Advertisement

Belthangady: ಮನೆಯಿಂದ ನಗದು, ಚಿನ್ನಾಭರಣ ಕಳವು

09:00 PM Oct 28, 2024 | Team Udayavani |

ಬೆಳ್ತಂಗಡಿ: ಅಂಡಿಂಜೆ ಗ್ರಾಮದ ಪಾಂಡೀಲು ಹೊಸಮನೆ ಎಂಬಲ್ಲಿ ಅ.27 ರಂದು ಸಂಜೆ 5 ಗಂಟೆಯಿಂದ ಅ.28 ರ ಮಧ್ಯಾಹ್ನ 12:15 ಗಂಟೆ ಮಧ್ಯ ಅವಧಿಯಲ್ಲಿ ಮನೆಯಿಂದ ಚಿನ್ನಭಾರಣ ಹಾಗೂ ನಗದು ಕಳವಾದ ಘಟನೆ ನಡೆದಿದೆ.

Advertisement

ಪಾಂಡೀಲು ಹೊಸ ಮನೆ ನಿವಾಸಿ ಸುಜಾತಾ (51)ಅವರು ಮನೆಗೆ ಬೀಗ ಹಾಕಿ ತನ್ನ ತವರು ಮನೆಯಾದ ಅಳಿಯೂರು ಎಂಬಲ್ಲಿಗೆ ಹೋದ ಸಮಯ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಒಳಪ್ರವೇಶಿಸಿ ಕಳವು ಗೈದಿದ್ದಾರೆ. ಮನೆಯ ಗೋದ್ರೇಜ್‌ ಕಪಾಟಿನಲ್ಲಿದ್ದ ನಗದು 25,000 ರೂ. ಹಾಗೂ 5 ಗ್ರಾಂ. ತೂಕದ ಬೆಂಡೋಲೆ ಒಂದು ಜತೆ ಹಾಗೂ 4 ಗ್ರಾಂ. ತೂಕದ ಚಿನ್ನದ ಉಂಗುರ ಒಂದನ್ನು ಕಳವು ಮಾಡಿಕೊಂಡು ಹೋಗಿದ್ದು ಕಳುವಾದ ಸೊತ್ತುಗಳ ನಗದು ಸೇರಿ ಒಟ್ಟು 80,000 ರೂ. ಅಂದಾಜು ಮೌಲ್ಯ ಎಂದು ವೇಣೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next