ಬೆಳ್ಮಣ್: ನಾಲ್ಕುಸ್ಥಾನ ನಂದಳಿಕೆಯ ಶ್ರೀ ಮಹಾಲಿಂಗೇಶ್ವರ ದೇಗುಲದ ಶ್ರೀ ಉರಿಬ್ರಹ್ಮ, ಗಣಪತಿ, ವೀರಭದ್ರ, ನಂದಿಗೋಣ, ಸಿರಿಕುಮಾರ, ಅಬ್ಬಗ-ದಾರಗ, ಖಡೆಶ್ವರೀ, ರಕ್ತೇಶ್ವರೀ, ಚಾಮುಂಡೀ, ಅಣ್ಣಪ್ಪ, ಕ್ಷೇತ್ರಪಾಲ, ಭೂತರಾಜ, ಗಜಮಲ್ಲ, ಮಹಾ ನಾಗರಾಜಸ್ವಾಮಿ ಸಾನ್ನಿಧ್ಯದಲ್ಲಿ ಪ್ರಸಿದ್ಧ ಸಿರಿಜಾತ್ರೆ ಮಾ. 31ರಂದು ನಡೆಯಲಿದೆ.
700 ಯುವಕರ ತಂಡ
ಶಿಸ್ತಿನ ವ್ಯವಸ್ಥೆಗೆ ಹೆಸರಾದ ನಂದಳಿಕೆ ಸಿರಿಜಾತ್ರೆ ಈ ಬಾರಿಯೂ ಬರುವ ಭಕ್ತರಿಗೆ ಸಕಲ ವ್ಯವಸ್ಥೆಯನ್ನು ಕಲ್ಪಿಸಲು ಇಡೀ ನಂದಳಿಕೆ ಸಜ್ಜಾಗಿದ್ದು, ನಂದಳಿಕೆ ಸಿರಿಜಾತ್ರೆಗೆ ವಿಶೇಷವಾಗಿ ಮೆರುಗು ನೀಡುವ ಸುಮಾರು 700ಕ್ಕೂ ಅ ಧಿಕ ಸ್ವಯಂ ಸೇವಕರ ತಂಡ ಯಶಸ್ಸಿಗೆ ದುಡಿಯಲು ಸಜ್ಜಾಗಿದೆ.
ಮಾ. 30ರಂದು ಅಂಬೋಡಿ ಜಾತ್ರೆ, ಅಂಬೋಡಿ ಉತ್ಸವ ಬಲಿ ನಡೆಯಲಿದೆ. ಮಾ. 31ರಂದು ನಂದಳಿಕೆ ಅಯನೋತ್ಸವ ಸಿರಿ ಜಾತ್ರೆ ಮಹೋತ್ಸವ ನೆರವೇರಲಿದ್ದು, ಬೆಳಗ್ಗೆ 8ಕ್ಕೆ ಶ್ರೀ ಉರಿ ಬ್ರಹ್ಮರ ರಜತ ಪಾದುಕೆ, ಶ್ರೀ ಅಬ್ಬಗ ದಾರಗರ ಚೆನ್ನೆಮಣೆಗಳ ಸಾಲಂಕೃತ ಮೆರವಣಿಗೆ ಪ್ರಾಕ್ತಾನ ಪದ್ದತಿಯಂತೆ ಪರ್ಯಟಿಸಿ ಮಧ್ಯಾಹ್ನ ಶ್ರೀ ಆಲಡೆಯಲ್ಲಿ ಶ್ರೀ ಅಣ್ಣಪ್ಪ ದರ್ಶನ, ಹಸಿಮಡಲು ಚಪ್ಪರ ಕಟ್ಟೆಪೂಜೆ ಸೇವೆ, ಶ್ರೀ ದೇವರ ಮಹೋತ್ಸವ ಬಲಿ ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1ರಿಂದ ರಾತ್ರಿ 8.00ರ ವರೆಗೆ ಸಾರ್ವಜನಿಕ ಮಹಾ ಅನ್ನಸಂತರ್ಪಣೆ ನಡೆಯಲಿದೆ.
