್ ಸದಸ್ಯರು