Advertisement

ಬೆಳ್ತಂಗಡಿ, ಲಾೖಲ, ಸೋಮಂತ್ತಡ್ಕದಲ್ಲಿ 7 ಅಂಗಡಿಗಳಿಂದ ಕಳವು

12:40 PM Nov 04, 2018 | Harsha Rao |

ಬೆಳ್ತಂಗಡಿ: ಬೆಳ್ತಂಗಡಿ ನಗರ, ಲಾೖಲ ಹಾಗೂ ಸೋಮಂತ್ತಡ್ಕ ಪರಿಸರದ  ಏಳು ಅಂಗಡಿಗಳಿಗೆ ನುಗ್ಗಿದ ಕಳ್ಳರು ನುಗ್ಗಿದ್ದು, ದುಬಾರಿ ವಸ್ತುಗಳು ಸಿಗದೆ ಅಲ್ಲಿದ್ದ ಸಣ್ಣ ಪುಟ್ಟ ವಸ್ತುಗಳನ್ನೇ  ಕೊಂಡೊಯ್ದಿದ್ದಾರೆ. 

Advertisement

ನಗರದ ಸಂತೆಕಟ್ಟೆಯ ಮದ್ಯದ ಅಂಗಡಿಯಿಂದ ಮದ್ಯದ 2 ಬಾಟಲ್‌ಗ‌ಳನ್ನು ಕೊಂಡೊಯ್ದಿದ್ದಾರೆ. ಅದೇ ಕಟ್ಟಡದ ಕೃಷಿ ಯಂತ್ರೋಪಕರಣ ಮಾರಾಟದ ಅಂಗಡಿಗೂ ಕಳ್ಳರು ನುಗ್ಗಿದ್ದು,  ಅಂಗಡಿಯೊಳಗೆ ಮಲಗಿದ್ದ ಮಾಲಕ ಎಚ್ಚೆತ್ತು ಬೊಬ್ಬೆ ಹಾಕಿದಾಗ ಕಳ್ಳರು  ಪರಾರಿಯಾಗಿದ್ದಾರೆ.
ಲಾೖಲದ ದಿನಸಿ ಅಂಗಡಿಯಿಂದ ಸಿಗರೇಟ್‌ ಪ್ಯಾಕೆಟ್‌ಗಳನ್ನು  ಒಯ್ದಿದ್ದಾರೆ. 

ಮುಂಡಾಜೆ ಗ್ರಾಮದ ಸೋಮಂತ್ತಡ್ಕದ ಕಾಜೂರು ರಸ್ತೆ ತಿರುವಿನಲ್ಲಿ ಮೊಬೈಲ್‌ ಮಳಿಗೆ, ಒಣಮೀನು ಅಂಗಡಿ ಹಾಗೂ 2 ದಿನಸಿ ಅಂಗಡಿಗಳಿಗೆ ನುಗ್ಗಿ ಕಳವಿಗೆ ಯತ್ನಿಸಿದ್ದಾರೆ.

ಸುಮಾರು ಎಂಟು ತಿಂಗಳ ಹಿಂದೆ ಇದೇ ರೀತಿ ಮದ್ಯದಂಗಡಿ, ಲಾೖಲದ ಅಂಗಡಿಯೊಂದರಲ್ಲಿ ಸರಣಿ ಕಳ್ಳತನ ನಡೆದಿತ್ತು.  ಇವೆಲ್ಲವೂ ಒಂದೇ ವೃತ್ತಿಪರ ಕಳ್ಳರ ತಂಡದ ಕೃತ್ಯವಾಗಿರಬೇಕು ಎಂದು ಸಂಶಯಿಸಲಾಗಿದೆ.

ಅಂಗಡಿಗಳಲ್ಲಿ ಸಿಸಿಕೆಮರಾ ಇದ್ದರೂ  ಮುಖಕ್ಕೆ ಮಂಕಿ ಕ್ಯಾಪ್‌ ಹಾಕಿರುವುದರಿಂದ  ಅವರ ಪರಿಚಯ ಸಿಗುತ್ತಿಲ್ಲ.

Advertisement

ದೂರು ನೀಡದ ಬೆಳ್ತಂಗಡಿ ವರ್ತಕರು ವರ್ತಕರನ್ನು ಹಗಲು ಹೊತ್ತಿ ನಲ್ಲಿ ಮೋಸಗೊಳಿಸಿ ಹಣ ದೋಚುವುದು ಹಾಗೂ ರಾತ್ರಿ ಅಂಗಡಿಗೆ ನುಗ್ಗಿ ಕಳವು ಮಾಡುತ್ತಿರುವ ಘಟನೆಗಳು ಬೆಳ್ತಂಗಡಿ ತಾಲೂಕಿನಲ್ಲಿ ಹೆಚ್ಚುತ್ತಿದ್ದರೂ   ಪೊಲೀಸ್‌ ದೂರು ನೀಡುತ್ತಿಲ್ಲ. ವರ್ತಕರು ಇಂಥ ನಿರ್ಲಕ್ಷ್ಯ ಧೋರಣೆ ಕಳ್ಳರಿಗೆ ವರದಾನವಾಗುವಂತಿದೆ.

ಧರ್ಮಸ್ಥಳದಲ್ಲಿ ದೂರು ದಾಖಲು
ಸೋಮಂತ್ತಡ್ಕದ ದಿನಸಿ ಅಂಗಡಿಯೊಂದರ ಮಾಲಕ ಅಬ್ದುಲ್‌ ರಝಾಕ್‌ ಅವರು ತಮ್ಮ ಹಾಗೂ ಸುತ್ತಮುತ್ತ ಅಂಗಡಿಗಳ ಕಳವಿನ ಕುರಿತು ಧರ್ಮಸ್ಥಳ  ಠಾಣೆಗೆ ದೂರು ನೀಡಿದ್ದಾರೆ. ತಮ್ಮ ದಿನ ಅಂಗಡಿಯಿಂದ 2 ಬಂಡಲ್‌ ಸಿಗರೇಟ್‌ ಹಾಗೂ 3 ಸಾ. ರೂ.ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಧರ್ಮಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next