Advertisement
ಮಟ್ಲದ ಓಂ ಶ್ರೀ ಗಜಮಾರುತಿ ನಿಲಯದಲ್ಲಿ ಕೃತ್ಯ ನಡೆದಿದ್ದು, ಆರೋಪಿಗಳಾದ ತಂದೆ ಮಂಜುನಾಥ ಎಸ್.ಜಿ. (53) ಹಾಗೂ ಸಹೋದರ ರಾಘವೇಂದ್ರ ಎಂ.ಎಂ.(30) ಅವರನ್ನು ದುಷ್ಕೃತ್ಯ ನಡೆದ ಕೆಲವೇ ತಾಸುಗಳಲ್ಲಿ ಪೊಲೀಸರು ಬಂಧಿಸಿದ್ದಾರೆ.
ಅಣ್ಣ ಚಾಕುವಿನಿಂದ ಇರಿದರು. ಇನ್ನೋರ್ವ ಸಹೋದರ ಪ್ರಸನ್ನ ಆಸ್ಪತ್ರೆಗೆ ಕರೆದೊಯ್ದರೂ ನವೀನ್ ಬದುಕಲಿಲ್ಲ.
Related Articles
ಡಿ. 31ರಂದು ಮನೆಯಲ್ಲಿ ಹೊಸ ವರ್ಷ ಆಚರಣೆ ಸಂದರ್ಭ ನವೀನ ಮತ್ತು ಮಂಜುನಾಥ ಅವರ ನಡುವೆ ಜಗಳವಾಗಿ ನವೀನ್ ತಂದೆಗೆ ಹೊಡೆದಿದ್ದನು ಹಾಗೂ ಕಿಟಿಕಿ ಗಾಜುಗಳನ್ನು ಪುಡಿ ಮಾಡಿದ್ದನು. ಬಳಿಕ ರಾಜಿಯಲ್ಲಿ ಪ್ರಕರಣ ಮುಗಿಸಿದ್ದರು. ಇದೇ ಕಾರಣವನ್ನು ಮುಂದಿಟ್ಟು ರವಿವಾರ ಮತ್ತೆ ತಂದೆ ಜಗಳ ತೆಗೆದಿದ್ದ ಎನ್ನಲಾಗಿದೆ. ಇನ್ನೊಂದು ಮೂಲಗಳ ಪ್ರಕಾರ ಅವರೊಳಗೆ ಆಸ್ತಿ ವೈಷಮ್ಯವೂ ಇದ್ದು ಕೊಲೆಗೆ ಅದೇ ಕಾರಣ ಎಂದೂ ಹೇಳಲಾಗುತ್ತಿದೆ. ನವೀನ ಅವರ ಪತ್ನಿ ಬೇಬಿ ನೀಡಿದ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಅವರು ತನಿಖೆ ನಡೆಸುತ್ತಿದ್ದಾರೆ.
Advertisement
ಕೆಲವೇ ತಾಸುಗಳಲ್ಲಿ ಬಂಧನಕೃತ್ಯ ಎಸಗಿದ ಆರೋಪಿಗಳಿಬ್ಬರೂ ತತ್‌ಕ್ಷಣ ತಮ್ಮ ಝೈಲೋ ಕಾರಿನಲ್ಲಿ ಪರಾರಿಯಾಗಿದ್ದರು. ಸರ್ಕಲ್ ಇನ್ಸ್‌ಪೆಕ್ಟರ್ ನಾಗೇಶ್ ಕದ್ರಿ ಸೂಚನೆಯಂತೆ ಎಸ್‌ಐ ರವಿ ಹಾಗೂ ತಂಡ ತತ್‌ಕ್ಷಣ ಕಾರ್ಯಾಚರಣೆಗಿಳಿದರು. ಸಂಬಂಧಿಯೊಬ್ಬರ ಮನೆಯಲ್ಲಿ ಆರೋಪಿಗಳು ಅರ್ಧ ತಾಸು ವಿಶ್ರಾಂತಿ ಪಡೆದ ಮಾಹಿತಿ ದೊರೆಯಿತು. ಅಲ್ಲಿ ದೊರೆತ ಮಾಹಿತಿಯಂತೆ ಆರೋಪಿಗಳ ಬೆನ್ನತ್ತಿದ ಪೊಲೀಸರು ಚಿಕ್ಕಮಗಳೂರು ನಗರದ ಉಪ್ಪಳಿ ದರ್ಗಾದ ಬಳಿ ಬಂಧಿಸಿದರು.