Advertisement

ಬೆಳ್ತಂಗಡಿ: ನಡ ಹೊಳೆಯಲ್ಲಿ ಮುಳುಗಿ 4 ಸಾವು

03:45 AM Jan 12, 2017 | Team Udayavani |

ಬೆಳ್ತಂಗಡಿ: ನಡ ಗ್ರಾಮದ ಆಂತ್ರಾಯಪಲ್ಕೆಯಲ್ಲಿ ಬುಧವಾರ ಸಂಜೆ ಕಾಪು ಮೂಲದ ನಾಲ್ವರು ನದಿಗೆ ಬಿದ್ದು ಮೃತಪಟ್ಟಿದ್ದಾರೆ. ಮಹಿಳೆಯೋರ್ವರನ್ನು ರಕ್ಷಿಸಲಾಗಿದೆ.

Advertisement

ಉಡುಪಿ ಜಿಲ್ಲೆಯ ಕಾಪು ಮಲ್ಲಾರು ಪಕೀರಣಕಟ್ಟೆ ಶಾಹಿಲ್‌ ಮಂಜಿಲ್‌ನ ಅಬ್ದುಲ್ಲಾ ಅವರ ಪುತ್ರಿ ರುಬೀನಾ (25), ಪತಿ ಅಬ್ದುಲ್‌ ರಹೀಂ (30), ರುಬೀನಾ ಅವರ ತಂಗಿ ಯಾಸ್ಮಿನ್‌ (27), ರುಬೀನಾ ಅವರ ಸಹೋಧಿದರಿ ಪೌಝಿಯಾ ಅವರ ಪುತ್ರ ಸುಬಾನ್‌ (16) ಮೃತರು. ಅಬ್ದುಲ್ಲಾ ಅವರ ಪತ್ನಿ ಮೈಮುನಾ (50) ಅವರನ್ನು ರಕ್ಷಿಸಲಾಗಿದೆ.

ಕಾಜೂರಿಗೆ ಬಂದವರು
ರುಬೀನಾ ಅವರ ತವರು ಮನೆಯವರು ಹಾಗೂ ಪತಿ ಬುಧವಾರ ಬೆಳಗ್ಗೆ 7 ಗಂಟೆಗೆ ಕಾಪುವಿನಿಂದ ರಿಟ್ಜ್ ಕಾರಿನಲ್ಲಿ ಹೊರಟು ಮಧ್ಯಾಹ್ನ ವೇಳೆಗೆ ಬೆಳ್ತಂಗಡಿ ತಾಲೂಕಿನ ಕಾಜೂರು ದರ್ಗಾಕ್ಕೆ ಆಗಮಿಸಿದ್ದರು. ದರ್ಗಾ ಸಮೀಪ ಊಟ ಮಾಡಿ ಗಡಾಯಿಕಲ್ಲಿಗೆ ಬಂದಿದ್ದರು. ಗಡಾಯಿಕಲ್ಲು ಸಮೀಪದ ದರ್ಗಾಕ್ಕೆ ಭೇಟಿ ನೀಡಿ ಮರಳುವಾಗ ನಡ ಗ್ರಾಮದ ಆಂತ್ರಾಯಪಲ್ಕೆಯಲ್ಲಿ  ಹೊಳೆಧಿಯಲ್ಲಿ  ನೀರು ಕಂಡು ಸುಬಾನ್‌ಗೆ ಸ್ನಾನ ಮಾಡುವ ಮನಸ್ಸಾಗಿದ್ದು, ನೀರಿಗಿಳಿದಾಗ ಕಾಲು ಜಾರಿ ಬಿದ್ದರು. ತತ್‌ಕ್ಷಣ ಅವರ ಜತೆಗಿದ್ದ ಭಾವ ರಹೀಂ, ರುಬೀನಾ, ಯಾಸ್ಮಿನ್‌, ಮೈಮುನಾ ಸುಬಾನ್‌ನನ್ನು ರಕ್ಷಿಸಲು ನೀರಿಗೆ ಧುಮುಕಿದರು. ಆದರೆ ಯಾರಿಂದಲೂ ಯಾರನ್ನೂ ರಕ್ಷಿಸಲು ಸಾಧ್ಯವಾಗಲಿಲ್ಲ.

