Advertisement

ಬೆಳ್ತಂಗಡಿ, ಬಂಟ್ವಾಳ ಶಿಕ್ಷಕರಿಗೆ ಪಗಾರವಿಲ್ಲ !

07:36 AM Jun 04, 2018 | Team Udayavani |

ಮಂಗಳೂರು: ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಸರ್ವಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರಿಗೆ ಕಳೆದ ಮೂರು ತಿಂಗಳುಗಳಿಂದ ಸಂಬಳ ಸಿಕ್ಕಿಲ್ಲ. ಹೀಗಾಗಿ ರಜೆ ಕಳೆದು ಪಾಠ ಮಾಡಲು ಸಿದ್ಧರಾದ ಶಿಕ್ಷಕರ ಮುಖಗಳಲ್ಲಿ ಸಂತಸವಿಲ್ಲ. 

Advertisement

ಜಿಲ್ಲೆಯ ಇತರೆಲ್ಲ ತಾಲೂಕುಗಳ ಶಿಕ್ಷಕರಿಗೆ ಸಂಬಳ ಸಿಕ್ಕಿದೆ, ಇಲ್ಲಿ ಮಾತ್ರ ಯಾಕೆ ಸಮಸ್ಯೆ ಎಂಬ ಪ್ರಶ್ನೆಗೆ, ಇದು ಸಣ್ಣ ತಾಂತ್ರಿಕ ದೋಷದಿಂದ ಆದ ಸಮಸ್ಯೆ ಎಂಬ ಉತ್ತರ ಶಿಕ್ಷಣ ಇಲಾಖೆ ಯಿಂದ ಕೇಳಿಬರುತ್ತಿದೆ. ತಾಂತ್ರಿಕ ದೋಷ ಸಣ್ಣದಾದರೂ ಅದರ ಪರಿಣಾಮ ಮಾತ್ರ ದೊಡ್ಡದು ಎಂಬುದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಳಲು. 

ಸಮಸ್ಯೆ ಏನು? 
ಈ ಎರಡು ತಾಲೂಕುಗಳಿಗೆ ಶಿಕ್ಷಣ ಇಲಾಖೆಯಿಂದ ಶಿಕ್ಷಕರ ವೇತನಕ್ಕಾಗಿ ಹಣಕಾಸು ಇಲಾಖೆಯಿಂದ ಬರುವ ಅನುದಾನ ಅದಲು ಬದಲಾಗಿರು ವುದೇ ಸಮಸ್ಯೆಗೆ ಮೂಲ ಕಾರಣ. ಅಂದರೆ ಬೆಳ್ತಂಗಡಿ ತಾಲೂಕಿಗೆ ಬಂಟ್ವಾಳದ್ದು, ಬಂಟ್ವಾಳಕ್ಕೆ ಬೆಳ್ತಂಗಡಿ ಯದು ಬಿಡುಗಡೆಯಾಗಿದೆ. ಇವೆರಡು ತಾಲೂಕುಗಳಲ್ಲಿ ಇರುವ ಶಿಕ್ಷಕರ ಸಂಖ್ಯೆಯಲ್ಲಿ ಅಜಗಜಾಂತರವಿದ್ದು, ಸಹಜವಾಗಿ ಅನುದಾನ ಮೊತ್ತ ದಲ್ಲಿಯೂ ಅಂತರವಿದೆ. ಬಂಟ್ವಾಳ ತಾಲೂಕಿನಲ್ಲಿ ಸರ್ವ ಶಿಕ್ಷಣ ಅಭಿಯಾನ ಹಾಗೂ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿಯಲ್ಲಿ ಕರ್ತವ್ಯ 

ನಿರ್ವಹಿಸುತ್ತಿರುವ ಶಿಕ್ಷಕರ ಸಂಖ್ಯೆ ಸುಮಾರು 126, ಬೆಳ್ತಂಗಡಿ ತಾಲೂಕಿನಲ್ಲಿರುವ ಶಿಕ್ಷಕರ ಸಂಖ್ಯೆ ಬಹಳ ಕಡಿಮೆ. ಹೀಗಾಗಿ ವೇತನ ಅನುದಾನ ಬಿಡುಗಡೆಯಾಗಿದ್ದರೂ ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅದನ್ನು ಶಿಕ್ಷಕರ ವೇತನಕ್ಕಾಗಿ ಬಳಸಿಕೊಳ್ಳುವ ಸ್ಥಿತಿ ಇಲ್ಲ. ಇದು ಅನುದಾನ ಬಿಡುಗಡೆ ಮಾಡುವ ಹಣಕಾಸು ಇಲಾಖೆಯ ಅಧಿಕಾರಿಗಳೇ ಸರಿಪಡಿಸಿಕೊಳ್ಳಬೇಕಾದ ತಪ್ಪಾಗಿ ರುವುದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮೇಲಧಿಕಾರಿಗಳಿಗೆ ದೂರು ನೀಡಿ, ತಪ್ಪು ಸರಿಪಡಿಸುವಂತೆ ಕೋರಿದ್ದಾರೆ. 