ರಾತ್ರಿ 9.30.ರಿಂದ ನಂದಳಿಕೆ ಚಾವಡಿ ಅರಮನೆಯಿಂದ ಶ್ರೀ ಹೆಗ್ಗಡೆ ಅವರ ಆಗಮನ ಪರಂಪರಗತ ಅದ್ದೂರಿ ಮೆರವಣಿಗೆ ನಡೆಯಲಿದೆ. ಈ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಕಲಾತಂಡಗಳು ಹಾಗೂ ಕೇರಳ ರಾಜ್ಯದ ಕಲಾತಂಡಗಳು ಭಾಗವಹಿಸಲಿವೆ. ರಾತ್ರಿ 10.30.ಕ್ಕೆ ಅಯನೋತ್ಸವ ಬಲಿ ವೈಭವೋಪೇತ ಕೆರೆದೀಪೋತ್ಸವ, ಕೆರೆದೀಪ ಕಟ್ಟೆ ಪೂಜೆ ಮಹೋತ್ಸವ ರಾತ್ರಿ 11ರಿಂದ ಸತ್ಯದ ಸಿರಿಗಳ ಮೂಲಕ್ಷೇತ್ರ ಶ್ರೀ ಆಲಡೆ ಸನ್ನಿ ಯಲ್ಲಿ ಶ್ರೀ ಸಿರಿ ಕುಮಾರ, ಅಬ್ಬಗ ದಾರಗ, ದರ್ಶನಾವೇಶ ಪೂರ್ವಕ ಸೂರ್ಯೋದಯದ ಪರ್ಯಂತ ಸಪ್ತ ಸತ್ಯದ ಸಿರಿಗಳ ನಂದಳಿಕೆ ಸಿರಿಜಾತ್ರೆ ಪ್ರಾಚೀನ ವೈಭವಗಳು ನಡೆಯಲಿವೆ.
ಎ. 1ರಂದು ಊರ ಅಯನೋತ್ಸವ, 2ರಂದು ಬಾಕಿಮಾರು ದೀಪೋತ್ಸವ, 3ರಂದು ಮೂಡು ಸವಾರಿ ಉತ್ಸವ, 4ರಂದು ಶ್ರೀ ಮನ್ಮಹಾರಥೋತ್ಸವ, 5ರಂದು ಕವಾಟೋದ್ಘಾಟನೆ, ಪಡು ಸವಾರಿ ಅವಭೃತ, ಧ್ವಜಾವರೋಹಣ, 6ರಂದು ಮಹಾಸಂಪ್ರೋಕ್ಷಣೆ, ಮಂಗಲ ಮಂತ್ರಾಕ್ಷತೆ ಹಾಗೂ 14ರಂದು ಸಾಮೂ ಹಿಕ ಶ್ರೀ ಶನಿಪೂಜಾ ಮಹೋತ್ಸವ ನಡೆಯಲಿದೆ ಎಂದು ಸುಹಾಸ್ ಹೆಗ್ಡೆ ತಿಳಿಸಿದ್ದಾರೆ.
ಸಿರಿಜಾತ್ರೆಯ ಆಕರ್ಷಣೆ
ಡೊಳ್ಳು ಕುಣಿತ, ವೀರಗಾಸೆ,ಬೆಳುYದುರೆ ಪ್ರದಕ್ಷಿಣೆ, ಶೃಂಗಾರ ಶೋಭಿತ ಚಾವಡಿ ಅರಮನೆ, ರಾಜ ಚಾವಡಿಯ ಪರಂಪರಾಗತ ಮೆರವಣಿಗೆ, ತಾಲೀಮು ರಂಗ, ಕೀಲು ಕುದುರೆ ಕರಗ ನೃತ್ಯ, ಸುಡುಮದ್ದು ಸಡಗರ, ಅಬ್ಬರದ ಚೆಂಡೆ ವಾದನ, ಢಕ್ಕೆ ಕನ್ನಿಕಾ ನರ್ತನ ಸೇವೆ, ಹಾಲು ಬೆಳದಿಂಗಳ ಪರಮ ಪ್ರಶಾಂತತೆಯಲ್ಲಿ ನಂದಳಿಕೆ ಸಿರಿಜಾತ್ರಾ ಪವೊìàತ್ಸವ ನಡೆಯಲಿದೆ.