ಸ್ಥಳೀಯರಿಂದ ರಕ್ಷಣೆ
ನಡದ ಶ್ಯಾಮಸುಂದರ ಅವರ ಮನೆ ಸಮೀಪ ರಬ್ಬರು ತೋಟದಲ್ಲಿ ಕೆಲಸ ನಡೆಯುತ್ತಿದ್ದು, ಅಲ್ಲಿದ್ದ ನಡ ಗ್ರಾಮದ ಬೊಜಾರ ಮನೆ ಮೋಹನ ಗೌಡ ಅವರಿಗೆ ನದಿಯಿಂದ ಮಹಿಳೆಯ ಬೊಬ್ಬೆ ಕೇಳಿಸಿತು. ತತ್‌ಕ್ಷಣ ನದಿಗೆ ಧಾವಿಸಿದಾಗ ನೀರಿನಲ್ಲಿ ಒದ್ದಾಡುತ್ತಿದ್ದ ಮೈಮುನಾರನ್ನು ಕಂಡರು. ಅವರನ್ನು ಮೇಲೆತ್ತಿ ರಕ್ಷಿಸಿದಾಗ ಇನ್ನೂ ನಾಲ್ವರು ನೀರಿನಲ್ಲಿ ಮುಳುಗಿರುವ ಮಾಹಿತಿ ನೀಡಿದರು. ಸುನಿಲ್‌ ಶೆಟ್ಟಿ, ನೋಣಯ್ಯ ಗೌಡ, ಸುಂದರ ಗೌಡ ಅವರು ನೀರಿನಲ್ಲಿ ಬಿದ್ದವರನ್ನು ಮೇಲೆತ್ತಿದರು. ಆದರೆ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಸುಮಾರು ಆರು ಅಡಿ ಆಳದ ಹೊಂಡಧಿದಲ್ಲಿ ಮುಳುಗಿ ಎಲ್ಲರೂ ಮೃತಧಿಪಟ್ಟಿದ್ದರು. ಮೈಮುನಾ ಅವಧಿರನ್ನು ಸುನಿಲ್‌ ಅವರ ರಿಕ್ಷಾದ ಮೂಲಕ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಕ್ಷಿಸಿದ ಮೋಹನ್‌ ಅವರು ಬಸ್‌ ಚಾಲಕ ವೃತ್ತಿಯವರು.

ಜತೆಗಿದ್ದರು
ರುಬೀನಾ ಅವರ ತಂಗಿ ಸಾಹಿನಾ (20), ಮಕ್ಕಳಾದ ಸುಲೈಲಾ, ಶೈಮಾ ಅವರು ಕಾರಿನಲ್ಲಿಯೇ ಇದ್ದು ನೀರಿಗಿಳಿದಿರಲಿಲ್ಲ. ರಹೀಂ ಹಾಗೂ ರುಬೀನಾ ಅವರ 1 ವರ್ಷದ ಮಗು ರಿಜ್ಮಾ ಕೂಡ ಕಾರಿನಲ್ಲಿಯೇ ಇದ್ದಳು. ಮೈಮುನಾ ಅವರ ಹಿರಿಯ ಪುತ್ರಿ ಪೌಝಿಯಾ – ಇಕ್ಬಾಲ್‌ ಅವರ ಪುತ್ರ ಸುಬಾನ್‌ ಕಾಪು ಉರ್ದು ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿ. ಯಾಸ್ಮಿನ್‌ ಅವಿವಾಹಿತೆ. ಮೃತ ಅಬ್ದುಲ್‌ ರಹೀಂ ಕಾಪುನಿವ ಬೆಳಪು ಗ್ರಾಮದವರು. ಬಸ್‌ ಚಾಲಕ ವೃತ್ತಿಯವರಾಗಿದ್ದು ಪತ್ನಿ ಮನೆಯಲ್ಲಿ ನೆಲೆಸಿದ್ದರು.

