ಬೆಳ್ತಂಗಡಿ: ತಣ್ಣೀರುಪಂಥ ಗ್ರಾಮದ ಅಳಕೆ ಸಮೀಪ ಸಹೋದರಿಯರು ಸೂರಿಲ್ಲದೆ ಬದುಕು ಸವೆಯುತ್ತಿರುವುದನ್ನು ಕಂಡು ಸಂಘಸಂಸ್ಥೆಗಳು ನೆರವಿಗೆ ಮುಂದಾಗಿದೆ.
ಅಳಕೆ ಗುತ್ತುಮನೆ ಸಹೋದರಿಯರಿಬ್ಬರಾದ ಶಾಂಭವಿ ಶೆಟ್ಟಿ (59) ಹಾಗೂ ಜಯಂತಿ ಶೆಟ್ಟಿ(73) ಗುಡಿಸಲಿನಂತ ಮನೆಯಲ್ಲಿ ವಾಸಿಸುತ್ತಿರುವ ಕುರಿತು ಸುದಿನದಲ್ಲಿ ವರದಿ ಪ್ರಕಟಿಸಿತ್ತು.
ಇವರ ಅಸಹಾಯತೆ ಕಂಡು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣೆ ವಿಭಾಗ ಹಾಗೂ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾಯಸ್, ಗುರುವಾಯನಕೆರೆ ವಿಭಾಗ ಯೋಜನಾಧಿಕಾರಿ ಯಶವಂತ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ವರದಿ ಸಿದ್ಧಪಡಿಸಿದ್ದಾರೆ. ಅದನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡ ಅವರಿಗೆ ನೀಡುವುದಾಗಿ ತಿಳಿಸಿದ್ದಾರೆ. ಜತೆಗೆ ಜಯಂತಿ ಶೆಟ್ಟಿ (73) ಅವರ ಹೆಸರಿನಲ್ಲಿ ತಿಂಗಳ ಮಾಸಾಶನ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ವಿವಾಹ ವಿಚ್ಛೇದನ ನಂತರವೂ ಪತ್ನಿ, ಮಕ್ಕಳಿಗೆ ಪತಿ ಜೀವನಾಂಶ ಕೊಡಬೇಕು: ಹೈಕೋರ್ಟ್
ಜಾಗತಿಕ ಬಂಟ್ಸ್ ಅಸೋಸಿಯೇಶನ್ ಬೆಂಗಳೂರು ಮನೆಗೆ ಕಾಂಕ್ರೀಟ್ ಮೇಲ್ಛಾವಣಿ ನಿರ್ಮಿಸುವ ಸಲುವಾಗಿ ಧನ ಸಂಗ್ರಹಕಾರ್ಯಕ್ಕೆ ತೊಡಗಿದೆ. ಈಗಾಗಲೇ ದಾನಿಗಳಿಂದ 34,500 ರೂ. ಮೊತ್ತ ಒದಗಿಸಲಾಗಿದೆ.
ನೆರವು ನೀಡಲು ಬಯಸುವವರು ಶಾಂಭವಿ ಶೆಟ್ಟಿ ಅವರ ಕರ್ಣಾಟಕ ಬ್ಯಾಂಕ್ ಕರಾಯ, ತಣ್ಣೀರುಪಂಥ ಶಾಖೆಯ ಖಾತೆ ಸಂಖ್ಯೆ
3772500100016701, IFSC:
KARB0000377 ನೆರವು ಒದಗಿಸಬಹುದಾಗಿದೆ.