ಬೆಳ್ತಂಗಡಿ: ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಂಗಳವಾರ ತಾ|ನ ಮಸೀದಿಗಳಲ್ಲಿ ಮುಸ್ಲಿಮರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಹಬ್ಬ ಆಚರಿಸಿದರು. ಪ್ರತಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆ, ಮೆರವಣಿಗೆ ಸಹಿತ ಮುಸ್ಲಿಮರು ಶುಭಾಶಯ ವಿನಿಮಯ ಮಾಡಿಕೊಂಡರು. ಜತೆಗೆ ರಸ್ತೆ ಬದಿ ಜ್ಯೂಸ್, ಸಿಹಿತಿಂಡಿ ಇಟ್ಟು ಸಾರ್ವಜನಿಕರಿಗೆ ಹಂಚಿದರು. ಕೆಲವೊಂದೆಡೆ ವಿಶೇಷ ಪ್ರವಚನಗಳನ್ನೂ ಆಯೋಜಿಸಲಾಗಿತ್ತು. ಬೆಳ್ತಂಗಡಿ ನಗರದ ಮಸೀದಿಯಲ್ಲೂ ಪ್ರಾರ್ಥನೆ ನಡೆದು ಮೆರವಣಿಗೆ ಜರಗಿತು.
ಮುಂಡಾಜೆ ಮಸೀದಿ
ಮುಂಡಾಜೆ ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸೀದಿ, ಮಸ್ಲಕ್ ಸಮಿತಿ, ಎಸ್ಸೆಸ್ಸೆಫ್, ಎಸ್‌ವೈಎಸ್ ಹಾಗೂ ಸುನ್ನೀ ಸಂಘಟನೆಗಳ ಸಹಕಾರದೊಂದಿಗೆ ಮೀಲಾದ್ ಕಾರ್ಯಕ್ರಮ ನಡೆಯಿತು.
ಸಮಿತಿ ಕಾರ್ಯಾಧ್ಯಕ್ಷ ಹಾಜಬ್ಬ, ಜಮಾಅತ್ ಅಧ್ಯಕ್ಷ ಅಬ್ದುಲ್ಲ ಧ್ವಜಾರೋಹಣಗೈದರು. ಇಬ್ರಾಹಿಂ ಸಖಾಫಿ ದುಆ ನೆರವೇರಿಸಿದರು. ಜಮಲುಲ್ಲೈಲಿ ಸುನ್ನಿ ಜುಮ್ಮಾ ಮಸ್ಜಿದ್ ಸ್ಥಾಪಕಾಧ್ಯಕ್ಷ ಅಶ್ರಫ್ ಆಲಿಕುಂಞಿ ಸ್ವಾಗತಿಸಿದರು. ಸಮಿತಿ ಕಾರ್ಯದರ್ಶಿ ರಮ್ಲ ನೆಕ್ಕರೆ, ಪ್ರಮುಖರಾದ ಶಬೀರ್, ಅಬ್ದುಲ್ಲ ನೆಕ್ಕರೆ, ಹಮೀದ್ ನೆಕ್ಕರೆ,ಉಸ್ಮಾನ್ ಎಂ.ಕೆ., ಕರೀಂ ಕೆ.ಎಸ್, ಅಯ್ಯೂಬ್ ಆಲಿಕುಂಞಿ, ಮುಹಮ್ಮದ್, ಕರೀಂ ಕುರುಡ್ಯ, ಆಸಿಫ್, ಮುಹಮ್ಮದ್, ಅಬೂಬಕ್ಕರ್ ಕೂಳೂರು, ಅಬುಸ್ವಾಲಿಹ್, ಲತೀಫ್, ಇಸ್ಮಾಯಿಲ್ ದರ್ಕಾಸ್, ಸಹಾಯಕ ಧರ್ಮ ಗುರು ಸಿದ್ದೀಕ್ ಸಖಾಫಿ ಮತ್ತಿತರರಿದ್ದರು.