Advertisement

Indabettu ಗ್ರಾ.ಪಂ.ನಲ್ಲಿ ಅವ್ಯಹಾರ ಪ್ರಕರಣ; ಬೆಂಗಳೂರು ಲೋಕಾಯುಕ್ತ ಅಧಿಕಾರಿಗಳಿಂದ ತನಿಖೆ

09:52 PM Jul 10, 2024 | Team Udayavani |

ಬೆಳ್ತಂಗಡಿ: ಇಂದಬೆಟ್ಟು ಗ್ರಾಮ ಪಂಚಾಯತ್‌ನಲ್ಲಿ ಸಿಸಿ ಚರಂಡಿ ಕಾಮಗಾರಿಯಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ದೂರಿನ ಮೇರೆಗೆ, ಪ್ರಕರಣ ಸಂಬಂಧ ಎರಡು ದಿನಗಳಿಂದ ಬೆಂಗಳೂರು ಲೋಕಾಯುಕ್ತ ಪೊಲೀಸರು ತನಿಖೆ ನಡೆಸಿದ್ದಾರೆ.

Advertisement

ಈ ಪಂಚಾಯತ್‌ನಲ್ಲಿ 2021-22ರಲ್ಲಿ ಚರಂಡಿ ಕಾಮಗಾರಿಯಲ್ಲಿ 30 ಲಕ್ಷ ರೂ. ಅನುದಾನ ಅವ್ಯವಹಾರ ನಡೆಸಲಾಗಿದೆ. ಚರಂಡಿ ಕೆಲಸವನ್ನು ಶೇ. 20ರಷ್ಟು ನಡೆಸಿಲ್ಲ ಎಂದು ಈ ಹಿಂದೆ ಮಾಜಿ ಶಾಸಕ ಕೆ.ವಸಂತ ಬಂಗೇರ ನೇತೃತ್ವದಲ್ಲಿ ಪಂಚಾಯತ್‌ ಮುಂದೆ ಪ್ರತಿಭಟನೆ ನಡೆಸಲಾಗಿತ್ತು.

ಬಳಿಕ ಹಿಂದಿನ ಪಿಡಿಒ, ಗ್ರಾ.ಪಂ ಅಧ್ಯಕ್ಷ, ಎಂಜಿನಿಯರ್‌ ವಿರುದ್ಧ ಸ್ಥಳೀಯ ನಿವಾಸಿ ಜಯರಾಮ್‌ ಗೌಡ ಬಂಗಾಡಿ ಅವರು 2023ರ ಜೂನ್‌ನಲ್ಲಿ ಬೆಂಗಳೂರು ಲೋಕಾಯಯಕ್ತ ಕೇಂದ್ರ ಕಚೇರಿಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಅಂತರಿಕ ತನಿಖೆ ನಡೆಸುತ್ತಿದ್ದರು. ಇದೀಗ ಬೆಂಗಳೂರು ಲೋಕಾಯುಕ್ತ ಕೇಂದ್ರ ಕಚೇರಿಯ ಹಿರಿಯ ಉಪ ನಿರ್ದೇಶಕರು ತಾಂತ್ರಿಕ ವಿಭಾಗದ ಎಂಜಿನಿಯರ್‌ ಪ್ರಕಾಶ್‌ ಬಣಕಾರ್‌ ಮತ್ತು ಸಹಾಯಕ ಎಂಜಿನಿಯರ್‌ ತೇಜಶ್ರೀ ಮತ್ತು ಮಂಗಳೂರು ಲೋಕಾಯುಕ್ತ ಕಚೇರಿಯ ಸಿಬಂದಿಗಳ ನೇತೃತ್ವದ ತಂಡ ಇಂದಬೆಟ್ಟು ಗ್ರಾ.ಪಂ.ಗೆ ಆಗಮಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದರು. ಮತ್ತೆ ಜು.10ರಂದು ಇಂದಬೆಟ್ಟು ಗ್ರಾ.ಪಂ.ಗೆ ಬಂದು ತನಿಖೆ ನಡೆಸಿ ದೂರುದಾರ ಜಯರಾಮ್‌ ಬಂಗಾಡಿ ಜತೆ ಚರಂಡಿ ಕೆಲಸಗಳನ್ನು ಪರಿಶೀಲನೆ ನಡೆಸಿ ಮಹಜರು ಮಾಡಿ ತೆರಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next