ಬೆಳ್ತಂಗಡಿ: ಮದ್ದಡ್ಡದ ಕಿನ್ನಿಗೊಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ರಾತ್ರಿವೇಳೆ ಬೈಕ್ ಮತ್ತು ಲಾರಿ ನಡುವೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರ ಪೈಕಿ ಒಬ್ಬರು ಗುರುವಾಯನಕೆರೆಯವರಾದರೆ ಮತ್ತೊರ್ವರು ನಾವೂರದವರು ಎಂದು ತಿಳಿದು ಬಂದಿದೆ.
ಮೃತರನ್ನು ನಾವೂರಿನ ನಿವಾಸಿ ಹಮೀದ್ ಕುದುರು ಅವರ ಪುತ್ರ ಮಿಸ್ಬಾಹುದ್ದೀನ್(19) ಎಂದು ತಿಳಿದುಬಂದಿದೆ. ಮತ್ತೋರ್ವ ಯುವಕ ಕುವೆಟ್ಟು ಗ್ರಾಮದ ಗುರುವಾಯನಕೆರೆ ನಿವಾಸಿ ಅಶ್ರಫ್ ಅವರ ಪುತ್ರ ಅಶ್ಫಾನ್(19) ಎಂದು ಗುರುತಿಸಲಾಗಿದೆ.
ಮೃತ ಇಬ್ಬರೂ ಯುವಕರು ಮದ್ದಡ್ಕ ಮಸೀದಿ ಎದುರಿನ ಮಟನ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದವರು. ಎಂದಿನಂತೆ
Related Articles
ಕೆಲಸ ಮುಗಿಸಿ ಮನೆಕಡೆಗೆ ಹೊರಟಿದ್ದರು. ಇವರಿಗೆ ಡಿಕ್ಕಿ ಹೊಡೆದ ಟಿಪ್ಪರ್ ಲಾರಿ ಗುರುವಾಯನಕೆರೆ ಯಿಂದ ಮದ್ದಡ್ಕ ಕಡೆಗೆ ಹೋಗುತ್ತಿತ್ತು.