Advertisement

Belthangadi: ಪ್ರತಿಭಟನೆ ನಡೆಸಿದ ಶಾಸಕ ಹರೀಶ್‌ ಪೂಂಜ, 65 ಮಂದಿಗೆ ನ್ಯಾಯಾಲಯದಿಂದ ಸಮನ್ಸ್‌

09:55 PM Jun 27, 2024 | Team Udayavani |

ಬೆಳ್ತಂಗಡಿ: ಪ್ರತಿಭಟನೆ ನಡೆಸಿದ ಶಾಸಕ ಹರೀಶ್‌ ಪೂಂಜ(Harish Poonja) ಹಾಗೂ 65 ಮಂದಿ ಬಿಜೆಪಿ ಕಾರ್ಯಕರ್ತರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದ ಸಮನ್ಸ್‌

Advertisement

ಬೆಳ್ತಂಗಡಿ, ಜೂ.27: ಬಿಜೆಪಿ ಯುವಮೋರ್ಚಾದ ತಾಲೂಕು ಅಧ್ಯಕ್ಷ ಶಶಿರಾಜ್‌ ಶೆಟ್ಟಿ ಪರ ಪ್ರತಿಭಟನೆ ನಡೆಸಿದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದಡಿ ಎರಡು ಪ್ರತ್ಯೇಕ ಕೇಸ್‌ಗೆ ಸಂಬಂಧಪಟ್ಟಂತೆ ಶಾಸಕ ಹರೀಶ್‌ ಪೂಂಜ, ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್‌ ಧರ್ಮಸ್ಥಳ ಸೇರಿದಂತೆ 65 ಮಂದಿ ವಿರುದ್ಧ ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್‌ ಜಾರಿ ಮಾಡಿದೆ ಎಂದು ತಿಳಿದುಬಂದಿದೆ.

ಪ್ರಥಮ ಕೇಸ್‌ನಲ್ಲಿ 28 ಮಂದಿ ಮತ್ತು 2ನೇ ಕೇಸ್‌ನಲ್ಲಿ 37 ಮಂದಿಗೆ ಸಮನ್ಸ್‌ ಜಾರಿ ಮಾಡಲಾಗಿದ್ದು, ಜುಲೈ 10ರಂದು ಚೀಫ್‌ ಮೆಟ್ರೋಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ನ ನ್ಯಾಯಾಧೀಶರ ಎದುರು ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ.

ಸಮನ್ಸ್‌ ಜಾರಿಯಾದವರ ಹೆಸರು: ಮೇ 18 ರಂದು ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ ಹರೀಶ್‌ ಪೂಂಜ, ರಾಜೇಶ್‌ ಎಂ.ಕೆ., ಜಗದೀಶ ಕನ್ನಾಜೆ, ಚಂದ್ರಹಾಸ ದಾಸ್‌, ಪ್ರಕಾಶ್‌ ಆಚಾರಿ, ಸಂದೀಪ್‌ ರೈ, ನಿತೇಶ್‌ ಶೆಟ್ಟಿ, ಪವನ್‌ ಶೆಟ್ಟಿ, ಪ್ರದೀಪ್‌ ಶೆಟ್ಟಿ, ಪ್ರದೀಪ್‌ ಶೆಟ್ಟಿ ಬರಾಯ, ರಂಜಿತ್‌ ಶೆಟ್ಟಿ, ರಿಜೇಶ್‌ ಮಂದಾರಗಿರಿ, ಅವಿನಾಶ್‌ ಮಂದಾರಗಿರಿ, ಚಂದನ್‌ ಕಾಮತ್‌, ಸಂತೋಷ್‌ ಕುಮಾರ್‌ ಜೈನ್‌, ಪುಷ್ಪರಾಜ್‌ ಶೆಟ್ಟಿ, ಶ್ರೀನಿವಾಸ ರಾವ್‌, ರಾಜ್‌ ಪ್ರಕಾಶ್‌ ಶೆಟ್ಟಿ, ಗಣೇಶ್‌ ಲಾೖಲ, ವಾಸು ಪಡ್ತಾಡಿ, ವಿಠಲ ಆಚಾರ್ಯ, ಗಣೇಶ್‌ ಕೆ.ಕೊಡಪತ್ತಾಯ, ವಿಕಾಸ್‌ ಶೆಟ್ಟಿ, ರವಿನಂದನ್‌ ಉಪ್ಪಿನಂಗಡಿ, ಸುಖೇಶ್‌, ನವೀನ್‌ ಕುಲಾಲ್‌, ಪದ್ಮನಾಭ ಶೆಟ್ಟಿ ಮತ್ತು ಶಂಕರ ಸಪಲ್ಯ ಎಂಬವರಿಗೆ ಸಮನ್ಸ್‌ ಜಾರಿಯಾಗಿದೆ ಎಂದು ತಿಳಿದುಬಂದಿದೆ.

