Advertisement
ಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ದೊಂಪತ್ತಡ್ಕದಲ್ಲಿ ಕಳೆದ 30 ವರ್ಷಗಳಿಂದ ಎಗ್ಗಿಲ್ಲದೆ ನಡೆಯುತ್ತಿರುವ ಕಗ್ಗಲ್ಲು ಕೋರೆ ಆಸುಪಾಸು ಪ್ರದೇಶಗಳಲ್ಲಿ ನೀರಿನ ಕ್ಷಾಮ, ಭೂ ಸವಕಳಿ ಉಂಟಾಗಿದೆ. ಪ್ರಾಕೃತಿಕ ಹಾಗೂ ಆರೋಗ್ಯ ಸಮಸ್ಯೆಗಳು ತಲೆದೋರಿವೆ. ಕೋರೆ ಪರವಾನಿಗೆ ಮುಗಿದ ನಂತರ ಮುಂದೆ ಪರವಾನಗಿ ನವೀಕರಿಸಬಾರದು ಎಂದು ಒತ್ತಾಯಿಸಿದೆ.
ಕೋರೆಯಲ್ಲಿ ಭಾರಿ ನ್ಪೋಟಕಗಳನ್ನು ಬಳಸಲಾಗುತ್ತಿದೆ. ಇದರಿಂದ, ಶಬ್ದ ಮಾಲಿನ್ಯ , ಭೂ ಕಂಪನ, ಭೂ ಕುಸಿತ, ಸಮೀಪದ ಮನೆ ಗೋಡೆಗಳಲ್ಲಿ ಬಿರುಕು ಉಂಟಾಗಿದ್ದು , ಸ್ಥಳೀಯರು ಹಾಗೂ ವಿದ್ಯಾರ್ಥಿಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ಗಮನ ಸೆಳೆದಿದೆ. ಬೆಳ್ಳೂರು, ಏತಡ್ಕ ಪರಿಸರ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಸ್ಥಳೀಯರು ಈ ಹಿಂದೆ ಭಾರಿ ಪ್ರತಿಭಟನೆ ನಡೆಸಿದ್ದರು. ಕಪ್ಪು ಕಲ್ಲು ಕೋರೆ ಮಾಲೀಕರು ಸ್ಥಳೀಯವಾಗಿ ಜನರ ಬಾಯಿ ಮುಚ್ಚಿಸಲು ಆಮಿಷ ಒಡ್ಡಿದ್ದು , ಹೋರಾಟದ ನೇತೃತ್ವ ವಹಿಸಿದ ಹಲವರಿಗೆ ಬೆದರಿಕೆ, ಹುಸಿ ಆಪಾದನೆ, ಸುಳ್ಳು ದೂರು ನೀಡುತ್ತಿರುವುದಾಗಿಯೂ ಹೇಳಲಾಗುತ್ತಿದೆ.
Related Articles
Advertisement
ಕಳೆದ ಅಕ್ಟೋಬರ್ 10 ರಂದು ಬೆಳ್ಳೂರು ಪಂಚಾಯಿತಿ ಕೋರೆಯ ಪರವಾನಿಗೆ ನವೀಕರಿಸದಿರಲು ಹಾಗೂ ರದ್ದುಗೊಳಿಸಲು ತೀರ್ಮಾನಿಸಿದ್ದರೂ ಕೆಲವೊಂದು ಕಾನೂನು ಅಡಚಣೆಗಳಿಂದ ಅದನ್ನು ಜಾರಿಗೆ ತರಲು ಸಾಧ್ಯವಾಗಿರಲಿಲ್ಲ .