Advertisement

ಕೋಸ್ಟಲ್ವುಡ್‌ಗೆ ಬಂದ ‘ಬೆಳ್ಳಿ ಹೆಜ್ಜೆ’

06:07 PM Aug 02, 2019 | Team Udayavani |

ಕರ್ನಾಟಕ ಚಲನಚಿತ್ರ ಅಕಾಡೆಮಿ ‘ಬೆಳ್ಳಿಹೆಜ್ಜೆ’ ಎಂಬ ಕಾರ್ಯಕ್ರಮವನ್ನು ಕನ್ನಡ ಚಿತ್ರರಂಗದಲ್ಲಿ ಮಾಡುತ್ತಾ ಬಂದಿದೆ. ಸಿನೆಮಾ ಸಾಧಕರೊಂದಿಗೆ ಮುಖಾಮುಖೀಯಾಗುವ ವಿನೂತನ ಕಾರ್ಯಕ್ರಮವಿದು. ಸದ್ಯ ತುಳು ಸಿನೆಮಾಗಳು ದೊಡ್ಡ ಮಟ್ಟದಲ್ಲಿ ಹೆಸರು ಮಾಡುತ್ತಿರುವ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಅಕಾಡೆಮಿ ‘ಬೆಳ್ಳಿ ಹೆಜ್ಜೆ’ಯನ್ನು ಕೋಸ್ಟಲ್ವುಡ್‌ಗೆ ವಿಸ್ತರಿಸಿದೆ. ಇದರಂತೆ ಮಂಗಳೂರು ವಿ.ವಿ. ಕಾಲೇಜಿನ ರವೀಂದ್ರ ಕಲಾಭವನದಲ್ಲಿ ವಿಶೇಷ ಕಾರ್ಯಕ್ರಮವನ್ನು ಚಲನಚಿತ್ರ ಅಕಾಡೆಮಿ ಆಯೋಜಿಸಿದೆ. ತುಳು ಚಲನಚಿತ್ರ ರಂಗದ ಆದ್ಯ ಪ್ರವರ್ತಕರಲ್ಲಿ ಒಬ್ಬರಾದ ಡಾ|ರಿಚರ್ಡ್‌ ಕ್ಯಾಸ್ಟಲಿನೊ ಅವರ ಜತೆಗೆ ಬೆಳ್ಳಿಹೆಜ್ಜೆ ಕಾರ್ಯಕ್ರಮ ನಡೆಯಲಿದೆ. ಬಂಗಾರ್‌ ಪಟ್ಲೆರ್‌, ನ್ಯಾಯೊಗಾದ್‌ ಎನ್ನ ಬದ್‌ಕ್‌, ಸೆಪ್ಟಂಬರ್‌ 8, ಬೊಗ್ಸಾಣೆ ಸೇರಿದಂತೆ ಹಲವು ಸಿನೆಮಾಗಳ ಮೂಲಕ ಮನೆಮಾತಾದವರು ಡಾ|ರಿಚರ್ಡ್‌ ಕ್ಯಾಸ್ಟಲಿನೋ. ಡಾ|ನಾಗತಿಹಳ್ಳಿ ಚಂದ್ರಶೇಖರ್‌, ಪ್ರೊ|ಪಿ.ಎಸ್‌ಯಡಪಡಿತ್ತಾಯ, ಡಾ|ಬಿ.ಎ.ವಿವೇಕ ರೈ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next