ಶಿಕ್ಷಕರ ಸಂಘದ ಒತ್ತಾಯ
ಶಿಕ್ಷಕರ ಸಂಕಷ್ಟವನ್ನು “ಉದಯ ವಾಣಿ’ಯ ಜತೆ ಹಂಚಿಕೊಂಡ ರಾಜ್ಯ ಪ್ರಾ.ಶಾ. ಶಿಕ್ಷಕರ ಸಂಘದ ದ.ಕ. ಜಿಲ್ಲಾ ಸಮಿತಿಯ ಅಧ್ಯಕ್ಷ ಶಿವಶಂಕರ್‌ ಭಟ್‌ ಕೆ., ಮಾರ್ಚ್‌ನಿಂದ ವೇತನ ಸಿಗದೆ ಶಿಕ್ಷಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ದ್ದಾರೆ. ಬೇಸಿಗೆ ರಜೆಯನ್ನು ಸಂತಸ ದಿಂದ ಕುಟುಂಬದೊಂದಿಗೆ ಕಳೆಯ ಬೇಕಾಗಿದ್ದ ಅವರು ಆರ್ಥಿಕ ಮುಗ್ಗಟ್ಟಿ ನಿಂದಿದ್ದರು. ಈಗ ಶಾಲೆ ಪ್ರಾರಂಭ ವಾಗಿದ್ದು, ಅಸಂತೋಷ ದಿಂದಲೇ ಕರ್ತವ್ಯಕ್ಕೆ ಹಾಜರಾಗು ತ್ತಿದ್ದಾರೆ. ಇದೊಂದು ಗಂಭೀರ ವಿಚಾರ, ಸಂಬಂಧಪಟ್ಟ ಅಧಿಕಾರಿಗಳು ತಪ್ಪು ಸರಿ ಪಡಿಸಿ ಶೀಘ್ರದಲ್ಲೇ ವೇತನ ಬಿಡುಗಡೆ ಯಾಗುವಂತೆ ಮಾಡಬೇಕು ಎಂದರು. 

Advertisement

ಇನ್ನೆರಡು ದಿನಗಳಲ್ಲಿ   ಇತ್ಯರ್ಥ ನಿರೀಕ್ಷೆ :
ಜಿಲ್ಲಾ  ಉಪಯೋಜನಾ ಸಮನ್ವಯಾಧಿಕಾರಿ ಜಿಲ್ಲಾ ಉಪಯೋಜನಾ ಸಮನ್ವಯಾಧಿಕಾರಿ ಮಹಾದೇವ್‌ ಎಸ್‌.ಪಿ. ಅವರನ್ನು ಸಂಪರ್ಕಿಸಿದಾಗ, ಸರ್ವಶಿಕ್ಷಾ ಅಭಿಯಾನದ ನಿರ್ದೇಶಕರಿಗೆ ಪತ್ರ ಬರೆಯ ಲಾಗಿದ್ದು, ತಾಂತ್ರಿಕ ದೋಷದಿಂದ ವೇತನ ಬಿಡುಗಡೆ ಅದಲು ಬದ ಲಾಗಿದೆ ಎಂದು ತಿಳಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ದೋಷ ಸರಿಪಡಿಸಿ ಮುಂದೆ ವೇತನ ವಿತರಣೆ ವಿಳಂಬ ಆಗದಂತೆ ನೋಡಿಕೊಳ್ಳಲಾಗುವುದು ಎಂದರು. 

ಎರಡು ತಿಂಗಳ ಸಂಬಳ ವಿತರಣೆಗೆ ಕ್ರಮ: ಬಿಇಒ 
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಎನ್‌. ಶಿವಪ್ರಕಾಶ್‌ ಅವರು ಶಿಕ್ಷಕರು ಪದೇಪದೇ ವೇತನಕ್ಕಾಗಿ ವಿಚಾರಿಸುತ್ತಿರುವುದಾಗಿ ತಿಳಿಸಿದ್ದಾರೆ. “ಅನುದಾನ ನೀಡಿಕೆಯಲ್ಲಿ ಉಂಟಾದ ತಪ್ಪನ್ನು ಸರಿಪಡಿಸಲಾಗುವುದೆಂಬ ಉತ್ತರ ಮೇಲಧಿಕಾರಿಗಳಿಂದ ಸಿಕ್ಕಿದೆ. ಒಂದು ವೇಳೆ ಅದು ವಿಳಂಬವಾದರೆ, ಈಗಾಗಲೇ ಬಿಡುಗಡೆಯಾದ ಅನುದಾನವನ್ನೇ ಬಳಸಿ ಬಾಕಿ ಇರುವ ಮೂರು ತಿಂಗಳ ಸಂಬಳದಲ್ಲಿ ಎರಡು ತಿಂಗಳದ್ದನ್ನು ನೀಡಲಾಗುವುದು’ ಎಂದರು.

ಗಣೇಶ್‌ ಮಾವಂಜಿ 

Advertisement

Udayavani is now on Telegram. Click here to join our channel and stay updated with the latest news.

Next