Advertisement

ವಾಣಿ ವಿದ್ಯಾಸಂಸ್ಥೆಯಲ್ಲಿ ಮೊಳಗಿದ ‘ಮಕ್ಕಳ ಧ್ವನಿ’

01:04 PM Sep 10, 2018 | Team Udayavani |

ಬೆಳ್ತಂಗಡಿ: ಅಲ್ಲಿ ಕೇಳಿ ಬರುತ್ತಿರುವ ಮಾತುಗಳು ಹೆಚ್ಚು ಗಾಂಭೀರ್ಯದಿಂದ ಕೂಡಿದ್ದವು. ಕನ್ನಡ ಸಾಧ್ಯವನ್ನು ಅಧ್ಯಯನ ಮಾಡಿದವರಂತೆಯೇ ಅಕ್ಷರ ಹೊರಬರುತ್ತಿದ್ದವು. ಆದರೆ ಸ್ವರಗಳನ್ನು ಆಲಿಸಿದರೆ ಅದು ಮಕ್ಕಳ ಮಾತುಗಳು. ಹಾಗಾದರೆ ಯಾರೋ ಬರೆದುಕೊಟ್ಟದ್ದನ್ನು ಓದುತ್ತಿದ್ದಾರೆ ಎಂದು ನೀವು ಭಾವಿಸಿದರೆ ಖಂಡಿತವಾಗಿಯೂ ಅದು ತಪ್ಪು. ಸ್ವತಃ ತಾವೇ ತಿಳಿದುಕೊಂಡ ಸಾಹಿತ್ಯ ಸತ್ಯಗಳನ್ನು, ತಮ್ಮ ರಚನೆಗಳನ್ನು ವೇದಿಕೆಯಲ್ಲಿ ನಿರರ್ಗಳವಾಗಿ ಬಿಚ್ಚಿಡುತ್ತಿದ್ದರು.

Advertisement

ಇದು ಉಡುಪಿ, ಕಾಸರಗೋಡು ಜಿಲ್ಲೆ ಸಹಿತ ದ.ಕ. ಜಿಲ್ಲಾ ಮಕ್ಕಳ ಸಾಹಿತ್ಯ ಸಂಗಮ ಇಲ್ಲಿನ ವಾಣಿ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ಎರಡು ದಿನಗಳ 25ನೇ ವರ್ಷದ ಮಕ್ಕಳ ಧ್ವನಿ ಸಮ್ಮೇಳನದಲ್ಲಿ ರವಿವಾರ ಪುಟಾಣಿ ಸಾಹಿತಿಗಳು ತಮ್ಮ ಪ್ರತಿಭಾ ಪ್ರದರ್ಶನ ಮಾಡಿದ ರೀತಿ. ಕಾರ್ಯಕ್ರಮದಲ್ಲಿ ಆರಂಭದಲ್ಲಿ ವಿವಿಧ ವಿದ್ಯಾಸಂಸ್ಥೆಗಳ 28 ಮಂದಿ ಕವಿಗಳಿಂದ ಕವಿಗೋಷ್ಠಿ, ಬಳಿಕ 27 ಮಂದಿ ಲೇಖಕರಿಂದ ಕಥಾಗೋಷ್ಠಿ ನಡೆಯಿತು.

ಗೋಷ್ಠಿಯ ಕವಿಗಳು
ಕವಿಗೋಷ್ಠಿಯಲ್ಲಿ ಮನೀಷಾ ಕೆ.ಎಸ್‌., ಮೋಕ್ಷಾ, ದಿವಿತ್‌ ಯು. ರೈ, ಶ್ರೇಯಸ್‌ ಎಸ್‌., ಸುಶ್ಮಿತಾ ಕೆ., ಅಭಿಲಾಷ ದೋಟ, ಭೂಮಿಕಾ ಜೆ., ಪಲ್ಲವಿ ಕೆ., ಅವನಿ ಉಪಾಧ್ಯ, ಸುಮತಿ, ಗೌತಮ್‌ ಎ., ಅನ್ವಿತಾ ಎಸ್‌.ಎನ್‌., ಕವನಾ ಎಂ.ವಿ., ಚಿನ್ಮಯಕೃಷ್ಣ ಕೆ., ಶೃತಾ ಜೆ. ಶೆಟ್ಟಿ, ಕೆ.ಅಂಜನಿ ಪ್ರಭು, ವರಲಕ್ಷ್ಮೀ ಎನ್‌., ವೈಷ್ಣವಿ ಕೆ.ಎಸ್‌., ದೀಕ್ಷಿತಾ ಕೆ., ಮನ್ವಿತಾ ಕೆ., ಮಂಜುನಾಥ, ಫಾತಿಮತ್‌ ತಸ್ಮಿಫಾ, ಅನುಷಾ ಆರ್‌. ವಿ., ಆಶಿತಾ ಜೆ. ಶೆಟ್ಟಿ, ಅರ್ಪಿತಾ ಹೆಗ್ಡೆ, ಅಭಿರಾಮ ಮರಾಠೆ ಕೆ., ಶಾರದಾ ಕುಸುಮಾ ರಾವ್‌, ಚಾಂದಿನಿ ಭಾಗವಹಿಸಿದ್ದರು.