Advertisement

ತಹಶೀಲ್ದಾರ್‌ ತಿಪ್ಪೆಸ್ವಾಮಿ, ಸರ್ಕಲ್‌ ಇನ್ಸ್‌ಪೆಕ್ಟರ್‌ ನಾಗೇಶ್‌ ಕದ್ರಿ, ಎಸ್‌ಐ ರವಿ, ಎಎಸ್‌ಐ ಕಲೈಮಾರ್‌ ಭೇಟಿ ನೀಡಿದ್ದರು. ಏನೂ ಅರಿಯದ ಮಕ್ಕಳು ಕಾರಿನಲ್ಲಿದ್ದರೆ ಸಾಹಿನಾ ಅವರು ಘಟನೆಯಿಂದ ತತ್ತರಗೊಂಡಿದ್ದರು. ಜಿಲ್ಲಾ ಎಸ್‌ಪಿ ಭೂಷಣ್‌ ಜಿ. ಬೊರಸೆ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಅಪಾಯಕಾರಿ ಸ್ಥಳ
ಆಂತ್ರಾಯಪಲ್ಕೆ  ಸ್ಥಳದಲ್ಲಿ ಒಂದು ಸೇತುವೆ ಇದ್ದು ನದಿಯಲ್ಲಿ ಕಲ್ಲುಗಳಿರುವ ಕಾರಣ ಪ್ರವಾಸಿಗರಿಗೆ ಆಕರ್ಷಕ ತಾಣವಾಗಿದೆ. ಗಡಾಯಿಕಲ್ಲು ಪರಿಸರಕ್ಕೆ ಹೋದವರು ಈ ಸ್ಥಳದಲ್ಲಿ ಒಂದಷ್ಟು ವಿಹಾರ ಮಾಡುವುದು ವಾಡಿಕೆ. ಸಂಜೆ ವೇಳೆಗೆ ಶಾಲಾ, ಕಾಲೇಜು ಬಿಡುವ ವೇಳೆಯಲ್ಲಿ ವಿದ್ಯಾರ್ಥಿಗಳು ನದಿಯಲ್ಲಿ ಸ್ನಾನ ಮಾಡುತ್ತಾ, ಫೋಟೋ ತೆಗೆಯುತ್ತಾ ಇರುತ್ತಾರೆ. ಸ್ಥಳೀಯರ ಎಚ್ಚರಿಗೆಕೆ ಬೆಲೆ ನೀಡುತ್ತಿಲ್ಲ ಎಂದು ಸ್ಥಳೀಯರಾದ ಶ್ಯಾಮಸುಂದರ ನಡ ಹೇಳಿದ್ದಾರೆ.

ಒಂದೇ ವಾರದ ಅವಧಿಯಲ್ಲಿ…
ಒಂದೇ ವಾರದ ಅವಧಿಯಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಸಂಭವಿಧಿಸಿದ ಎರಡನೇ ದೊಡ್ಡ ದುರಂತ ಇದಾಗಿದೆ. ಕೆಲವು ದಿನಗಳ ಹಿಂದೆ ಕೊಕ್ಕಡದ ಆಲಡ್ಕದಲ್ಲಿ ಒಂದೇ ಮನೆಯ ನಾಲ್ವರು ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದರು.

ಕಾಪುವಿಗೆ ಮತ್ತೂಂದು ಬರಸಿಡಿಲು
ಬೆಳ್ತಂಗಡಿಯಲ್ಲಿ ನಾಲ್ವರು ನೀರಿಗೆ ಬಿದ್ದು ಸಾವಿಗೀಡಾದ ಸುದ್ದಿ ಕಾಪು ತಲುಪುತ್ತಿದ್ದಂತೆಯೇ ಇಲ್ಲಿನ ಬಾಲಕನೋರ್ವ ಸಮುದ್ರ ಪಾಲಾದ ಮಾಹಿತಿ ಸ್ಥಳೀಯರನ್ನು ಆತಂಕಿತರನ್ನಾಗಿಸಿತು. ಕಾಪುವಿನ ಜನತೆ ತಮ್ಮೂರಿನ ಐದು ಮಂದಿಯನ್ನು ಕಳೆದುಕೊಂಡ ಆಘಾತಕ್ಕೆ ಸಿಲುಕಿದರು. ಮೂಳೂರಿನ ಸರಕಾರಿ ಸಂಯುಕ್ತ ಪ್ರೌಢಶಾಲೆಯ 8ನೇ ತರಗತಿಯ ವಿದ್ಯಾರ್ಥಿ ರಾಕೇಶ್‌ (14) ಶಾಲೆಯಿಂದ ಬರುವಾಗ ಸ್ನಾನಮಾಡಲೆಂದು ಸಮುದ್ರಕ್ಕೆ ಇಳಿದವರು ನೀರಿನಲ್ಲಿ ಮುಳುಗಿ ಕೊನೆಯುಸಿರೆಳೆದರು.

