Advertisement
ಈ ಬಾರಿ ಪಶ್ಚಿಮಘಟ್ಟ ಸುರಕ್ಷಿತವಾಗಿದ್ದ ಪರಿಣಾಮ ಸಂಭವನೀಯ ಅಪಾಯ ತಗ್ಗಿದೆ. ಇಲ್ಲದೇ ಹೋದಲ್ಲಿ ದೊಡ್ಡ ದುರಂತ ಮತ್ತೆ ಮರುಕಳಿಸುವ ಸಾಧ್ಯತೆ ಎದುರಾಗಿತ್ತು. 2019ರ ಬಳಿಕ ಇದೇ ಮೊದಲ ಬಾರಿಗೆ ನೇತ್ರಾವತಿ, ಮೃತ್ಯುಂಜಯ, ಸೋಮಾವತಿ ನದಿ ಉಕ್ಕಿ ಈ ಮಟ್ಟದ ನೆರೆ ಹಾಗೂ ಹಾನಿ ಎದುರಾಗಿತ್ತು.
ಲಾೖಲ ಗ್ರಾಮದ ಪುತ್ರಬೈಲು ಮತ್ತು ಗುರಿಂಗಾನ ಎಂಬಲ್ಲಿ ವಿಪರೀತ ಮಳೆಯಿಂದಾಗಿ ಹತ್ತಾರು ವಾಸ್ತವ್ಯದ ಮನೆಯೊಳಗೆ ನೀರು ನುಗ್ಗಿದ್ದರಿಂದ ಇಲ್ಲಿನ ಕರ್ನೋಡಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆದು ಮನೆಮಂದಿಯನ್ನು ಇರಿಸಲು ತಾಲೂಕು ಆಡಳಿತ ಸೂಚಿಸಿದೆ.
Related Articles
ತೀವ್ರ ಮಳೆಯಿಂದಾಗಿ ಉಜಿರೆ ಎಸ್‌ಡಿಎಂ ಆಸ್ಪತ್ರೆಯ ಕಾಂಕ್ರೀಟ್ ತಡೆಗೋಡೆ ಕುಸಿದಿದ್ದು, ಕೆಳಭಾಗದಲ್ಲಿ ನಿಲ್ಲಿಸಿದ್ದ ಸಿಬಂದಿಗಳ ಸುಮಾರು 20ಕ್ಕೂ ಅಧಿಕ ದ್ವಿಚಕ್ರ ವಾಹನದ ಮೇಲೆ ಬಿದ್ದಿದೆ. ತಡೆಗೋಡೆ ಹಿಂಬದಿ ಮಹಮ್ಮದ್ ಇಜಾಜ್ ಅವರ ಮನೆಯಿದ್ದು, ಮನೆ ಸಮೀಪದವರೆಗೆ ಮಣ್ಣು ಕುಸಿದಿದ್ದು ಮನೆ ಕುಸಿಯವ ಭೀತಿ ಎದುರಾಗಿದೆ. ಇದರಿಂದ ಮನೆಮಂದಿ ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ.
Advertisement
ಉಜಿರೆ ರಾ. ಹೆದ್ದಾರಿ ಜಲಾವೃತಬೆಳ್ತಂಗಡಿ -ಉಜಿರೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕೆಳಗಿನ ಪೇಟೆ ಪೆಟ್ರೋಲ್ ಬಂಕ್‌ನಿಂದ ಬೆನಕ ಆಸ್ಪತ್ರೆವರೆಗೆ ರಸ್ತೆಯಲ್ಲಿ ದ್ವಿಚಕ್ರ ವಾಹನ ಮುಳುಗಡೆಯಾಗುವಷ್ಟು ಮಟ್ಟಿಗೆ ರಸ್ತೆಯಲ್ಲಿ ಹೊಳೆಯಂತೆ ತುಂಬಿತ್ತು. ಪರಿಣಾಮ ಹೆದ್ದಾರಿ ಸಂಚಾರ ತಾಸುಗಟ್ಟಲೆ ತಡೆಯಾಯಿತು. 50 ಮನೆಗಳಿಗೆ ಸಮಸ್ಯೆ
ಕಲ್ಮಂಜ ಗ್ರಾಮದ ಗುತ್ತುಬೈಲು ಸಂಪರ್ಕ ರಸ್ತೆಯ ಕಿರು ಸೇತುವೆ ತೀವ್ರ ಮಳೆಗೆ ಮುರಿದು ಸಂಪರ್ಕ ಕಡಿತಗೊಂಡಿದೆ. ಇದರಿಂದ 50 ಮನೆಗಳಿಗೆ ಸಂಪರ್ಕಕ್ಕೆ ತೊಂದರೆ ಆದ ಘಟನೆ ನಡೆದಿದೆ.