Advertisement
ಬೆಳ್ಮಣ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಪೆರಲ್ ಪಾದೆ ಎಂಬಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಮಾಹಿತಿ ಕೇಂದ್ರವಾಗಿ ಕಾರ್ಯಾಚರಿಸುತ್ತಿತ್ತು. ಆದರೆ ಇದರ ಬಗ್ಗೆ ಇಲಾಖೆ, ಪಂಚಾಯತ್ ಹೊಂದಾಣಿಕೆ ಕೊರತೆಯಿಂದ ಕೇಂದ್ರ ನಿರ್ಲಕ್ಷಕ್ಕೆ ಒಳಗಾಯಿತು. ಪರಿಣಾಮ ಸುಮಾರು 10 ವರ್ಷದಿಂದ ಪಾಳುಬಿದ್ದಿದೆ.
ಬೆಳ್ಮಣ್, ನಂದಳಿಕೆ, ಸೂಡ ಸಹಿತ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಸಂಖ್ಯೆಯಲ್ಲಿ ಕೃಷಿಕರಿದ್ದು, ಕೃಷಿ ಮಾಹಿತಿ ಕೇಂದ್ರವನ್ನಾಗಿ ಮಾಡಬಹುದಿತ್ತು ಎಂಬುದು ಇಲ್ಲಿನವರ ಅನಿಸಿಕೆ. ಆದರೆ ಇದರ ನಿರ್ವಹಣೆಗೆ ಆಡಳಿತ ಮುಂದಾಗದೆ ಇರುವುದು ಕೃಷಿಕರ ಅಸಮಾಧಾನಕ್ಕೆ ಕಾರಣವಾಗಿದೆ. ಸರಕಾರ ಹೊಸ ಕಟ್ಟಡಗಳ ನಿರ್ಮಾಣಕ್ಕೆ ಕೋಟಿಗಟ್ಟಲೆ ಹಣ ಸುರಿಸುವ ಬದಲು ಇಂತಹ ಕಟ್ಟಡಗಳನ್ನು ಕಾಪಾಡಲು ಮನಸ್ಸು ಮಾಡಬೇಕಾಗಿದೆ ಎನ್ನುವುದೂ ನಾಗರಿಕರ ಆಶಯ.
Related Articles
ಕೃಷಿ ಇಲಾಖೆಗೆ ಸಂಬಂದಿಸಿದ ಕಟ್ಟಡ ಇದಾಗಿದ್ದು ನಿರ್ವಹಣೆಯ ಅಗತ್ಯವಿದೆ. ಈಗಾಗಲೇ ನಳ್ಳಿ ನೀರಿನ ಸಂಪರ್ಕವನ್ನು ಕಲ್ಪಿಸಿದ್ದೇವೆ ಮುಂದಿನ ದಿನಗಳಲ್ಲಿ ನಿರ್ವಹಣೆಯ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ.
-ಪ್ರಕಾಶ್, ಬೆಳ್ಮಣ್ ಗ್ರಾ.ಪಂ ಪಿಡಿಒ
Advertisement
ಇಲಾಖೆಯ ಉದಾಸೀನತೆಈ ಕಟ್ಟಡವೂ ಸುಂದರವಾಗಿದ್ದರೂ ಇಲಾಖೆ ಇಲ್ಲಿ ನಿರ್ವಹಣೆಯನ್ನು ಮಾಡುವಲ್ಲಿ ಉದಾಸೀನತೆ ತೋರಿಸುತ್ತಿದೆ. ಸರಿಯಾಗಿ ನಿರ್ವಹಣೆ ಮಾಡಿ ಕೃಷಿಕರ ಉಪಯೋಗಕ್ಕೆ ಬರುವಂತಾಗಲಿ.
-ಸಂದೀಪ್‌ಕುಮಾರ್, ಗ್ರಾಮಸ್ಥ