ಮೇ 20ರಂದು ಆಡಳಿತ ಸೌಧದ ಮುಂಭಾಗದಲ್ಲಿ ನಡೆಸಿದ ಪ್ರತಿಭಟನೆಗೆ ಸಂಬಂಧಿಸಿ ಹರೀಶ್‌ ಪೂಂಜ ಗರ್ಡಾಡಿ, ಜಯಾನಂದ ಗೌಡ, ರಾಜೇಶ್‌ ಎಂ.ಕೆ., ನವೀನ್‌ ನೆರಿಯ, ಚಂದ್ರಹಾಸ ಕಾವು, ಜಗದೀಶ್‌ ಲಾೖಲ, ಗಿರೀಶ್‌ ಡೊಂಗ್ರೆ, ಉಮೇಶ್‌ ಕುಲಾಲ್‌, ಯಶವಂತ ಗೌಡ, ದಿನೇಶ್‌ ಪೂಜಾರಿ, ಶಶಿಧರ್‌ ಕಲ್ಮಂಜ, ಗಣೇಶ್‌ ಕೆ.ಪುದುವೆಟ್ಟು, ರವಿನಂದನ್‌ ನಟ್ಟಿಬೈಲು, ರಂಜಿತ್‌ ಶೆಟ್ಟಿ, ಅವಿನಾಶ್‌, ರಿಜೇಶ್‌, ಸುಧೀರ್‌, ಶಂಕರ ಸಪಲ್ಯ, ಸುಖೇಶ್‌, ಪದ್ಮನಾಭ ಶೆಟ್ಟಿ, ನವೀನ್‌ ಕುಲಾಲ್‌, ವಿಕಾಸ್‌ ಶೆಟ್ಟಿ, ಸಂತೋಷ್‌ ಕುಮಾರ್‌ ಜಿ., ಚಂದನ್‌ ಕಾಮತ್‌, ಪ್ರದೀಪ್‌ ಶೆಟ್ಟಿ, ಪುಷ್ಪರಾಜ್‌ ಶೆಟ್ಟಿ, ರಾಜ್‌ ಪ್ರಕಾಶ್‌ ಶೆಟ್ಟಿ, ವಿಠಲ ಆಚಾರ್ಯ, ಶ್ರೀನಿವಾಸ ರಾವ್‌, ಗಣೇಶ್‌ ಲಾೖಲ, ರಂಜಿತ್‌ ಶೆಟ್ಟಿ, ರತನ್‌ ಶೆಟ್ಟಿ, ಪ್ರಕಾಶ್‌ ಆಚಾರಿ, ನಿತೇಶ್‌ ಶೆಟ್ಟಿ, ಪ್ರದೀಪ್‌ ಶೆಟ್ಟಿ, ಸಂದೀಪ್‌ ರೈ, ಪವನ್‌ ಶೆಟ್ಟಿ, ಶ್ರೀರಾಜ್‌ ಶೆಟ್ಟಿ ಮತ್ತು ಭರತ್‌ ಶೆಟ್ಟಿ ಎಂಬವರಿಗೆ ಸಮನ್ಸ್‌ ಜಾರಿ ಮಾಡಲಾಗಿದೆ.

Advertisement

ಬೆಳ್ತಂಗಡಿ ಪೊಲೀಸರು ಎರಡೂ ಪ್ರಕರಣಗಳಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ಇದೀಗ ನ್ಯಾಯಾಲಯವು ಆರೋಪಿಗಳಿಗೆ ಸಮನ್ಸ್‌ ಜಾರಿ ಮಾಡಿದ್ದು ವಿಚಾರಣೆ ಆರಂಭಿಸಲಿದೆ ಎಂದು ತಿಳಿದು ಬಂದಿದೆ.

 

 

Advertisement

Udayavani is now on Telegram. Click here to join our channel and stay updated with the latest news.

Next