ಬೆಳ್ತಂಗಡಿ : ತಾಲೂಕಿನ ನಾಡಾ ಗ್ರಾಮದ ಗಡಾಯಿಕಲ್ಲು ಸಮೀಪದ ಅಂತ್ರಾಯಿಪಲ್ಕೆ ಹೊಳೆಯಲ್ಲಿ ನಾಲ್ವರು ನೀರುಪಾಲದ ದುರಂತ ಬುಧವಾರ ಮಧ್ಯಾಹ್ನ ನಡೆದಿದೆ. ದುರಂತದಲ್ಲಿ ಓರ್ವ ಮಹಿಳೆಯನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮೃತರ ದುರ್ದೈವಿಗಳು ಉಡುಪಿ ಜಿಲ್ಲೆಯ ಕಾಪುವಿನ ಪಕೀರನ ಕಟ್ಟೆ ನಿವಾಸಿಗಳಾಗಿದ್ದು,ಕಾಜೂರು ದರ್ಗಾ ವೀಕ್ಷಣೆಗೆಂದು ಕುಟುಂಬ ಸಮೇತ ಬಂದಿದ್ದರು ಎಂದು ತಿಳಿದು ಬಂದಿದೆ.
ಮೃತರು ರಹೀಮ್, ಪತ್ನಿ ರುಬೀನಾ(25),ರುಬಿನಾ ತಂಗಿ ಯಾಸ್ಮಿನ್(23), ತಮ್ಮ ಸುಬಾನ್(15)ಎಂದು ತಿಳಿದು ಬಂದಿದ್ದು, ರಕ್ಷಣೆಗೊಳಗಾದವರು ರುಬೀನಾ ಅವರ ತಾಯಿ ಮೈಮೂನಾ ಎಂದು ತಿಳಿದು ಬಂದಿದೆ.
ಕಾಜೂರು ದರ್ಗಾ ಭೇಟಿಯ ಬಳಿಕ ಜಮಾಲಾಬಾದ್ ಪೋರ್ಟ್ ವೀಕ್ಷಿಸಿ, ಊಟ ಮುಗಿಸಿ ತೊರೆಯ ಬಳಿ ವಾಹನ ನಿಲ್ಲಿಸಿದ್ದರು. ಈ ವೇಳೆ ನೀರಿಗಿಳಿದ ಸುಬಾನ್ ಸೆಳೆತಕ್ಕೆ ಸಿಲುಕಿದ್ದು ಆತನನ್ನು ರಕ್ಷಿಸಲು ಹೋಗಿ ನಾಲ್ವರು ನೀರು ಪಾಲಾಗಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ನೀರು ಪಾಲಾಗುತ್ತಿದ್ದ ಮೈಮೂನಾರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಬೆಳ್ತಂಗಡಿ ಪೊಲೀಸರು ಸ್ಥಳಕ್ಕಾಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ಶವಗಳನ್ನು ನೀರಿನಿಂದ ಮೇಲಕ್ಕೆತ್ತಲಾಗಿದೆ.