ಗೋಷ್ಠಿಯ ಕಥೆಗಾರರು
ಕಥಾಗೋಷ್ಠಿಯಲ್ಲಿ ಹರಿಪ್ರಿಯಾ, ಶಿವಚರಣ ಹೊಳ್ಳ, ಜಶ್ಮಿ ಕೆ.ಎಚ್‌., ವೈಷ್ಣವಿ, ಮರಿಟಾ ಡಿ’ಸೋಜಾ, ದೀಕ್ಷಿತ್‌, ವರ್ಷಾ ಎಂ.ಆರ್‌., ಶರಧಿ ರೈ, ಮಿಲನ್‌ ಎನ್‌.ಎಸ್‌., ಹೃಷಿಕೇಶ್‌, ವೃಕ್ಷಾ ಎಂ.ಆರ್‌., ಅಚಲಾ ಪಿ., ಚಿನ್ಮಯಿ ಕೆ., ವೈಷ್ಣವಿ ಸಿ., ವೈಷ್ಣವಿ ಎಚ್‌. ಶೆಟ್ಟಿ, ವಿಶ್ವಾಸ್‌, ಅನುಪ್ರಿಯಾ, ಆಶಾ ಕೆ., ಐಶ್ವರ್ಯಾ ವಿ. ಶೆಟ್ಟಿ, ಚಿತ್ತರಂಜನ್‌ ಕೆ., ಶರಧಿ ಬಿ.ಎಸ್‌., ವರೋಧಿನಿ ಅಡೂರು, ತ್ರಿಷಾ ಎನ್‌.ಡಿ., ಚೇತನ್‌ ಎಂ.ಕೆ., ಶ್ರೀನಿಧಿ, ಶ್ರೇಯಸ್‌ ಕೆ., ಭೂಮಿಕಾ ಭಾಗವಹಿಸಿದ್ದರು.

ಕವಿಗೋಷ್ಠಿಯಲ್ಲಿ ಉಜಿರೆ ಎಸ್‌ ಡಿಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಅನನ್ಯಾ ಅಧ್ಯಕ್ಷತೆ ವಹಿಸಿ ತನ್ನ ಅಭಿಪ್ರಾಯ ತಿಳಿಸಿದರು. ಕಥಾಗೋಷ್ಠಿಯ ಅಧ್ಯಕ್ಷೆ ಎಸ್‌ ಡಿಎಂ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಪೂರ್ಣಿಮಾ ಆರ್‌. ಜೈನ್‌ ತನ್ನ ಅಚ್ಚಗನ್ನಡದ ಮಾತಿನೊಂದಿಗೆ ಗಮನ ಸೆಳೆದರು. ಭಾಗವಹಿಸಿದ್ದ ಎಲ್ಲ ಸಾಹಿತಿಗಳಿಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

Advertisement

ಗೋಷ್ಠಿಗಳ ಬಳಿಕ ಮಕ್ಕಳಿಂದ ಅಭಿನಯ ಗೀತೆ ಗೋಷ್ಠಿಯೂ ಗಮನ ಸೆಳೆಯಿತು. ಬಳಿಕ ಸಮಾರೋಪ ಸಮಾರಂಭ ಜರಗಿತು. ಈ ಸಮಾರಂಭದಲ್ಲಿ ಪ್ರೇಕ್ಷಕರಾಗಿಯೂ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಬಣ್ಣ ಬಣ್ಣದ ಬಟ್ಟೆಗಳೊಂದಿಗೆ ವಾಣಿ ಕ್ಯಾಂಪಸ್‌ ಕಲರ್‌ಫುಲ್‌ ಆಗಿತ್ತು.

ಸರ್ವಾಧ್ಯಕೆಯ ಗಾಂಭೀರ್ಯ
ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನದ ಅಧ್ಯಕ್ಷರು ಪ್ರತಿಗೋಷ್ಠಿಗಳಲ್ಲೂ ಭಾಗವಹಿಸುತ್ತಾರೆ. ಅಂದರೆ ಅವರು ಹೆಚ್ಚು ಪರಿಣತರಾಗಿರುವ ಕಾರಣ ಗಾಂಭೀರ್ಯತೆಯಿಂದ ಕೂಡಿರುತ್ತಾರೆ. ಮಕ್ಕಳ ಧ್ವನಿಯ ಸರ್ವಾಧ್ಯಕ್ಷೆ ವಾಣಿ ಪ.ಪೂ. ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಕೂಡ ಅಷ್ಟೇ ಗಾಂಭೀರ್ಯತೆಯಿಂದ ಕೂತು ಗೋಷ್ಠಿಗೆ ಮೆರುಗು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next