Advertisement
ಕಾರಣವೇನೆಂದಿರಾ! ಮಳೆ ನೀರು ಹರಿಯುವ ಚರಂಡಿಯಲ್ಲಿ ಕೊಳಚೆ ನೀರು ಹರಿಯುತ್ತಿದ್ದು ದುರ್ನಾತ ಬೀರುತ್ತಿದೆ. ಇಲ್ಲಿನ ಅಂಗಡಿ, ಹೋಟೆಲ್ ಇತ್ಯಾದಿಗಳ ತ್ಯಾಜ್ಯ ನೀರು ನೇರ ಕಾಂಕ್ರೀಟ್ ಚರಂಡಿ ಸೇರುತ್ತಿವೆ. ಇದಕ್ಕೆ ಹಾಸುಗಲ್ಲು ಇದ್ದರೂ ವಾಸನೆ ಮಾತ್ರ ಸುತ್ತಲೂ ವ್ಯಾಪಿಸಿದೆ.
ಉದ್ದಿಮೆಗಳ ತ್ಯಾಜ್ಯ ನೀರು ಚರಂಡಿಗೆ ಹೋಗದಂತೆ ಪಿಟ್‌ಗಳನ್ನು ನಿರ್ಮಿಸುವಂತೆ ಪಂಚಾಯತ್ ಆದೇಶವಿದ್ದರೂ ಅದರ ಪಾಲನೆಯಾಗುತ್ತಿಲ್ಲ. ನಗರ ಪ್ರದೇಶದಲ್ಲಿ ಚರಂಡಿಗೆ ಹಾಸುಗಳಿದ್ದು ಮುಚ್ಚಿದ್ದರೆ, ಉಳಿದೆಡೆ ಇಲ್ಲ. ಇದರಿಂದ ಜನರಿಗೆ ಮೂಗುಮುಚ್ಚಿಕೊಂಡು ಓಡಾಡುವ ಸ್ಥಿತಿ ಒಂದೆಡೆಯಾದರೆ, ಸಾಂಕ್ರಾಮಿಕ ರೋಗ ಭೀತಿಯೂ ಹೆಚ್ಚಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿ ರವಿ. ಇತ್ತಿಚೆಗೆ ಚರಂಡಿಯಲ್ಲಿ ಪೈಪ್‌ಲೆ„ನ್ ಅಳವಡಿಕೆಗೆ ಕಾಮಗಾರಿ ಮಾಡಲಾಗಿದ್ದು, ಈ ಸಂದರ್ಭ ಹಾಸುಗಲ್ಲು ತೆರೆಯಲಾಗಿದೆ.ಆಗ ಚರಂಡಿ ತ್ಯಾಜ್ಯಮಯವಾಗಿರುವುದು ಗಮನಕ್ಕೆ ಬಂದಿದೆ.
Related Articles
ಚರಂಡಿ ಪಕ್ಕದಲ್ಲೇ ಬಸ್ ತಂಗುದಾಣ ವಿದ್ದು ಹಲವಾರು ಪ್ರಯಾಣಿಕರು ವಾಸನೆಯಲ್ಲೇ ಕಾಯುವಂತಾಗಿದೆ. ಆದ್ದರಿಂದ ತ್ಯಾಜ್ಯ ನೀರು ಹರಿಯುವುದನ್ನು ತಡೆಯಲು ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
Advertisement
ಸೊಳ್ಳೆ ಕಾಟರಾತಿ ವೇಳೆ ಇಲ್ಲಿ ಬಸ್ಸು ಕಾಯುವಂತಿಲ್ಲ. ವಾಸನೆಯ ಜತೆ ಸೊಳ್ಳೆಗಳ ಕಾಟವೂ ಹೆಚ್ಚಾಗಿದೆ. ಉದ್ದಿಮೆಗಳು ತ್ಯಾಜ್ಯ ನೀರನ್ನು ಚರಂಡಿಗೆ ಬಿಡುವ ಸಮಯವೂ ಇದೇ ಆಗಿದೆ. ಇದರಿಂದಾಗಿ ಪರಿಸರವೆಲ್ಲಾ ದುರ್ನಾತ ತುಂಬಿದೆ.
– ಸುರೇಶ್, ಗ್ರಾಮಸ್ಥ. ನೊಟೀಸ್ ಜಾರಿ
ಕೂಡಲೇ ಉದ್ದಿಮೆಗಳಿಗೆ ಪಿಡಿಒ ಮೂಲಕ ನೊಟೀಸ್ ಜಾರಿ ಮಾಡಲಾಗುವುದು. ಸ್ಪಂದಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು.
– ವಾರಿಜಾ, ಬೆಳ್ಮಣ್ ಗ್ರಾ.ಪಂ. ಅಧ್ಯಕ್ಷೆ