Advertisement
ನೆರೆಯಿಂದ ಮುಂಡಾಜೆ ಗ್ರಾಮದ ನೂಜಿ ನಿವಾಸಿ ಫ್ರಾನ್ಸಿಸ್ ಅವರ ಮನೆ ಮತ್ತು ಕೃಷಿ ತೋಟಕ್ಕೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿತ್ತು. ಮೂರು ದನ ಸಾವಿಗೀಡಾಗಿದ್ದವು, ದಾಸ್ತಾನಿರಿ ಸಿದ್ದ ಎರಡು ಸಾವಿರ ತೆಂಗಿನಕಾಯಿ, ಸಹಿತ ಇತರ ಸೊತ್ತುಗಳಿಗೆ ಹಾನಿ ಯಾಗಿತ್ತು. ನಿಶ್ಚಿತಾರ್ಥಕ್ಕಾಗಿ ಮದು ಮಗಳು ಮತ್ತು ಮನೆಮಂದಿಗೆ ಖರೀದಿಸಿ ಇರಿಸಿದ್ದ 15 ಸಾವಿರ ರೂಪಾಯಿಗೂ ಅಧಿಕ ಮೌಲ್ಯದ ಬಟ್ಟೆಬರೆಗಳು ನೆರೆಯ ನೆರೆಪಾಲಾಗಿ ದ್ದವು. ನಿಶ್ಚಿತಾರ್ಥದ ಹೊತ್ತಿಗೆ ನೆರೆಯೂ ಅದರ ಆಘಾತವೂ ಇಳಿದು ಸರಳ ಸಂಭ್ರಮ ಮನೆ ಮಾಡಿದೆ. ಫ್ರಾನ್ಸಿಸ್ ಕುಟುಂಬ ಈಗ ಮದು ವೆಯ ಸಂಭ್ರಮದಲ್ಲಿದೆ. ಪುತ್ರಿ ಶ್ವೇತಾಪಿ.ಎಸ್. ಅವರ ವಿವಾಹ ನಿಶ್ಚಿತಾರ್ಥವು ಆ.19ರಂದು ಮುಂಡಾಜೆ ಚರ್ಚ್‌ನಲ್ಲಿ ನಡೆದಿದ್ದು, ಆ.26ರಂದು ಬಂಟ್ವಾಳತಾಲೂಕಿನ ಮೂರ್ಜೆ ಚರ್ಚ್‌ನಲ್ಲಿ ಮದುವೆ ನೆರವೇರಲಿದೆ. ಪ್ರವಾಹದಿಂದ ತೊಂದರೆಯಾದ ಹಿನ್ನೆಲೆಯಲ್ಲಿ ನಿಶ್ಚಿತಾರ್ಥದಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಮನೆಯಲ್ಲಿ ತಯಾರಿಸ ಬೇಕಾಗಿದ್ದ ಅಡುಗೆಯನ್ನು ಕ್ಯಾಟರಿಂಗ್‌ನವರಿಗೆ ವಹಿಸಿದ್ದಾರೆ.
– ಫ್ರಾನ್ಸಿಸ್ ಟಿ.ಪಿ.
ವಧುವಿನ ತಂದೆ