Advertisement
13 ಲಕ್ಷ ರೂ. ವೆಚ್ಚಬೆಳೆಯುತ್ತಿರುವ ಬೆಳ್ಮಣ್ ಪೇಟೆಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ. ವಾಹನ ಸವಾರರು ರಸ್ತೆಯ ಇಕ್ಕೆಲಗಳಲ್ಲಿ, ಬಸ್ಸು ನಿಲ್ದಾಣದಲ್ಲಿ ಪಾರ್ಕ್ ಮಾಡುತ್ತಿದ್ದರು. ಈ ಸಮಸ್ಯೆ ಮನಗಂಡ ಬೆಳ್ಮಣ್ ರೋಟರಿ ಸಂಸ್ಥೆಯ 2018-19 ನೇ ಸಾಲಿನ ಅಧ್ಯಕ್ಷ, ರನೀಶ್ ಆರ್.ಶೆಟ್ಟಿ ಸುಮಾರ್ 13 ಲಕ್ಷ ರೂ. ವೆಚ್ಚದಲ್ಲಿ ಸರಕಾರಿ ಪ.ಪೂ.ಕಾಲೇಜು ಎದರುಗಡೆ ಪಾರ್ಕಿಂಗ್ ಸೌಕರ್ಯದ ಯೋಜನೆ ಬಗ್ಗೆ ಚಿಂತಿಸಿದ್ದರು. ಅದರಂತೆ ಈಗ ಪಾರ್ಕಿಂಗ್ ಜಾಗ ನಿರ್ಮಾಣವಾಗಿದೆ.
ಈ ಕಾಮಗಾರಿಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್‌ರವರು 5 ಲಕ್ಷ ರೂ. ಅನುದಾನ, ಸ್ಥಳಿಯ ಗ್ರಾಮ ಪಂಚಾಯತ್ ವತಿಯಿಂದ 2 ಲಕ್ಷ ರೂ., ಅನಿವಾಸಿ ಭಾರತೀಯ ಉದ್ಯಮಿ ಆರ್ಥರ್ ರೊನಾಲ್ಡ್ ರವರು 1 ಲಕ್ಷ ರೂ. ನೀಡಿದ್ದಾರೆ ಉಳಿದ ಮೊತ್ತವನ್ನು ಸ್ಥಳೀಯ ದಾನಿಗಳ ನೆರವಿನಿಂದ ಹಾಗೂ ರೋಟರಿ ಸಂಸ್ಥೆ ಭರಿಸಲಾಗಿದೆ.
Related Articles
ಇದರೊಂದಿಗೆ ಪೇಟೆಯಿಂದ ಸರಕಾರಿ ಕಾಲೇಜು ವರೆಗೆ ಹೆದ್ದಾರಿಯಲ್ಲಿ ವಿಭಾಜಕ (ಫೆ„ಬರ್ ಪೋಲ್ ಸ್ಪ್ರಿಂಗ್‌ಪೋಸ್ಟ್) ವ್ಯವಸ್ಥೆಯನ್ನೂ ರೋಟರಿ ಸಂಸ್ಥೆ ಮಾಡಿದೆ. ಮುಂದಿನ ದಿನಗಳಲ್ಲಿ ಹಿಂದೂ ರುದ್ರ ಭೂಮಿ ನವೀಕರಣದ ಯೋಜನೆಯೂ ಸಂಸ್ಥೆಗಿದೆ.
Advertisement
ಅಭಿವೃದ್ಧಿಯ ಕನಸುಬೆಳ್ಮಣ್ಗೆ ಶಾಶ್ವತ ಕೊಡುಗೆ ನೀಡಬೇಕೆಂದು ಮನಸ್ಸು ಮಾಡಿದ್ದೆ. ಅದರಂತೆ ಎಲ್ಲರ ಸಹಕಾರದಿಂದ ಪಾರ್ಕಿಂಗ್ ವ್ಯವಸ್ಥೆ ನಿರ್ಮಾಣಗೊಳ್ಳಲು ಸಾಧ್ಯವಾಯಿತು. ಮುಂದೆಯೂ ಬೆಳ್ಮಣ್ ಪೇಟೆಯ ಅಭಿವೃದ್ಧಿಯ ಬಗ್ಗೆ ಹಲವು ಕನಸುಗಳಿವೆ.
– ರನೀಶ್ ಆರ್.ಶೆಟ್ಟಿ, ಬೆಳ್ಮಣ್ ರೋಟರಿ ಅಧ್ಯಕ್ಷ