Advertisement
ಶನಿವಾರ ಇಲ್ಲಿನ ತಾ.ಪಂ. ಸಭಾಂ ಗಣದಲ್ಲಿ ತಾ|ನ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಸಭೆ ನಡೆಸಿದ ಅವರು, ರಾಜ್ಯದಲ್ಲೇ ಮೊದಲ ಬಾರಿಗೆ ಅರಣ್ಯ ದಂಚಿನ 5 ಸಾವಿರ ಕುಟುಂಬಗಳಿಗೆ ಅಡುಗೆ ಅನಿಲ ಸೌಲಭ್ಯ ವಿತರಿಸಲಾಗಿದೆ. ಒಟ್ಟು 10,573 ಕುಟುಂಬಗಳಿಗೆ ಸೌಲಭ್ಯ ವಿತರಿಸಲಾ ಗಿದ್ದು, 4,700 ಕುಟುಂಬಗಳಿಗೆ ವಿತ ರಣೆಗೆ ಬಾಕಿ ಇದೆ ಎಂದು ಅಂಕಿಅಂಶ ಹೇಳುತ್ತಿದೆ. ಆದರೆ ಕೆಲವೊಂದು ಗ್ರಾ.ಪಂ.ಗಳಲ್ಲಿ ಹೆಚ್ಚಿನ ಕುಟುಂಬಗಳಿಗೆ ವಿತರಣೆಗೆ ಬಾಕಿ ಇದ್ದು, ಗ್ಯಾಸ್ ಏಜೆನ್ಸಿಗಳ ಮೂಲಕ ಅರ್ಜಿ ಪಡೆದು ವಿತರಣೆಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಪ್ರತಿ ಮನೆ ಮನೆಯ ವರದಿ ಸಂಗ್ರಹಿಸಿ, ಹೊಗೆ ಮುಕ್ತ ತಾಲೂಕು ಘೋಷಣೆಗೆ ಸಹಕರಿಸುವಂತೆ ತಿಳಿಸಿದರು.
ತಾ|ನಲ್ಲಿ ನಿವೇಶನ ವಿತರಣೆ ಕುರಿತು ಹಲವು ದೂರುಗಳು ಬರು ತ್ತಿವೆ ಎಂದ ಶಾಸಕರು, ಪ್ರತಿ ಗ್ರಾ.ಪಂ.ಗಳ ಪಿಡಿಒಗಳಿಂದ ಲಭ್ಯ ಸರಕಾರಿ ಜಾಗದ ಮಾಹಿತಿ, ನಿವೇಶನ ಹಂಚಿಕೆಗೆ ತೆಗೆದುಕೊಂಡ ಕ್ರಮ, ನಿವೇಶನದ ಬೇಡಿಕೆ ಕುರಿತು ಮಾಹಿತಿ ಪಡೆದರು. ಹೆಚ್ಚಿನ ಗ್ರಾ.ಪಂ.ಗಳಲ್ಲಿ ಅರಣ್ಯ ಇಲಾಖೆ ಆಕ್ಷೇಪದ ಕುರಿತು ತಿಳಿಸಿದರು. ಅಂತಹ ಆಕ್ಷೇಪ ಬಂದರೆ ಅವುಗಳನ್ನು ತನಿಖೆ ಮಾಡಿ, ನಿವೇಶನಕ್ಕೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು. ಬಡ ಕುಟುಂಬ ಗಳಿಗೆ ಸ್ವಂತ ನಿವೇಶನ ನೀಡಿದರೆ ನಿಮಗೂ ಪುಣ್ಯ ಪ್ರಾಪ್ತಿಯಾಗುತ್ತದೆ ಎಂದರು.
Related Articles
Advertisement
ಪ್ರತಿ ಗ್ರಾಮಗಳಲ್ಲಿ ಹಿಂದೂ ರುದ್ರ ಭೂಮಿ ಅಗತ್ಯವಾಗಿದ್ದು, ಹೀಗಾಗಿ ನಿವೇ ಶನ ಕಾಯ್ದಿರಿಸಲು ಕ್ರಮ ಕೈಗೊಳ್ಳಬೇಕು. ಬಾಕಿಯಿರುವ ನಿಡ್ಲೆ ಗ್ರಾ.ಪಂ.ನಲ್ಲಿ ರುದ್ರಭೂಮಿಗೆ ಶೀಘ್ರ ಕ್ರಮವಾಗಬೇಕು ಎಂದರು. ತಾಲೂಕಿನ 15 ಗ್ರಾ.ಪಂ.ಗಳಲ್ಲಿ ರುದ್ರಭೂಮಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಕುಸುಮಾಧರ್ ಬಿ. ತಿಳಿಸಿದರು. ಗ್ರಾ.ಪಂ.ಗಳಲ್ಲಿ ಆರ್‌ಟಿಸಿ ಹಾಗೂ ಆಧಾರ್ ಕಾರ್ಡ್ ನೀಡುವ ವ್ಯವಸ್ಥೆಗಳನ್ನು ಸರಿಪಡಿಸುವಂತೆ ಸೂಚಿಸಿದರು.
ತಾ.ಪಂ. ಅಧ್ಯಕ್ಷೆ ದಿವ್ಯಜ್ಯೋತಿ, ಉಪಾಧ್ಯಕ್ಷೆ ವೇದಾವತಿ, ಸ್ಥಾಯೀ ಸಮಿತಿ ಅಧ್ಯಕ್ಷ ವಿ.ಟಿ. ಸೆಬಾಸ್ಟಿನ್ ಉಪಸ್ಥಿತರಿದ್ದರು. ತಾಲೂಕು ಸಂಯೋಜಕ ಜಯಾನಂದ ಲಾೖಲ ಸ್ವಾಗತಿಸಿ, ವಂದಿಸಿದರು.
ಕೆರೆಗಳ ಅಭಿವೃದ್ಧಿ ಅಗತ್ಯ ಪ್ರಸ್ತುತ ಇತರ ಜಿಲ್ಲೆಗಳಲ್ಲಿ ಕಾಡುತ್ತಿರುವ ಜಲಕ್ಷಾಮ ನಮ್ಮ ತಾಲೂಕಿಗೂ ಬಾರದಂತೆ ಕ್ರಮ ಕೈಗೊಳ್ಳಲು ತಾ|ನ ಸಾರ್ವಜನಿಕ ಕೆರೆಗಳ ಅಭಿವೃದ್ಧಿಗೆ ಪಿಡಿಒಗಳು ಹೆಚ್ಚಿನ ಮುತುವರ್ಜಿ ವಹಿಸ ಬೇಕಿದೆ. ಉದ್ಯೋಗ ಖಾತರಿ ಯೋಜನೆಯಲ್ಲಿ ಕೆರೆಗಳ ಹೂಳೆತ್ತುವುದಕ್ಕೆ ಅವಕಾಶವಿದ್ದು, ಗ್ರಾ.ಪಂ. ವ್ಯಾಪ್ತಿಯಲ್ಲಿ ಲಭ್ಯವಿ ರುವ ಕೆರೆಗಳ ಮಾಹಿತಿ ಸಂಗ್ರಹಿಸಬೇಕು. ಜತೆಗೆ ಒತ್ತುವರಿ ಕುರಿತೂ ಕ್ರಮ ಜರಗಿಸಬೇಕಾಗಿದ್ದು, ಕೆರೆಗಳ ಅಭಿವೃದ್ಧಿಗೆ ತಾನೂ ಅನುದಾನ ನೀಡುವುದಾಗಿ ಶಾಸಕ ಪೂಂಜ ಭರವಸೆ ನೀಡಿದರು.