ಮಗುವಿನ ಹರಕೆ ತೀರಿಸಲು ಕಾಜೂರು ದರ್ಗಾಕ್ಕೆ ತೆರಳಿದ್ದರು
ಕಾಪು: ಬೆಳ್ತಂಗಡಿ ಸಮೀಪದ ಆಂತ್ರಾಯಪಲ್ಕೆ ಹೊಳೆಯಲ್ಲಿ ಸ್ನಾನಕ್ಕೆಂದು ಇಳಿದ ಸಂದರ್ಭ ನೀರಿನಲ್ಲಿ ಮುಳುಗಿ ಮೃತಪಟ್ಟ ಕಾಪು ಸಮೀಪದ ಮಲ್ಲಾರು- ಪಕೀರಣಕಟ್ಟೆಯ ನಿವಾಸಿಗಳು ಮುಸ್ಲಿಮರ ಪವಿತ್ರ ಧಾರ್ಮಿಕ ಕ್ಷೇತ್ರ ಕಾಜೂರು ದರ್ಗಾಕ್ಕೆ ಹರಕೆ ತೀರಿಸಲೆಂದು ಬುಧವಾರ ಮುಂಜಾನೆ ತೆರಳಿದ್ದರು.

ಮೃತಪಟ್ಟ ಅಬ್ದಲ್‌ ರಹೀಂ ಮತ್ತು ರುಬೀನಾ ದಂಪತಿಯ ಮಗು ರಿಜಿಮಾ ಹೆಸರಿನಲ್ಲಿ ಕಾಜೂರು ದರ್ಗಾಕ್ಕೆ ಹರಕೆ ಹೊತ್ತಿದ್ದು, ಮಗುವಿನ ಸಹಿತವಾಗಿ ಹರಕೆ ತೀರಿಸಿ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆ.

ಮುಗಿಲು ಮುಟ್ಟಿದ ಆಕ್ರಂದನ
ಹರಕೆ ತೀರಿಸಲು ತೆರಳಿದವರು ದುರ್ಘ‌ಟನೆಗೆ ಬಲಿಯಾದ ಸುದ್ದಿ ತಿಳಿಯುತ್ತಲೇ ಮಲ್ಲಾರು ಪಕೀರಣಧಿಕಟ್ಟೆಯ ಶಾಹಿಲ್‌ ಮಂಜಿಲ್‌ನಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಸಂಜೆಯವರೆಗೂ ಮನೆಯವರಿಗೆ ಸಾವಿನ ವಿಚಾರವನ್ನು ತಿಳಿಸದೇ ಇದ್ದು, ಮನೆಧಿಯವರು ಮೃತಪಟ್ಟಿರುವ ವಿಚಾರ ತಿಳಿಯುತ್ತಲೇ ಮಕ್ಕಳನ್ನು ಕಳೆದುಕೊಂಡ ತಂದೆ, ಸಹೋದರಿಯರು, ತಾಯಂದಿರು ಜೋರಾಗಿ ಅಳತೊಡಗಿದರು.

ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ವಿಚಾರ ತಿಳಿಯುತ್ತಲೇ ಊರಿನ ಜನ ಕೂಡ ಸಾಲುಗಟ್ಟಿ ಬರುತ್ತಿದ್ದು, ಕಾಪು ಪೊಲೀಸ್‌ ಠಾಣಾಧಿಕಾರಿ ಜಗದೀಶ್‌ ರೆಡ್ಡಿ ಮತ್ತು ಸಿಬಂದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಸೂಕ್ತ ಸಹಕಾರಕ್ಕೆ ಸೊರಕೆ, ಗಫೂರ್‌ ಸೂಚನೆ
ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ವಿಚಾರ ತಿಳಿಯುತ್ತಲೇ ಪಕೀರಣಕಟ್ಟೆಯ ಮನೆಗೆ ಧಾವಿಸಿದ ಕಾಂಗ್ರೆಸ್‌ ಅಲ್ಪಸಂಖ್ಯಾಕ ವಿಭಾಗದ ಅಧ್ಯಕ್ಷ ಎಚ್‌. ಅಬ್ದುಲ್ಲಾ ಘಟನೆಯ ಬಗ್ಗೆ ಶಾಸಕ ವಿನಯ ಕುಮಾರ್‌ ಸೊರಕೆ ಮತ್ತು ಅಲ್ಪಸಂಖ್ಯಾಕ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಎ. ಗಫೂರ್‌ ಅವರಿಗೆ ಮಾಹಿತಿ ನೀಡಿದರು. 

ಅವರು ದೂರವಾಣಿಯ ಮೂಲಕ ಪೊಲೀಸ್‌ ಅಧಿಕಾರಿಗಳನ್ನು ಸಂಪರ್ಕಿಸಿ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಸಹಕಾರ ನೀಡುವಂತೆ ಸೂಚನೆ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next