Advertisement

ವ್ಯಾಪಾರವಿಲ್ಲದೆ ಸೊರಗಿದ ಸೋಮವಾರ ಸಂತೆ ಮಾರುಕಟ್ಟೆ

10:50 PM Mar 22, 2021 | Team Udayavani |

ಬೆಳ್ತಂಗಡಿ: ಕೊರೊನಾ ಹಿನ್ನೆಲೆಯಲ್ಲಿ ಜನಸಂದಣಿ ತಪ್ಪಿಸುವ ಸಲುವಾಗಿ ಒಂದು ವರ್ಷದ ಹಿಂದೆ, ಹಳೆಕೋಟೆಗೆ ಸ್ಥಳಾಂತರಗೊಂಡಿದ್ದ ಬೆಳ್ತಂಗಡಿ ಸೋಮವಾರ ಸಂತೆಮಾರುಕಟ್ಟೆಯಲ್ಲಿ ವ್ಯಾಪಾರವಿಲ್ಲದೆ ವ್ಯಾಪಾರಿಗಳು ಹೆದ್ದಾರಿ ಬದಿ ಟೆಂಟ್‌ ಅಳವಡಿಸಿ ವ್ಯಾಪಾರಕ್ಕೆ ಮುಂದಾಗಿರುವ ಪರಿಣಾಮ ರಸ್ತೆ ತಡೆ ಉಂಟಾಗುತ್ತಿದೆ.

Advertisement

ರೈತರ ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡುವ ಉದ್ದೇಶದಿಂದ ಹಳೆಕೋಟೆ ಎಪಿಎಂಸಿ ಪ್ರಾಂಗಣದಲ್ಲಿ ಸೋಮವಾರ ಸಂತೆಮಾರುಕಟ್ಟೆ ತೆರೆಯಲು ಶಾಸಕರ ಸಲಹೆಯಂತೆ ಕಳೆದ ವರ್ಷ ಪಟ್ಟಣ ಪಂಚಾಯತ್‌ ನಿಂದ ಅವಕಾಶ ಕಲ್ಪಿಸಲಾಗಿತ್ತು. ಆದರೆ ಕಾಲಕ್ರಮೇಣ ಲಾಕ್‌ಡೌನ್‌ ತೆರವಾದ ಬಳಿಕ ವ್ಯಾಪಾರ ಕುಂಟುತ್ತಾ ಸಾಗಿದ್ದರಿಂದ ವ್ಯಾಪಾರಸ್ತರು ಮತ್ತೆ ಸಂತೆಮಾರುಕಟ್ಟೆ ಸಮೀಪ ಶಿಫ್ಟ್‌ ಮಾಡುವಂತೆ ಆಗ್ರಹಿಸಿದ್ದಾರೆ.

ಈ ಮಧ್ಯೆ ಸೋಮವಾರ ಸಂತೆ ಸಂದರ್ಭದಲ್ಲಿ ಕೆಲ ವ್ಯಾಪಾರಸ್ಥರು ಎಪಿಎಂಸಿ ರಸ್ತೆ ಹಾಗೂ ಹೆದ್ದಾರಿ ಬದಿ ವ್ಯಾಪಾರಕ್ಕೆ ಮುಂದಾಗುತ್ತಿದ್ದಾರೆ. ಹಣ್ಣಿನ ಅಂಗಡಿ, ಕೋಳಿ ಮರಿ ಸೇರಿ ದಂತೆ ಅಗತ್ಯವಸ್ತುಗಳನ್ನು ಮಾರಾಟಕ್ಕೆ ಮುಂದಾಗಿದ್ದಾರೆ. ಕೆಲ ಗ್ರಾಹಕರು ರಸ್ತೆಯಲ್ಲೆ ವಾಹನ ನಿಲ್ಲಿಸಿ ವ್ಯಾಪಾರ ನಡೆಸುತ್ತಿರುವುದರಿಂದ ಗುರುವಾ ಯನಕೆರೆಯಿಂದ ಬೆಳ್ತಂಗಡಿ ರಸ್ತೆ ಸಂಚಾರಕ್ಕೆ ತೊಡಕಾಗುತ್ತಿದೆ. ಮೊದಲೇ ಗುರುವಾಯನಕೆರೆ ಹಾಗೂ ಬೆಳ್ತಂಗಡಿ ರಸ್ತೆ ತೀರ ಸಂಚಾರ ಸಮಸ್ಯೆ ನಡುವೆ ರಸ್ತೆ ಬದಿ ಮಾರಾಟದಿಂದ ಮತ್ತಷ್ಟು ಸಮಸ್ಯೆಯಾಗಿದೆ.

