Advertisement
ದ.ಕ. ಜಿಲ್ಲಾಧಿಕಾರಿಯಾದ ಬಳಿಕ ಮೊದಲನೇ ಬಾರಿಗೆ ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದ ಹಾನಿಗೀಡಾದ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ಮಿತ್ತಬಾಗಿಲು ಕಾಳಜಿ ಕೇಂದ್ರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದರು. ಜಿಪಿಎಸ್ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ತಾಂತ್ರಿಕ ತೊಂದರೆ ಜತೆಗೆ ಲೆಕ್ಕಪರಿಶೋಧನೆ ತಡವಾಗಿದ್ದರಿಂದ ಹೆಚ್ಚಿನ ಮಂದಿಗೆ ಎರಡನೇ ಕಂತು ಸಮಸ್ಯೆಯಾಗಿದೆ. ಪ್ರಸಕ್ತ ಜಿಪಿಎಸ್ ಪ್ರಕ್ರಿಯೆ ಪೂರ್ಣಗೊಂಡಿದೆ. ಸರಕಾರದಿಂದ ರಾಜ್ಯಕ್ಕೆ 334 ಕೋ. ರೂ. ಬಿಡುಗಡೆಯಾಗಿದ್ದು, ಅದರಲ್ಲಿ ದ.ಕ. ಜಿಲ್ಲೆಗೆ 6 ಕೋ.ರೂ. ರಾಜೀವ್ ಗಾಂಧಿ ವಸತಿ ಯೋಜನೆ ಯೋಜನೆಯಡಿ ನೀಡಲಾಗಿದೆ. ಸದ್ಯ 5 ಕೋ.ರೂ. ಶೀಘ್ರ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುವುದು ಎಂದರು.
ಮಿತ್ತಬಾಗಿಲು ಗ್ರಾಮದ ಗಣೇಶ ನಗರದಲ್ಲಿ ಭೂಕುಸಿತ ಸಂಭವಿಸಬಹುದು ಎಂಬ ಮುಂಜಾಗ್ರತೆಯಾಗಿ ಸ್ಥಳಾಂತರಿತ ಕುಟುಂಬದ ಸುರಕ್ಷೆ ಮತ್ತು ಅವರೊಂದಿಗೆ ಮಾತನಾಡಲು ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದೇನೆ ಎಂದು ಹೇಳಿ ನೂತನ ಜಿಲ್ಲಾಧಿಕಾರಿಗಳು ಇಲ್ಲಿರುವವರಿಗೆ ಸೂಕ್ತ ಸೌಲಭ್ಯ ಒದಗಿಸುವ ಭರವಸೆ ನೀಡಿದರು.
Related Articles
Advertisement
ಚಾರ್ಮಾಡಿ ಸಂಚಾರಕ್ಕೆ ಮುಕ್ತಮಳೆಯಿಂದಾಗಿ ಚಿಕ್ಕಮಗಳೂರು ರಸ್ತೆಯ ಚಾರ್ಮಾಡಿ ಘಾಟಿಯಲ್ಲಿ ವಾಹನಗಳ ಸಂಚಾರಕ್ಕೆ ನಿಷೇಧ ಹೇರ ಲಾಗಿತ್ತು. ಪ್ರಸಕ್ತ ರಸ್ತೆಯು ಸಂಚಾರಕ್ಕೆ ಮುಕ್ತವಾಗಿ ರುವುದರಿಂದ ಆ. 12ರಿಂದ ಮುಂಜಾನೆ 7ರಿಂದ ಸಂಜೆ 7ರ ವರೆಗೆ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಇರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.