Advertisement
ತೋಟತ್ತಾಡಿಯ ಬಾರೆ ಪ್ರದೇಶದಲ್ಲಿ ರವಿವಾರ ರಾತ್ರಿ ಗಸ್ತು ನಿರತ ತಂಡಕ್ಕೆ ಒಂಟಿ ಸಲಗ ಎದುರಾಗಿದ್ದು, ಪಟಾಕಿ ಸಿಡಿಸುವ ಮೂಲಕ ಕಾಡಿಗೆ ಅಟ್ಟಲಾಗಿತ್ತು. ಸೋಮವಾರ ಬೆಳಗ್ಗೆ 6.45ರ ಸುಮಾರಿಗೆ ಇಲ್ಲಿಂದ ಸುಮಾರು ಏಳೆಂಟು ಕಿ.ಮೀ. ದೂರದ ನೆರಿಯ ಗ್ರಾಮದ ಅಣಿಯೂರುಪೇಟೆ ಸಮೀಪದ ಸೇತುವೆಯ ಕೆಳಗೆ ಆನೆ ಓಡಾಡುತ್ತಿರುವುದು ಕಂಡುಬಂದಿತು. ಇದರ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದೆ.
ತೋಟತ್ತಾಡಿ, ಬಾರೆ, ಕುಂಟಾಡಿ, ಅಗರಿ ಕುಕ್ಕಾಜೆ, ಮುದ್ದಿನಡ್ಕ ಮೊದಲಾದೆಡೆ ಕಾಡಾನೆಗಳು ಕೃಷಿ ನಾಶ ಮಾಡುತ್ತಿವೆ. ಆನೆ ಓಡಿಸಲು ಅರಣ್ಯ ಇಲಾಖೆಯಲ್ಲಿರುವ ಪಟಾಕಿ ದಾಸ್ತಾನು ಸಾಲುತ್ತಿಲ್ಲ.