ಸಮೀಪದಲ್ಲೇ ಖಾಸಗಿ ಕಾಲೇಜೊಂದಿದ್ದು, ಮಕ್ಕಳನ್ನು ವಾಹನದಲ್ಲಿ ಕರೆ ತರುವವರಿಗೂ ಅಡ್ಡಿಯಾಗುತ್ತಿದ್ದು, ಪಾಠ ಪ್ರವಚನಗಳಿಗೆ ಸಮಸ್ಯೆಯಾಗುತ್ತಿದೆ.

ಈ ಕುರಿತು ಪ.ಪಂ. ಗಮನ ಹರಿಸದೆ ಮೌನವಹಿಸಿದ್ದರಿಂದ ಕೆಲ ಸ್ಥಳೀಯರು ಪ.ಪಂ. ಆಡಳಿತ ಮಂಡಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಹೆದ್ದಾರಿ ಬದಿ ಯಿಂದ ತಾತ್ಕಾಲಿಕ ವ್ಯಾಪಾರದ ಅಂಗಡಿಗಳನ್ನು ಮಧ್ಯಾಹ್ನದ ವೇಳೆಗೆ ತೆರವುಗೊಳಿ
ಸಲಾಗಿತ್ತು. ವ್ಯಾಪಾರಿಗಳಲ್ಲಿ ಈ ಕುರಿತು ವಿಚಾರಿಸಿದರೆ, ಎಪಿಎಂಸಿ ಪ್ರಾಂಗಣದಲ್ಲಿ ಮುಂಜಾನೆ ತರಕಾರಿ ಪಡೆಯಲು ಬರುವವರು ಹೊರತಾಗಿ ಬಳಿಕ ವ್ಯಾಪಾರವಿರುವುದಿಲ್ಲ.

Advertisement

ಸೋಮವಾರ ಬೇರೆಲ್ಲೂ ವ್ಯಾಪಾರ ನಡೆಸಲು ಅವಕಾಶ ಇರುವುದಿಲ್ಲ, ಹೀಗಾಗಿ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರು ಗಮನಿಸಿ ವ್ಯಾಪಾರ ನಡೆಸುವುದರಿಂದ ಎಪಿಎಂಸಿ ಸಮೀಪ ಹೆದ್ದಾರಿಯಲ್ಲಿ ಮಳಿಗೆ ಇರಿಸಿದ್ದೇವೆ ಎನ್ನುತ್ತಾರೆ.

ಈಗಾಗಲೇ ಪ.ಪಂ.ನಿಂದ ಸಂತೆಮಾರುಕಟ್ಟೆ ಸಮೀಪ ನಿರ್ಮಿಸಿರುವ ನೂತನ ಮಳಿಗೆಗಳು ಬಹುತೇಕ ಹರಾಜಾಗಿದ್ದು, ಹಳೆ ಕಟ್ಟಡವನ್ನೂ ತೆರವುಗೊಳಿಸಲಾಗಿದೆ. ಆಡಳಿತ ಮಂಡಳಿ ಚರ್ಚಿಸಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಅನಿವಾರ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕಡೂರು ಮುಂತಾದ ಊರುಗಳಿಂದ ಬಂದು ಹೊಟ್ಟೆಪಾಡಿಗಾಗಿ ಬಂದು ವ್ಯಾಪಾರ ನಡೆಸುವರು ನಷ್ಟ ಅನುಭವಿಸುವುದನ್ನು ತಪ್ಪಿಸಬೇಕಿದೆ.

ಚರ್ಚಿಸಿ ತೀರ್ಮಾನ
ಸೋಮವಾರ ಸಂತೆಗೆ ಬರುವ ವ್ಯಾಪಾರಿಗಳು ಹೆದ್ದಾರಿ ಬದಿ ವಾಹನ ಇರಿಸಿ ಮಾರಾಟ ನಡೆಸುತ್ತಿರುವುದು ಗಮನಕ್ಕೆ ಬಂದ ತತ್‌ಕ್ಷಣ ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಸೂಕ್ತ ಸ್ಥಳವಕಾಶ ಒದಗಿಸುವ ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು.
-ಸುಧಾಕರ್‌ ಎಂ.ಎಚ್‌., ಪ.ಪಂ. ಮುಖ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next